ಹಣಕಾಸು ಸಚಿವಾಲಯ
ಜಲ ಜೀವನ್ ಮಿಷನ್‌ಗಾಗಿ ಬಜೆಟ್ ಮೊತ್ತ ರೂ.67,000 ಕೋಟಿಗೆ ಹೆಚ್ಚಳ
ಜಲ ಜೀವನ್ ಮಿಷನ್ 2028 ರವರೆಗೆ ವಿಸ್ತರಣೆ
ಮುಂದಿನ ಮೂರು ವರ್ಷಗಳಲ್ಲಿ ಶೇಕಡ 100 ರಷ್ಟು ವ್ಯಾಪ್ತಿ ಸಾಧಿಸುವ ಉದ್ದೇಶ
प्रविष्टि तिथि:
01 FEB 2025 1:00PM by PIB Bengaluru
ಜಲ ಜೀವನ್ ಮಿಷನ್‌ಗೆ ಒಟ್ಟು ಬಜೆಟ್ ವೆಚ್ಚವನ್ನು 67,000 ಕೋಟಿ ರೂ.ಗೆ ಹೆಚ್ಚಿಸಲಾಗಿದೆ ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಇಂದು ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2025-26 ಅನ್ನು ಮಂಡಿಸುತ್ತಾ ಹೇಳಿದ್ದಾರೆ. ಈ ಮಿಷನ್ ಅನ್ನು 2028 ರವರೆಗೆ ವಿಸ್ತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
2019 ರಿಂದ ಭಾರತದ ಗ್ರಾಮೀಣ ಜನಸಂಖ್ಯೆಯ ಶೇಕಡ 80 ರಷ್ಟನ್ನು ಪ್ರತಿನಿಧಿಸುವ 15 ಕೋಟಿ ಕುಟುಂಬಗಳು ಜಲ ಜೀವನ್ ಮಿಷನ್‌ನಿಂದ ಪ್ರಯೋಜನ ಪಡೆದಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇದರಡಿಯಲ್ಲಿ ಕುಡಿಯುವ ನಲ್ಲಿ ನೀರು ಸಂಪರ್ಕ ಒದಗಿಸಲಾಗಿದೆ ಮತ್ತು ಮುಂದಿನ ಮೂರು ವರ್ಷಗಳಲ್ಲಿ ಶೇಕಡ 100 ರಷ್ಟು ವ್ಯಾಪ್ತಿ ಅಂದರೆ ಎಲ್ಲರಿಗೂ ನಲ್ಲಿ ನೀರು ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ ಎಂದು ಶ್ರೀಮತಿ. ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮೂಲಸೌಕರ್ಯಗಳ ಗುಣಮಟ್ಟ ಮತ್ತು "ಜನ್ ಭಾಗಿಧಾರಿ" ಮೂಲಕ ಗ್ರಾಮೀಣ ಕೊಳವೆ ನೀರು ಸರಬರಾಜು ಯೋಜನೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಮೇಲೆ ಜಲ ಜೀವನ್ ಮಿಷನ್ ಗಮನಹರಿಸಲಿದೆ. ಸುಸ್ಥಿರತೆ ಮತ್ತು ನಾಗರಿಕ-ಕೇಂದ್ರಿತ ಜಲ ಸೇವೆ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಪ್ರತ್ಯೇಕ ತಿಳುವಳಿಕಾ ಒಪ್ಪಂದಗಳಿಗೆ ಸಹಿ ಹಾಕಲಾಗುವುದು ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.
https://pib.gov.in/PressReleasePage.aspx?PRID=2098651
*****
(रिलीज़ आईडी: 2098672)
आगंतुक पटल : 111
इस विज्ञप्ति को इन भाषाओं में पढ़ें:
Assamese
,
English
,
Urdu
,
Marathi
,
हिन्दी
,
Nepali
,
Bengali
,
Punjabi
,
Gujarati
,
Odia
,
Tamil
,
Telugu
,
Malayalam