ಹಣಕಾಸು ಸಚಿವಾಲಯ
azadi ka amrit mahotsav

ಹೊಸ ತೆರಿಗೆ ಪದ್ಧತಿಯಡಿ 12 ಲಕ್ಷ ರೂಪಾಯಿವರೆಗಿನ ವಾರ್ಷಿಕ ಆದಾಯಕ್ಕೆ ಯಾವುದೇ ಆದಾಯ ತೆರಿಗೆ ಇಲ್ಲ 


12.75 ಲಕ್ಷ ರೂಪಾಯಿವರೆಗೆ ವೇತನ ಪಡೆಯುವವರಿಗೆ ತೆರಿಗೆ ಪ್ರಮಾಣಿತ ಕಡಿತ ರೂ. 75,000

2025-26 ರ ಕೇಂದ್ರ ಬಜೆಟ್ ನಲ್ಲಿ ಎಲ್ಲಾ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತೆ ಆದಾಯ ತೆರಿಗೆ ಸ್ಲ್ಯಾಬ್‌ಗಳು ಮತ್ತು ದರಗಳಲ್ಲಿ ಬದಲಾವಣೆಗಳನ್ನು ತರುತ್ತದೆ

ಮಧ್ಯಮ ವರ್ಗದವರಿಗೆ ಗಣನೀಯ ತೆರಿಗೆ ಪರಿಹಾರ ನೀಡುವ ತೆರಿಗೆ ಸ್ಲ್ಯಾಬ್ ದರ ಕಡಿತ ಮತ್ತು ಮರುಪಾವತಿಗಳಿಂದಾಗಿ ಗೃಹ ಬಳಕೆ ವೆಚ್ಚ ಮತ್ತು ಹೂಡಿಕೆ ಹೆಚ್ಚಾಗಲಿದೆ

Posted On: 01 FEB 2025 1:28PM by PIB Bengaluru

"ಮೊದಲು ನಂಬಬೇಕು, ನಂತರ ಪರಿಶೀಲಿಸಬೇಕು" ಎಂಬ ತತ್ವದಲ್ಲಿ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತಾ 2025-26ರ ಕೇಂದ್ರ ಬಜೆಟ್ ಮಧ್ಯಮ ವರ್ಗದವರಲ್ಲಿ ನಂಬಿಕೆಯನ್ನು ಹುಟ್ಟುಹಾಕಿದೆ ಮತ್ತು ಸಾಮಾನ್ಯ ತೆರಿಗೆ ಪಾವತಿದಾರರಿಗೆ ತೆರಿಗೆ ಹೊರೆಯಲ್ಲಿ ಪರಿಹಾರ ನೀಡುವ ಪ್ರವೃತ್ತಿಯನ್ನು ಮುಂದುವರೆಸಿದೆ. ಸಂಸತ್ತಿನಲ್ಲಿಂದು ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಎಲ್ಲಾ ತೆರಿಗೆ ಪಾವತಿದಾರರಿಗೆ ಅನುಕೂಲವಾಗುವಂತೆ ತೆರಿಗೆ ಸ್ಲ್ಯಾಬ್‌ಗಳು ಮತ್ತು ದರಗಳಲ್ಲಿ ಸಮಗ್ರ ಬದಲಾವಣೆಯನ್ನು ಪ್ರಸ್ತಾಪಿಸಿದರು.

ಶುಭ ಸುದ್ದಿ ನೀಡಿರುವ ಹಣಕಾಸು ಸಚಿವರು ಹೊಸ ತೆರಿಗೆ ಪದ್ಧತಿಯಡಿ 12 ಲಕ್ಷ ರೂಪಾಯಿವರೆಗೆ ವಾರ್ಷಿಕ ಆದಾಯಕ್ಕೆ ಯಾವುದೇ (ಅಂದರೆ ಬಂಡವಾಳ ಲಾಭದಂತಹ ವಿಶೇಷ ದರದ ಆದಾಯವನ್ನು ಹೊರತುಪಡಿಸಿ ತಿಂಗಳಿಗೆ ಸರಾಸರಿ ರೂ. 1 ಲಕ್ಷ ಆದಾಯ) ಆದಾಯ ತೆರಿಗೆ ಇಲ್ಲ. 12.75 ಲಕ್ಷ ರೂಪಾಯಿವರೆಗೆ ವೇತನ ಪಡೆಯುವವರಿಗೆ ತೆರಿಗೆ ಪ್ರಮಾಣಿತ ಕಡಿತ ರೂ. 75,000 ರೂಪಾಯಿ ಆಗಿದೆ. ಸ್ಲ್ಯಾಬ್ ದರ ಕಡಿತದಿಂದಾಗಿ ದೊರೆಯುವ ಪ್ರಯೋಜನದ ಜೊತೆಗೆ ತೆರಿಗೆ ರಿಯಾಯಿತಿಯನ್ನು ನೀಡಲಾಗುತ್ತಿದ್ದು, ಇದರಿಂದ ಅವರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಹೇಳಿದರು.

"ಹೊಸ ರಚನೆಯು ಮಧ್ಯಮ ವರ್ಗದವರ ತೆರಿಗೆಗಳನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಮತ್ತು ಅವರ ಕೈಯಲ್ಲಿ ಹೆಚ್ಚಿನ ಹಣವನ್ನು ಉಳಿಸುತ್ತದೆ, ಮನೆಯ ಬಳಕೆ, ಉಳಿತಾಯ ಮತ್ತು ಹೂಡಿಕೆಯನ್ನು ಹೆಚ್ಚಿಸುತ್ತದೆ" ಎಂದು ಶ್ರೀಮತಿ ಸೀತಾರಾಮನ್ ಹೇಳಿದರು. ಹೊಸ ತೆರಿಗೆ ಪದ್ಧತಿಯಲ್ಲಿ, ಹಣಕಾಸು ಸಚಿವರು ತೆರಿಗೆ ದರ ರಚನೆಯನ್ನು ಈ ಕೆಳಗಿನಂತೆ ಪರಿಷ್ಕರಿಸಲು ಪ್ರಸ್ತಾಪಿಸಿದ್ದಾರೆ. 

0-4 ಲಕ್ಷ ರೂಪಾಯಿ

ತೆರಿಗೆ ಇಲ್ಲ

4-8 ಲಕ್ಷ ರೂಪಾಯಿ

ಶೇ 5 ರಷ್ಟು

8-12 ಲಕ್ಷ ರೂಪಾಯಿ

ಶೇ 10 ರಷ್ಟು

12-16 ಲಕ್ಷ ರೂಪಾಯಿ

ಶೇ 15 ರಷ್ಟು

16-20 ಲಕ್ಷ ರೂಪಾಯಿ

ಶೇ 20 ರಷ್ಟು

20- 24 ಲಕ್ಷ ರೂಪಾಯಿ

ಶೇ 25 ರಷ್ಟು

24 ಲಕ್ಷ ರೂಪಾಯಿ ಮೇಲ್ಪಟ್ಟು

ಶೇ 30 ರಷ್ಟು

 

 

 

 

 

 

 

 

 

 

 

 

ವಿವಿಧ ಆದಾಯ ಹಂತಗಳಲ್ಲಿನ ಸ್ಲ್ಯಾಬ್ ದರ ಬದಲಾವಣೆಗಳು ಮತ್ತು ರಿಯಾಯಿತಿಗಳ ಒಟ್ಟು ತೆರಿಗೆ ಪ್ರಯೋಜನವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

Tax Analysis.PNG

ವಿಕಸಿತ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸುವ ಪ್ರಮುಖ ಸುಧಾರಣೆಗಳಲ್ಲಿ ತೆರಿಗೆ ಸುಧಾರಣೆಗಳು ಒಂದೆಂದು ಒತ್ತಿ ಹೇಳಿರುವ ಶ್ರೀಮತಿ ಸೀತಾರಾಮನ್ ಅವರು, ಹೊಸ ಆದಾಯ ತೆರಿಗೆ ಮಸೂದೆಯು 'ನ್ಯಾಯ'ದ ಸ್ಫೂರ್ತಿಯನ್ನು ಮುಂದಕ್ಕೆ ಕೊಂಡೊಯ್ಯುತ್ತದೆ ಎಂದರು. ಹೊಸ ಪದ್ಧತಿಯು ತೆರಿಗೆದಾರರು ತೆರಿಗೆ ಆಡಳಿತವನ್ನು ಅರ್ಥಮಾಡಿಕೊಳ್ಳಲು ಸರಳವಾಗಿರುತ್ತದೆ, ಇದು ತೆರಿಗೆ ಖಚಿತತೆಗೆ ಮತ್ತು ವ್ಯಾಜ್ಯಗಳನ್ನು ತಗ್ಗಿಸಲು ಕಾರಣವಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ತಿರುಕ್ಕುರಲ್‌ನ 542ನೇ ಶ್ಲೋಕವನ್ನು ಹಣಕಾಸು ಸಚಿವರು ಉಲ್ಲೇಖಿಸಿ, "ಜೀವರಾಶಿಗಳು ಮಳೆಯನ್ನು ನಿರೀಕ್ಷಿಸಿ ಬದುಕುವಂತೆಯೇ, ನಾಗರಿಕರು ಉತ್ತಮ ಆಡಳಿತವನ್ನು ನಿರೀಕ್ಷಿಸಿ ಬದುಕುತ್ತಾರೆ" ಎಂದು ಹೇಳಿದ್ದಾರೆ. ಸುಧಾರಣೆಗಳು ಜನರು ಮತ್ತು ಆರ್ಥಿಕತೆಗೆ ಉತ್ತಮ ಆಡಳಿತವನ್ನು ಸಾಧಿಸುವ ಒಂದು ಸಾಧನವಾಗಿದೆ. ಉತ್ತಮ ಆಡಳಿತ ಮುಖ್ಯವಾಗಿ ಸ್ಪಂದಿಸುವಿಕೆಯನ್ನು ಒಳಗೊಂಡಿರುತ್ತದೆ. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಸರ್ಕಾರ ನಮ್ಮ ನಾಗರಿಕರು ವ್ಯಕ್ತಪಡಿಸಿದ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹರಿಸಲು ಹೇಗೆ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ತೆರಿಗೆ ಪ್ರಸ್ತಾಪಗಳು ವಿವರಿಸುತ್ತವೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು.

 

*****


(Release ID: 2098606) Visitor Counter : 36