ಹಣಕಾಸು ಸಚಿವಾಲಯ
azadi ka amrit mahotsav

ಸಣ್ಣ ಮಾಡ್ಯುಲರ್‌ ರಿಯಾಕ್ಟರ್‌ಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪರಮಾಣು ಶಕ್ತಿ ಮಿಷನ್‌ (ಎಸ್‌ಎಂಆರ್‌) ಸ್ಥಾಪಿಸಲಾಗುವುದು: ಬಜೆಟ್‌ 2025-26


2033ರ ವೇಳೆಗೆ ಕನಿಷ್ಠ 5 ದೇಶೀಯವಾಗಿ ಅಭಿವೃದ್ಧಿಪಡಿಸಿದ ಎಸ್‌ಎಂಆರ್‌ಎಸ್‌ಗಳು ಕಾರ್ಯರೂಪಕ್ಕೆ ಬರಲಿವೆ

Posted On: 01 FEB 2025 12:58PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್‌ ಅವರು ಇಂದು ಸಂಸತ್ತಿನಲ್ಲಿ 2025-2026ರ ಬಜೆಟ್‌ ಮಂಡಿಸುವಾಗ, ಸಣ್ಣ ಮಾಡ್ಯುಲರ್‌ ರಿಯಾಕ್ಟರ್‌ ಗಳ (ಎಸ್‌ಎಂಆರ್‌) ಸಂಶೋಧನೆ ಮತ್ತು ಅಭಿವೃದ್ಧಿಗಾಗಿ 20,000 ಕೋಟಿ ರೂ.ಗಳ ವೆಚ್ಚದಲ್ಲಿ ಪರಮಾಣು ಶಕ್ತಿ ಮಿಷನ್‌ ಅನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. 2033ರ ವೇಳೆಗೆ ಕನಿಷ್ಠ 5 ದೇಶೀಯವಾಗಿ ಅಭಿವೃದ್ಧಿಪಡಿಸಿದ ಎಸ್‌ಎಂಆರ್‌ಗಳು ಕಾರ್ಯರೂಪಕ್ಕೆ ಬರಲಿವೆ ಎಂದು ಅವರು ಮಾಹಿತಿ ನೀಡಿದರು.

ನಮ್ಮ ಇಂಧನ ಪರಿವರ್ತನೆಯ ಪ್ರಯತ್ನಗಳಿಗೆ 2047ರ ವೇಳೆಗೆ ಕನಿಷ್ಠ 100 ಗಿಗಾವ್ಯಾಟ್‌ ಪರಮಾಣು ಶಕ್ತಿಯ ಅಭಿವೃದ್ಧಿ ಅತ್ಯಗತ್ಯ ಎಂದು ಶ್ರೀಮತಿ ಸೀತಾರಾಮನ್‌ ಒತ್ತಿ ಹೇಳಿದರು. ಈ ಗುರಿಯತ್ತ ಖಾಸಗಿ ವಲಯದ ಸಕ್ರಿಯ ಸಹಭಾಗಿತ್ವಕ್ಕಾಗಿ, ಪರಮಾಣು ಶಕ್ತಿ ಕಾಯ್ದೆ ಮತ್ತು ಪರಮಾಣು ಹಾನಿಯ ನಾಗರಿಕ ಹೊಣೆಗಾರಿಕೆ ಕಾಯ್ದೆಗೆ ತಿದ್ದುಪಡಿಗಳನ್ನು ಕೈಗೊಳ್ಳಲಾಗುವುದು.

ವಿದ್ಯುತ್‌ ವಿತರಣಾ ಸುಧಾರಣೆಗಳು ಮತ್ತು ಅಂತರ-ರಾಜ್ಯ ಪ್ರಸರಣ ಸಾಮರ್ಥ್ಯ‌ವನ್ನು ಹೆಚ್ಚಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಬಜೆಟ್‌ ಪ್ರಸ್ತಾಪಿಸಿದೆ. ಇದು ವಿದ್ಯುತ್‌ ಕಂಪನಿಗಳ ಆರ್ಥಿಕ ಆರೋಗ್ಯ ಮತ್ತು ಸಾಮರ್ಥ್ಯ‌ವನ್ನು ಸುಧಾರಿಸುತ್ತದೆ. ಈ ಸುಧಾರಣೆಗಳ ಆಧಾರದ ಮೇಲೆ ರಾಜ್ಯಗಳಿಗೆ ಜಿಎಸ್‌ಡಿಪಿಯ ಶೇಕಡ 0.5 ರಷ್ಟು ಹೆಚ್ಚುವರಿ ಸಾಲ ಪಡೆಯಲು ಅವಕಾಶ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

 

*****


(Release ID: 2098473) Visitor Counter : 35