ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಹಾರ್ನ್‌ಬಿಲ್ ಉತ್ಸವ 25 ವರ್ಷಗಳನ್ನು ಪೂರೈಸಿದ ನಾಗಾಲ್ಯಾಂಡ್‌ನ ಜನತೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಮಂತ್ರಿ


ನಾಗರೀಕರು ಹಬ್ಬಕ್ಕೆ ಭೇಟಿ ನೀಡಿ ನಾಗಾ ಸಂಸ್ಕೃತಿಯ ಕಂಪನ್ನು ಅನುಭವಿಸಲು ಕರೆ

प्रविष्टि तिथि: 05 DEC 2024 11:10AM by PIB Bengaluru

ಹಾರ್ನ್‌ಬಿಲ್ ಉತ್ಸವ 25 ವರ್ಷಗಳನ್ನು ಪೂರೈಸಿದ ನಾಗಾಲ್ಯಾಂಡ್‌ನ ಜನರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಅವರು ತಮ್ಮ ಶುಭಾಶಯಗಳನ್ನು ತಿಳಿಸಿದರು ಮತ್ತು ಹಬ್ಬದ ವೇಳೆ ತ್ಯಾಜ್ಯ ನಿರ್ವಹಣೆ ಮತ್ತು ಸುಸ್ಥಿರತೆಯ ಮೇಲೆ ಗಮನಹರಿಸುತ್ತಿರುವುದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದರು. ಶ್ರೀ ನರೇಂದ್ರ ಮೋದಿ ಅವರು ಕೆಲವು ವರ್ಷಗಳ ಹಿಂದೆ ಉತ್ಸವಕ್ಕೆ ಭೇಟಿ ನೀಡಿದ ನೆನಪುಗಳನ್ನು ಸ್ಮರಿಸಿಕೊಂಡರು ಮತ್ತು ಇತರರಿಗೆ ಭೇಟಿ ನೀಡಿ ನಾಗಾ ಸಂಸ್ಕೃತಿಯ ಕಂಪನ್ನು ಅನುಭವಿಸುವಂತೆ ಕರೆ ನೀಡಿದರು.

ನಾಗಾಲ್ಯಾಂಡ್‌ ಮುಖ್ಯಮಂತ್ರಿ ಶ್ರೀ ನೆಫಿಯು ರಿಯೊ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಕುರಿತು ಪ್ರಧಾನಮಂತ್ರಿ ಹೀಗೆ ಬರೆದಿದ್ದಾರೆ.

“ಸದ್ಯ ನಡೆಯುತ್ತಿರುವ ಹಾರ್ನ್‌ಬಿಲ್ ಉತ್ಸವಕ್ಕೆ ನನ್ನ ಶುಭಾಶಯಗಳು ಮತ್ತು 25 ವರ್ಷಗಳನ್ನು ಪೂರೈಸುತ್ತಿರುವ ಈ ಉತ್ಸಾಹ ಭರಿತ ಹಬ್ಬಕ್ಕೆ ನಾಗಾಲ್ಯಾಂಡ್‌ನ ಜನತೆಗೆ ಅಭಿನಂದನೆಗಳು. ಈ ವರ್ಷದ ಉತ್ಸವದಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಸುಸ್ಥಿರತೆಯತ್ತ ಹೆಚ್ಚಿನ ಗಮನ ಹರಿಸುವುದನ್ನು ನೋಡಿ ನನಗೆ ಸಂತಸವಾಗುತ್ತಿದೆ.

ಕೆಲವು ವರ್ಷಗಳ ಹಿಂದೆ ಈ ಉತ್ಸವಕ್ಕೆ ನಾನು ಸ್ವತಃ ಭೇಟಿ ನೀಡಿದ ಅಚ್ಚುಮೆಚ್ಚಿನ ನೆನಪುಗಳನ್ನು ನಾನು ಸ್ಮರಿಸುತ್ತೇನೆ ಮತ್ತು ಇತರರನ್ನು ಅಲ್ಲಿಗೆ ಭೇಟಿ ನೀಡಲು ಮತ್ತು ನಾಗಾ ಸಂಸ್ಕೃತಿಯ ಕಂಪನ್ನು ಅನುಭವಿಸಲು ನಾನು ಕರೆ ನೀಡುತ್ತೇನೆ’’.

 

 

 

*****


(रिलीज़ आईडी: 2081070)
इस विज्ञप्ति को इन भाषाओं में पढ़ें: Odia , English , Urdu , Hindi , Marathi , Manipuri , Bengali , Assamese , Punjabi , Gujarati , Tamil , Telugu , Malayalam