ಪ್ರಕಟಣಾ ದಿನಾಂಕ:
10 DEC 2024 8:19PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಕೌಲಾಲಂಪುರದಲ್ಲಿ ನಡೆದ 10ನೇ ಏಷ್ಯಾ ಪೆಸಿಫಿಕ್ ಕಿವುಡರ ಕ್ರೀಡಾಕೂಟ 2024ರಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ ಭಾರತೀಯ ತಂಡವನ್ನು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಯವರು Xನ ಪೋಸ್ಟ್ ನಲ್ಲಿ:
"ಕೌಲಾಲಂಪುರದಲ್ಲಿ ನಡೆದ 10ನೇ ಏಷ್ಯಾ ಪೆಸಿಫಿಕ್ ಕಿವುಡರ ಕ್ರೀಡಾಕೂಟ 2024ರಲ್ಲಿ ಐತಿಹಾಸಿಕ ಪ್ರದರ್ಶನ ನೀಡಿದ ನಮ್ಮ ಭಾರತೀಯ ತಂಡಕ್ಕೆ ಅಭಿನಂದನೆಗಳು! ನಮ್ಮ ಪ್ರತಿಭಾವಂತ ಕ್ರೀಡಾಪಟುಗಳು ಅಸಾಧಾರಣವಾದ 55 ಪದಕಗಳನ್ನು ಗೆಲ್ಲುವ ಮೂಲಕ ನಮ್ಮ ದೇಶಕ್ಕೆ ಅಪಾರ ಹೆಮ್ಮೆಯನ್ನು ತಂದಿದ್ದಾರೆ. ಇದು ಈ ಕ್ರೀಡಾಕೂಟದಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ. ಈ ಗಮನಾರ್ಹ ಸಾಧನೆಯು ಇಡೀ ರಾಷ್ಟ್ರವನ್ನು, ವಿಶೇಷವಾಗಿ ಕ್ರೀಡಾಸಕ್ತರು ಹಾಗೂ ಕ್ರೀಡೆಯ ಬಗ್ಗೆ ಉತ್ಸಾಹ ಹೊಂದಿರುವವರನ್ನು ಪ್ರೇರೇಪಿಸಿದೆ" ಎಂದು ಬರೆದಿದ್ದಾರೆ.
*****