ಹಣಕಾಸು ಸಚಿವಾಲಯ
azadi ka amrit mahotsav

ಗ್ರಾಮೀಣ ಆರ್ಥಿಕತೆಗೆ ವೇಗವರ್ಧಕವಾಗಿ ಭಾರತೀಯ ಅಂಚೆ ಸೇವೆಗಳು ಕಾರ್ಯನಿರ್ವಹಿಸಲಿವೆ: ಬಜೆಟ್ 2025-26


ಭಾರತೀಯ ಅಂಚೆ ಸೇವೆಗಳನ್ನು ವಿಸ್ತರಿಸಲಾಗುವುದು ಇದರಿಂದ ಸೂಕ್ಷ್ಮ ಉದ್ಯಮಗಳಿಗೆ ಡಿ.ಬಿ.ಟಿ, ಕ್ರೆಡಿಟ್ ಸೇವೆಗಳು, ವಿಮೆ ಸೇರಿದಂತೆ ಇತರ ಸೇವೆಗಳು ಲಭ್ಯವಾಗುತ್ತವೆ

ವಿಶ್ವಕರ್ಮರು, ಮಹಿಳೆಯರು, ಸ್ವಸಹಾಯ ಗುಂಪುಗಳು, ಎಂ.ಎಸ್.ಎಂ.ಇ.ಗಳು ಇತ್ಯಾದಿ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಭಾರತೀಯ ಅಂಚೆ ಸೇವೆಯನ್ನು ದೊಡ್ಡ ಸಾರ್ವಜನಿಕ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ಪರಿವರ್ತಿಸಲಾಗುವುದು

Posted On: 01 FEB 2025 12:57PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2025-26ರ ಬಜೆಟ್ ಅನ್ನು ಮಂಡಿಸುತ್ತಾ, “1.5 ಲಕ್ಷ ಗ್ರಾಮೀಣ ಅಂಚೆ ಕಚೇರಿಗಳನ್ನು ಹೊಂದಿರುವ “ಭಾರತೀಯ ಅಂಚೆ (ಇಂಡಿಯಾ ಪೋಸ್ಟ್)” ಅನ್ನು “ಇಂಡಿಯಾ ಪೋಸ್ಟ್ ಪಾವತಿ ಬ್ಯಾಂಕ್” ಮತ್ತು 2.4 ಲಕ್ಷ “ಅಂಚೆ(ಡಾಕ್) ಸೇವಕ”ರ ವಿಶಾಲ ಪೂರಕ ಸಂಪರ್ಕ ಜಾಲವನ್ನು  ಗ್ರಾಮೀಣ ಆರ್ಥಿಕತೆಗೆ ವೇಗವರ್ಧಕವಾಗಿ ಕಾರ್ಯನಿರ್ವಹಿಸಲು ಮರುಸ್ಥಾಪಿಸಲಾಗುವುದು” ಎಂದು ಹೇಳಿದರು.

“ಭಾರತ ಅಂಚೆಯ ನೂತನ “ವಿಸ್ತೃತ ಸೇವೆ”ಗಳ ವ್ಯಾಪ್ತಿಯು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ” ಎಂದು ಕೇಂದ್ರ ಹಣಕಾಸು ಸಚಿವರು ಬಜೆಟ್ 2025 ರಲ್ಲಿ ಪ್ರಸ್ತಾಪಿಸಿದರು:

1) ಗ್ರಾಮೀಣ ಸಮುದಾಯ ಕೇಂದ್ರ ಸಹ-ಸ್ಥಳ;
2) ಸಾಂಸ್ಥಿಕ ಖಾತೆ ಸೇವೆಗಳು;
3) ಡಿ.ಬಿ.ಟಿ., ನಗದು ಪಾವತಿ ಮತ್ತು ಇ.ಎಂ.ಐ. ಸ್ವೀಕಾರ;
4) ಸೂಕ್ಷ್ಮ ಉದ್ಯಮಗಳಿಗೆ ಕ್ರೆಡಿಟ್ ಸೇವೆಗಳು;
5) ವಿಮೆ; ಮತ್ತು
6) ನೆರವಿನ ಡಿಜಿಟಲ್ ಸೇವೆಗಳು.

“ಭಾರತ ಅಂಚೆಯನ್ನು ದೊಡ್ಡ ಸಾರ್ವಜನಿಕ ಸಾಗಣೆ ( ಲಾಜಿಸ್ಟಿಕ್ಸ್ ) ಸಂಸ್ಥೆಯಾಗಿ ಪರಿವರ್ತಿಸಲಾಗುವುದು” ಎಂದು ಶ್ರೀಮತಿ ಸೀತಾರಾಮನ್ ಹೇಳಿದರು. ಇದು ವಿಶ್ವಕರ್ಮರು, ನವೋದ್ಯಮಿಗಳು, ಮಹಿಳೆಯರು, ಸ್ವಸಹಾಯ ಗುಂಪುಗಳು, ಎಂ.ಎಸ್.ಎಂ.ಇ.ಗಳು ಮತ್ತು ದೊಡ್ಡ ವ್ಯಾಪಾರ ಸಂಸ್ಥೆಗಳು ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸುತ್ತದೆ.

“ಗ್ರಾಮೀಣ ಪ್ರದೇಶಗಳಲ್ಲಿ “ಭಾರತ ಅಂಚೆ ಪಾವತಿ ಬ್ಯಾಂಕ್“ ನ ಸೇವೆಗಳನ್ನು ಇನ್ನೂ ಉತ್ತಮಗೊಳಿಸಲಾಗುವುದು ಹಾಗೂ ಆಳಗೊಳಿಸಲಾಗುವುದು ಮತ್ತು ವಿಸ್ತರಿಸಲಾಗುವುದು” ಎಂದು ಕೇಂದ್ರ ಸಚಿವರು ಹೇಳಿದರು.

 

*****


(Release ID: 2098533) Visitor Counter : 32