ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಖೋ ಖೋ ವಿಶ್ವಕಪ್ ಜಯಿಸಿದ ಭಾರತ ಮಹಿಳಾ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ

Posted On: 19 JAN 2025 9:20PM by PIB Bengaluru

ಪ್ರಪ್ರಥಮ ಖೋ ಖೋ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

 ಅವರು ಎಕ್ಸ್ ನ ತಮ್ಮ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದಾರೆ:

“ಪ್ರಪ್ರಥಮ ಖೋ ಖೋ ವಿಶ್ವಕಪ್ ಗೆದ್ದ ಭಾರತೀಯ ಮಹಿಳಾ ತಂಡಕ್ಕೆ ಅಭಿನಂದನೆಗಳು!  ಅನನ್ಯ ಕೌಶಲ್ಯ, ದೃಢಸಂಕಲ್ಪ ಮತ್ತು ತಂಡವಾಗಿ‌ ಕಾರ್ಯನಿರ್ವಹಿಸಿದ ಪರಿಣಾಮವಾಗಿ  ಈ ಐತಿಹಾಸಿಕ ಗೆಲುವು ದೊರೆತಿದೆ.  

ಈ ವಿಜಯೋತ್ಸವವು ಭಾರತದ ಅತ್ಯಂತ ಹಳೆಯ ಸಾಂಪ್ರದಾಯಿಕ ಕ್ರೀಡೆಯೊಂದಕ್ಕೆ ಹೆಚ್ಚಿನ ಮಹತ್ವ ತಂದಿದ್ದು, ರಾಷ್ಟ್ರಾದ್ಯಂತದ ಅಸಂಖ್ಯಾತ ಯುವ ಕ್ರೀಡಾಪಟುಗಳಿಗೆ ಪ್ರೇರಣೆ ನೀಡಿದೆ. ಇನ್ನಷ್ಟು ಯುವಕರು ಮುಂದಿನ ದಿನಗಳಲ್ಲಿ ಈ ಕ್ರೀಡೆಯಲ್ಲಿ ತೊಡಗಲು ಈ ಸಾಧನೆಯು ದಾರಿದೀಪವಾಗಲಿ.”

 

 

*****


(Release ID: 2094405) Visitor Counter : 15