ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸುರಂಗಮಾರ್ಗ ಉದ್ಘಾಟನೆಗಾಗಿ ಜಮ್ಮು ಮತ್ತು ಕಾಶ್ಮೀರದ ಸೋನ್ಮಾರ್ಗ್ ಭೇಟಿಗೆ ನಾನು ಕಾತರದಿಂದ ಎದುರು ನೋಡುತ್ತಿದ್ದೇನೆ: ಪ್ರಧಾನಮಂತ್ರಿ

Posted On: 11 JAN 2025 6:30PM by PIB Bengaluru

ಝೆಡ್-ಮೋರ್ಹ್ ಸುರಂಗಮಾರ್ಗ ಉದ್ಘಾಟನೆಗಾಗಿ ಜಮ್ಮು ಮತ್ತು ಕಾಶ್ಮೀರದ ಸೋನ್‌ಮಾರ್ಗ್ ಗೆ ಭೇಟಿ ನೀಡಲು ಕಾತರದಿಂದ ನಿರೀಕ್ಷಿಸುತ್ತಿರುವುದಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ. 

ಈ ಸುರಂಗಮಾರ್ಗದ ಉದ್ಘಾಟನೆಗಾಗಿ ನಡೆದಿರುವ ಸಿದ್ಧತೆಯ ಕುರಿತಾದ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಶ್ರೀ ಒಮರ್ ಅಬ್ದುಲ್ಲಾ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಶ್ರೀ ಮೋದಿ ಅವರು ಹೀಗೆ ಬರೆದಿದ್ದಾರೆ:

“ಸುರಂಗಮಾರ್ಗದ ಉದ್ಘಾಟನೆಗಾಗಿ ಜಮ್ಮು ಮತ್ತು ಕಾಶ್ಮೀರದ ಸೋನ್‌ಮಾರ್ಗ್ ಭೇಟಿಯನ್ನು ನಾನು ಕಾತರದಿಂದ ಎದುರು ನೋಡುತ್ತಿದ್ದೇನೆ. ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕತೆಗೆ ಇದರ ಅನುಕೂಲಗಳ ಬಗ್ಗೆ ನೀವು ಸರಿಯಾಗಿ ಪ್ರಸ್ತಾಪಿಸಿರುವಿರಿ.

ವೈಮಾನಿಕ ಚಿತ್ರಗಳು ಮತ್ತು ವೀಡಿಯೊಗಳನ್ನು ಮೆಚ್ಚಿರುವೆ!”

 

 

*****


(Release ID: 2092454) Visitor Counter : 20