ಪ್ರಧಾನ ಮಂತ್ರಿಯವರ ಕಛೇರಿ
2024ರ ಎಫ್.ಐ.ಡಿ.ಇ. ಮಹಿಳಾ ವಿಶ್ವ ರಾಪಿಡ್ ಚಾಂಪಿಯನ್ ಶಿಪ್ ವಿಜೇತ ಹಂಪಿ ಕೊನೇರು ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ
Posted On:
29 DEC 2024 3:34PM by PIB Bengaluru
2024ರ ಫಿಡೆ ಮಹಿಳಾ ವಿಶ್ವ ರ‍್ಯಾಪಿಡ್ ಚಾಂಪಿಯನ್ ಶಿಪ್ ಗೆದ್ದ ಹಂಪಿ ಕೊನೇರು ಅವರನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದರು. "ಅವರ ಧೈರ್ಯ ಮತ್ತು ತೇಜಸ್ಸು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತದೆ" ಎಂದು ಅವರನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.
ಎಕ್ಸ್ ತಾಣದಲ್ಲಿ ಪ್ರಕಟವಾದ ಇಂಟರ್ನ್ಯಾಷನಲ್ ಚೆಸ್ ಫೆಡರೇಶನ್ ಹ್ಯಾಂಡಲ್ ಸಂಸ್ಥೆಯ ಸಂದೇಶಕ್ಕೆ ಸ್ಪಂದಿಸುತ್ತಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬರೆದಿದ್ದಾರೆ:
“2024 ರ ಫಿಡೆ ಮಹಿಳಾ ವಿಶ್ವ ರಾಪಿಡ್ ಚಾಂಪಿಯನ್ ಶಿಪ್ ಗೆದ್ದಿದ್ದಕ್ಕಾಗಿ @humpy_koneru ಅವರಿಗೆ ಅಭಿನಂದನೆಗಳು! ಅವರ ಧೈರ್ಯ ಮತ್ತು ತೇಜಸ್ಸು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುತ್ತಲೇ ಇದೆ.
ಈ ವಿಜಯವು ಇನ್ನಷ್ಟು ಐತಿಹಾಸಿಕವಾಗಿದೆ, ಏಕೆಂದರೆ ಇದು ಅವರ ಪಾಲಿಗೆ ಎರಡನೇ ವಿಶ್ವ ಕ್ಷಿಪ್ರ ಚಾಂಪಿಯನ್ ಶಿಪ್ ಪ್ರಶಸ್ತಿಯಾಗಿದೆ. ಈ ಮೂಲಕ ಈ ಅದ್ಭುತ ಸಾಧನೆಯನ್ನು ಸಾಧಿಸಿದ ಏಕೈಕ ಭಾರತೀಯರಾಗಿದ್ದಾರೆ."
*****
(Release ID: 2088802)
Visitor Counter : 23