ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಐತಿಹಾಸಿಕ 100ನೇ ಉಡಾವಣೆಗಾಗಿ ಇಸ್ರೋವನ್ನು ಅಭಿನಂದಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 29 JAN 2025 6:57PM by PIB Bengaluru

ಐತಿಹಾಸಿಕ 100ನೇ ಉಡಾವಣೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ವನ್ನು ಅಭಿನಂದಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, “ಇದು ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್‌ ಗಳ ದೂರದೃಷ್ಟಿ, ಸಮರ್ಪಣೆ ಮತ್ತು ಬದ್ಧತೆಯನ್ನು ವಿವರಿಸುವ ಅದ್ಭುತ ಮೈಲಿಗಲ್ಲಾಗಿದೆ” ಎಂದು ಹೇಳಿದರು.

ಭಾರತದ ಬಾಹ್ಯಾಕಾಶ ಯಾನದಲ್ಲಿ ಖಾಸಗಿ ವಲಯದ ಹೆಚ್ಚುತ್ತಿರುವ ಪಾತ್ರವನ್ನು ವಿವರಿಸುತ್ತಾ ಪ್ರಧಾನಮಂತ್ರಿಯವರು, “ರಾಷ್ಟ್ರವು ಬಾಹ್ಯಾಕಾಶ ಪರಿಶೋಧನೆಯಲ್ಲಿ ಹೊಸ ಎತ್ತರವನ್ನು ಸಾಧಿಸುವುದನ್ನು ಮುಂದುವರಿಸುತ್ತದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಎಕ್ಸ್‌ ತಾಣದಲ್ಲಿ ಪ್ರಧಾನಮಂತ್ರಿಯವರು ಈ ರೀತಿ ಸಂದೇಶ ಹಂಚಿಕೊಂಡಿದ್ದಾರೆ;

"ಐತಿಹಾಸಿಕ 100 ನೇ ಉಡಾವಣೆಗಾಗಿ @isro ಗೆ ಅಭಿನಂದನೆಗಳು!

ಈ ಅದ್ಭುತ ಮೈಲಿಗಲ್ಲು, ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್‌ ಗಳ ದೂರದೃಷ್ಟಿ, ಸಮರ್ಪಣೆ ಮತ್ತು ಬದ್ಧತೆಯನ್ನು ವಿವರಿಸುತ್ತದೆ.

ಖಾಸಗಿ ವಲಯವು ಕೈಜೋಡಿಸುವುದರೊಂದಿಗೆ, ಭಾರತದ ಬಾಹ್ಯಾಕಾಶ ಪಯಣವು ಹೊಸ ಎತ್ತರವನ್ನು ತಲುಪುತ್ತಿದೆ.”

 

 

*****


(ಪ್ರಕಟಣೆ ಐ.ಡಿ.: 2097449) ವಿಸಿಟರ್ ಕೌಂಟರ್ : 66