ವಾರ್ತಾ ಮತ್ತು ಪ್ರಸಾರ ಸಚಿವಾಲಯ
76ರಲ್ಲಿ 76: ವೇವ್ಸ್ ಕಾಮಿಕ್ಸ್ ಕ್ರಿಯೇಟರ್ ಚಾಂಪಿಯನ್ ಶಿಪ್ ನೊಂದಿಗೆ ಭಾರತದ ಸೃಜನಶೀಲ ವೈವಿಧ್ಯತೆಯ ಆಚರಣೆ
76 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸವಾಲಿನ 76 ಸೆಮಿಫೈನಲಿಸ್ಟ್ಗಳನ್ನು ಘೋಷಿಸಲಾಯಿತು; 40 ಹವ್ಯಾಸಿ ಸೃಷ್ಟಿಕರ್ತರು, 30 ವೃತ್ತಿಪರರು ಮತ್ತು 6 ವಿಶೇಷ ಉಲ್ಲೇಖಗಳು ಫಿನಾಲೆಯಲ್ಲಿ ಸ್ಪರ್ಧಿಸಲು ಸಜ್ಜಾಗಿವೆ
ಕಾಮಿಕ್ ಚಾಲೆಂಜ್ ಭಾರತೀಯ ಕಾಮಿಕ್ ಸೃಷ್ಟಿಕರ್ತರಿಗೆ ಅಂತರರಾಷ್ಟ್ರೀಯ ಪ್ರೇಕ್ಷಕರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಹೊಸ ಪಾಲುದಾರಿಕೆಗಳನ್ನು ರೂಪಿಸಲು ವೇದಿಕೆಯನ್ನು ಒದಗಿಸುತ್ತದೆ
Posted On:
29 JAN 2025 6:24PM by PIB Bengaluru
76ನೇ ಗಣರಾಜ್ಯೋತ್ಸವದ ಆಚರಣೆಯ ಉತ್ಸಾಹವನ್ನು ಮುಂದುವರಿಸಿರುವ ವಾರ್ತಾ ಮತ್ತು ಪ್ರಸಾರ ಸಚಿವಾಲಯ (ಎಂಐಬಿ), ಇಂಡಿಯನ್ ಕಾಮಿಕ್ಸ್ ಅಸೋಸಿಯೇಷನ್ (ಐಸಿಎ) ಸಹಭಾಗಿತ್ವದಲ್ಲಿ ವೇವ್ಸ್ ಕಾಮಿಕ್ಸ್ ಕ್ರಿಯೇಟರ್ ಚಾಂಪಿಯನ್ಶಿಪ್ ನ 76 ಸೆಮಿಫೈನಲಿಸ್ಟ್ ಗಳನ್ನು ಘೋಷಿಸಿದೆ.
ಭಾರತೀಯ ಕಾಮಿಕ್ಸ್ ವೈವಿಧ್ಯತೆಯನ್ನು ಕೊಂಡಾಡುವುದು
ಈ ಹೆಗ್ಗುರುತು ಉಪಕ್ರಮವು ಭಾರತೀಯ ಕಾಮಿಕ್ಸ್ ವೈವಿಧ್ಯತೆಯನ್ನು ಸಂಭ್ರಮಿಸುತ್ತದೆ. ದೇಶಾದ್ಯಂತದ ಸೃಷ್ಟಿಕರ್ತರ ಪ್ರತಿಭೆಯನ್ನು ಪ್ರದರ್ಶಿಸುತ್ತದೆ. 20 ರಾಜ್ಯಗಳು ಮತ್ತು ಎನ್ಸಿಆರ್ನ 50 ನಗರಗಳಿಂದ ಬಂದ ಸೃಷ್ಟಿಕರ್ತರ ದೊಡ್ದ ಗುಂಪಿನಲ್ಲಿ ಸೆಮಿ-ಫೈನಲಿಸ್ಟ್ಗಳ ಆಯ್ಕೆಯು ಅವರ ಭೌಗೋಳಿಕ ಹರಡುವಿಕೆಯನ್ನು ಗಮನಿಸಿದಾಗ ವಿಶೇಷವಾಗಿ ಗಮನಾರ್ಹವಾಗಿದೆ.
ಈ ಆಯ್ಕೆಯಲ್ಲಿ ಮುಂಬೈ, ದಿಲ್ಲಿ ಮತ್ತು ಬೆಂಗಳೂರಿನಂತಹ ಪ್ರಮುಖ ಮೆಟ್ರೋಪಾಲಿಟನ್ ನಗರಗಳು, ಆನಂದ್, ಬೆತುಲ್, ಕಲ್ಕಾ, ಸಮಸ್ಟಿಪುರದಂತಹ ಸಣ್ಣ ಪಟ್ಟಣಗಳು ಮತ್ತು ನಗರಗಳು ಹಾಗು ಈಶಾನ್ಯದ ನಗರಗಳಾದ ಗುವಾಹಟಿ ಮತ್ತು ಇಂಫಾಲ್ ಗಳ ಸೃಷ್ಟಿಕರ್ತರು ಸೇರಿದ್ದಾರೆ. ಇದು ದೇಶದ ಎಲ್ಲಾ ಮೂಲೆಗಳಿಂದ ಪ್ರತಿಭೆಗಳನ್ನು ಉತ್ತೇಜಿಸುವ ಚಾಂಪಿಯನ್ ಶಿಪ್ ನ ಬದ್ಧತೆಯನ್ನು ತೋರಿಸುತ್ತದೆ.
ಇದು ಭಾರತದ ರೋಮಾಂಚಕ ಕಾಮಿಕ್ ಪುಸ್ತಕ ಸಂಸ್ಕೃತಿಗೆ ಸಾಕ್ಷಿಯಾಗಿದೆ, ಏಕೆಂದರೆ ಈ ಪ್ರತಿಭಾವಂತ ಸೃಷ್ಟಿಕರ್ತರಿಗೆ ಪ್ರಕಾಶಿಸಲು ವೇದಿಕೆಯನ್ನು ಒದಗಿಸಲು ವೇವ್ಸ್ ಬದ್ಧವಾಗಿದೆ. 10 ರಿಂದ 49 ವರ್ಷದೊಳಗಿನ ಸೆಮಿಫೈನಲಿಸ್ಟ್ಗಳಲ್ಲಿ 40 ಹವ್ಯಾಸಿಗಳು ಮತ್ತು 30 ವೃತ್ತಿಪರರು ಸೇರಿದ್ದಾರೆ.
ಸೆಮಿಫೈನಲಿಸ್ಟ್ ಗಳಲ್ಲಿ ಯುವ ಕಲಾವಿದರಿಗೆ 6 ವಿಶೇಷ ಉಲ್ಲೇಖಗಳು ಸಹ ಒಳಗೊಂಡಿವೆ, ಇದು ಎಲ್ಲಾ ಹಂತಗಳಲ್ಲಿ ಪ್ರತಿಭೆಗಳನ್ನು ಪೋಷಿಸುವ ಚಾಂಪಿಯನ್ ಶಿಪ್ ನ ಬದ್ಧತೆಯನ್ನು ಪ್ರದರ್ಶಿಸುತ್ತದೆ.
"ಭಾರತೀಯ ಕಾಮಿಕ್ಸ್ ಅನ್ನು ಜಾಗತಿಕವಾಗಿ ಉತ್ತೇಜಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯದೊಂದಿಗೆ ಪಾಲುದಾರರಾಗಲು ಇಂಡಿಯನ್ ಕಾಮಿಕ್ಸ್ ಅಸೋಸಿಯೇಷನ್ ಸಂತೋಷಪಡುತ್ತದೆ" ಎಂದು ಇಂಡಿಯನ್ ಕಾಮಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಅಜಿತೇಶ್ ಶರ್ಮಾ ಹೇಳಿದರು. "ಈ ಉಪಕ್ರಮವು ಸೃಜನಶೀಲ ಉದ್ಯಮಗಳನ್ನು ಬೆಂಬಲಿಸುವ ಮತ್ತು ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶಗಳನ್ನು ಒದಗಿಸುವ ನಮ್ಮ ಸರ್ಕಾರದ ಬದ್ಧತೆಗೆ ಉಜ್ವಲ ಉದಾಹರಣೆಯಾಗಿದೆ.
ವೇವ್ಸ್ ಕಾಮಿಕ್ಸ್ ಕ್ರಿಯೇಟರ್ ಚಾಂಪಿಯನ್ ಶಿಪ್
ವೇವ್ಸ್ ಕಾಮಿಕ್ಸ್ ಕ್ರಿಯೇಟರ್ ಚಾಂಪಿಯನ್ಶಿಪ್ ಭಾರತದ ಸೃಜನಶೀಲ ಉದ್ಯಮಗಳನ್ನು ವಿಶ್ವ ವೇದಿಕೆಯಲ್ಲಿ ಉನ್ನತೀಕರಿಸಲು ಎಂಐಬಿಯ 'ಕ್ರಿಯೇಟ್ ಇನ್ ಇಂಡಿಯಾ' ಉಪಕ್ರಮವನ್ನು ಮುನ್ನಡೆಸುವ ಪ್ರಮುಖ ಕಾರ್ಯಕ್ರಮವಾಗಿದೆ. ಈ ಚಾಂಪಿಯನ್ ಶಿಪ್ ಭಾರತೀಯ ಸೃಷ್ಟಿಕರ್ತರಿಗೆ ಅಂತಾರಾಷ್ಟ್ರೀಯ ಪ್ರೇಕ್ಷಕರೊಂದಿಗೆ ತೊಡಗಿಸಿಕೊಳ್ಳಲು ಮತ್ತು ಹೊಸ ಪಾಲುದಾರಿಕೆಯನ್ನು ರೂಪಿಸಲು ಒಂದು ಅನನ್ಯ ವೇದಿಕೆಯನ್ನು ಒದಗಿಸುತ್ತದೆ.
ಎಂಐಬಿ ಮತ್ತು ಐಸಿಎಗಳು 76 ಸೆಮಿ-ಫೈನಲಿಸ್ಟ್ ಗಳನ್ನು ಅಭಿನಂದಿಸುತ್ತವೆ ಮತ್ತು ಚಾಂಪಿಯನ್ ಶಿಪ್ ನಲ್ಲಿ ಮುಂದುವರಿಯುತ್ತಿರುವಾಗ ಅವರಿಗೆ ಶುಭ ಹಾರೈಸುತ್ತವೆ.
*****
(Release ID: 2097440)
Visitor Counter : 26
Read this release in:
Tamil
,
English
,
Hindi
,
Marathi
,
Nepali
,
Punjabi
,
Gujarati
,
Malayalam
,
Assamese
,
Odia
,
Urdu