ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗ್ರ್ಯಾಮಿ ಪ್ರಶಸ್ತಿ ಗೆದ್ದ ಸಂಗೀತಗಾರ್ತಿ ಚಂದ್ರಿಕಾ ಟಂಡನ್ ರವರಿಗೆ ಪ್ರಧಾನಮಂತ್ರಿಯಿಂದ ಅಭಿನಂದನೆ

प्रविष्टि तिथि: 03 FEB 2025 2:32PM by PIB Bengaluru

ತ್ರಿವೇಣಿ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿ ಪಡೆದ ಸಂಗೀತಗಾರ್ತಿ ಚಂದ್ರಿಕಾ ಟಂಡನ್ ಅವರನ್ನು ಪ್ರಧಾನಮಂತ್ರಿಯವರು ಇಂದು ಅಭಿನಂದಿಸಿದ್ದಾರೆ. ಭಾರತೀಯ ಸಂಸ್ಕೃತಿಯ ಬಗ್ಗೆ ಅವರಿಗಿರುವ ಉತ್ಸಾಹ ಹಾಗೂ ಉದ್ಯಮಿಯಾಗಿ, ಲೋಕೋಪಕಾರಿ ಮತ್ತು ಸಂಗೀತಗಾರರಾಗಿ ಚಂದ್ರಿಕಾ ಟಂಡನ್ ಅವರ ಸಾಧನೆಗಳನ್ನು ಪ್ರಧಾನಿಯವರು ಶ್ಲಾಘಿಸಿದ್ದಾರೆ.

Xನಲ್ಲಿ ಪೋಸ್ಟ್ ಮಾಡಿ, ಪ್ರಧಾನಿಯವರು:

"ತ್ರಿವೇಣಿ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿ ಗೆದ್ದ @chandrikatandon ಅವರಿಗೆ ಅಭಿನಂದನೆಗಳು. ಉದ್ಯಮಿಯಾಗಿ, ಲೋಕೋಪಕಾರಿಯಾಗಿ ಮತ್ತು ಸಂಗೀತಗಾರರಾಗಿ ಅವರ ಸಾಧನೆಗಳ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ! ಅವರು ಭಾರತೀಯ ಸಂಸ್ಕೃತಿಯ ಬಗ್ಗೆ ಹೇಗೆ ಆಕರ್ಷಿತರಾಗಿ ಅದನ್ನು ಜನಪ್ರಿಯಗೊಳಿಸಲು ಕೆಲಸ ಮಾಡುತ್ತಿದ್ದಾರೆ ಎಂಬುದು ಶ್ಲಾಘನೀಯ. ಅವರು ಹಲವಾರು ಜನರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ.

2023ರಲ್ಲಿ ನ್ಯೂಯಾರ್ಕ್ ನಲ್ಲಿ ಅವರನ್ನು ಭೇಟಿಯಾಗಿದ್ದನ್ನು ನಾನು ಸ್ನೇಹಪೂರ್ವಕವಾಗಿ ನೆನಪಿಸಿಕೊಳ್ಳುತ್ತೇನೆ" ಎಂದು ಬರೆದಿದ್ದಾರೆ.

 

 

*****


(रिलीज़ आईडी: 2099141) आगंतुक पटल : 71
इस विज्ञप्ति को इन भाषाओं में पढ़ें: Khasi , English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam