ಪ್ರಧಾನ ಮಂತ್ರಿಯವರ ಕಛೇರಿ
ಪೋಪ್ ಫ್ರಾನ್ಸಿಸ್ ಅವರಿಂದ ಕಾರ್ಡಿನಲ್ ಗೆ ಆರ್ಚ್ ಬಿಷಪ್ ಜಾರ್ಜ್ ಕೂವಕಾಡ್ ಅವರ ನಾಮನಿರ್ದೇಶನ ಭಾರತಕ್ಕೆ ಅತ್ಯಂತ ಹೆಮ್ಮೆಯ ಸಂಗತಿ: ಪ್ರಧಾನಮಂತ್ರಿ
Posted On:
07 DEC 2024 8:48PM by PIB Bengaluru
ಆರ್ಚ್ ಬಿಷಪ್ ಜಾರ್ಜ್ ಕೂವಕಾಡ್ ಅವರನ್ನು ಪೋಪ್ ಫ್ರಾನ್ಸಿಸ್ ಅವರು ಕಾರ್ಡಿನಲ್ (ರೋಮನ್ ಕ್ಯಾಥೋಲಿಕ್ ಚರ್ಚ್ ನ ಗಣ್ಯರು) ಆಗಿ ನಾಮನಿರ್ದೇಶನ ಮಾಡಿರುವುದು ಭಾರತಕ್ಕೆ ಅತ್ಯಂತ ಹೆಮ್ಮೆಯ ಸಂಗತಿ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ.
ಪ್ರಧಾನಮಂತ್ರಿಗಳ ಕಚೇರಿಯು ಎಕ್ಸ್ ಹ್ಯಾಂಡಲ್ ಪೋಸ್ಟ್ ನಲ್ಲಿ ಹೀಗೆ ಹೇಳಿದೆ:
“ಆರ್ಚ್ ಬಿಷಪ್ ಜಾರ್ಜ್ ಕೂವಕಾಡ್ ಅವರನ್ನು ಪೋಪ್ ಫ್ರಾನ್ಸಿಸ್ ಅವರು ಕಾರ್ಡಿನಲ್ ಆಗಿ ನಾಮನಿರ್ದೇಶನ ಮಾಡಿರುವುದು ಭಾರತಕ್ಕೆ ಅತ್ಯಂತ ಹೆಮ್ಮೆಯ ಸಂಗತಿ.
ಈ ಸಮಾರಂಭಕ್ಕೆ ಸಾಕ್ಷಿಯಾಗಲು ಭಾರತ ಸರ್ಕಾರವು ಕೇಂದ್ರ ಸಚಿವರಾದ ಶ್ರೀ ಜಾರ್ಜ್ ಕುರಿಯನ್ ನೇತೃತ್ವದ ನಿಯೋಗವನ್ನು ಕಳುಹಿಸಿದೆ.
ಸಮಾರಂಭಕ್ಕೂ ಮುನ್ನ, ಭಾರತೀಯ ನಿಯೋಗವು ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದೆ.
@Pontifex
@GeorgekurianBjp”
*****
(Release ID: 2082110)
Visitor Counter : 12
Read this release in:
English
,
Urdu
,
Marathi
,
Hindi
,
Bengali
,
Manipuri
,
Punjabi
,
Gujarati
,
Tamil
,
Telugu
,
Malayalam