ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ ನವದೆಹಲಿಯ ಸಿಬಿಸಿಐ ಕೇಂದ್ರದಲ್ಲಿ ಡಿಸೆಂಬರ್ 23 ರಂದು ಆಯೋಜಿಸಿರುವ ಕ್ರಿಸ್ಮಸ್ ಆಚರಣೆಯಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ


ಕಾರ್ಡಿನಲ್‌ಗಳು ಮತ್ತು ಬಿಷಪ್‌ಗಳು ಸೇರಿದಂತೆ ಕ್ರಿಶ್ಚಿಯನ್ ಸಮುದಾಯದ ಪ್ರಮುಖ ನಾಯಕರೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಲಿದ್ದಾರೆ

ಭಾರತದಲ್ಲಿನ ಕ್ಯಾಥೋಲಿಕ್ ಚರ್ಚ್‌ ಗಳ ಪ್ರಧಾನ ಕಛೇರಿಯಲ್ಲಿ ಪ್ರಧಾನಮಂತ್ರಿಯೊಬ್ಬರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಇದು ಮೊದಲ ನಿದರ್ಶನವಾಗಿದೆ 

Posted On: 22 DEC 2024 2:39PM by PIB Bengaluru

ಡಿಸೆಂಬರ್ 23 , 2024 ರಂದು ಸಂಜೆ 6:30ಕ್ಕೆ ನವದೆಹಲಿಯ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ(ಸಿಬಿಸಿಐ) ಕೇಂದ್ರದ ಆವರಣದಲ್ಲಿ ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಆಯೋಜಿಸಿರುವ ಕ್ರಿಸ್ಮಸ್ ಆಚರಣೆಗಳಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ.

ಪ್ರಧಾನಮಂತ್ರಿಯವರು ಕಾರ್ಡಿನಲ್‌ ಗಳು, ಬಿಷಪ್‌ ಗಳು ಮತ್ತು ಚರ್ಚ್‌ ನ ಇತರ  ನಾಯಕರು ಸೇರಿದಂತೆ ಕ್ರಿಶ್ಚಿಯನ್ ಸಮುದಾಯದ ಪ್ರಮುಖ ನಾಯಕರೊಂದಿಗೆ ಸಂವಾದ ನಡೆಸಲಿದ್ದಾರೆ.

ಭಾರತದ ಕ್ಯಾಥೋಲಿಕ್ ಚರ್ಚ್‌ ನ ಪ್ರಧಾನ ಕಛೇರಿಯಲ್ಲಿ ಭಾರತದ ಪ್ರಧಾನಮಂತ್ರಿಯೊಬ್ಬರು ಇಂತಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. 

ಕ್ಯಾಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ (ಸಿಬಿಸಿಐ) ಅನ್ನು 1944 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಭಾರತದಾದ್ಯಂತ ಎಲ್ಲಾ ಕ್ಯಾಥೋಲಿಕ್‌ ಸಮುದಾಯದವರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ.

 

*****


(Release ID: 2087085) Visitor Counter : 10