ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕ್ರಿಯೇಟ್ ಇನ್ ಇಂಡಿಯಾ (ಭಾರತದಲ್ಲಿ ನಿರ್ಮಾಣ ಮಾಡಿ ಸವಾಲು) ಚಾಲೆಂಜ್ ನ ಭಾಗವಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ ಎ ಎಸ್ ಐ ಎಫ್ ಎ ಇಂಡಿಯಾ ಆಯೋಜಿಸುತ್ತಿದೆ ವೇವ್ಸ್ ಅವಾರ್ಡ್ಸ್ ಆಫ್ ಎಕ್ಸಲೆನ್ಸ್
ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಿ: ಅನಿಮೇಷನ್ ಮತ್ತು ಚಲನಚಿತ್ರ ಪ್ರಶಸ್ತಿಗಳಿಗೆ 2024ರ ಡಿಸೆಂಬರ್ 15 ರವರೆಗೆ ಪ್ರವೇಶಪತ್ರಗಳನ್ನು/ಅರ್ಜಿಗಳನ್ನು ಆಹ್ವಾನಿಸಲಾಗಿದೆ; ವಿಜೇತರಿಗೆ ಉದ್ಯಮದ ನಾಯಕರೊಂದಿಗೆ ಮಾರ್ಗದರ್ಶನ, ಮಾನ್ಯತೆ ಮತ್ತು ನೆಟ್ವರ್ಕಿಂಗ್ ಅವಕಾಶಗಳು ಲಭಿಸಲಿವೆ
Posted On:
29 NOV 2024 6:13PM
|
Location:
PIB Bengaluru
ಅನಿಮೇಷನನ್ನು ಉತ್ತೇಜಿಸುವ ಯುನೆಸ್ಕೋ ಮಾನ್ಯತೆ ಪಡೆದ ಜಾಗತಿಕ ಸ್ವಯಂಸೇವಾ ಸಂಸ್ಥೆ ಎ.ಎಸ್.ಐ.ಎಫ್.ಎ. (ಆಸಿಫಾ) ಇಂಡಿಯಾ, ಅನಿಮೇಷನ್, ವಿಷುಯಲ್ ಎಫೆಕ್ಟ್ಸ್ ಮತ್ತು ಎಕ್ಸ್ಆರ್ ಗಳಲ್ಲಿಯ ಅಸಾಧಾರಣ ಸಾಧನೆಗಳನ್ನು ಶ್ಲ್ಯಾಘಿಸಲು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಹಯೋಗದೊಂದಿಗೆ ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜಿನ ಭಾಗವಾಗಿ ವೇವ್ಸ್ ಅವಾರ್ಡ್ಸ್ ಆಫ್ ಎಕ್ಸಲೆನ್ಸ್ ಅನ್ನು ಆಯೋಜಿಸುತ್ತಿದೆ.
ಈ ಪ್ರತಿಷ್ಠಿತ ಪ್ರಶಸ್ತಿಗಳಿಗೆ 2024ರ ಡಿಸೆಂಬರ್ 15 ರವರೆಗೆ ಪ್ರವೇಶಗಳು ತೆರೆದಿರುತ್ತವೆ ಮತ್ತು ಪ್ರಶಸ್ತಿಗಳು ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ವಿಶ್ವ ಶ್ರಾವ್ಯ ದೃಶ್ಯ ಮತ್ತು ಮನರಂಜನಾ ಶೃಂಗಸಭೆ (ವೇವ್ಸ್) 2025 ರಲ್ಲಿ ಘೋಷಣೆಯಾಗಲಿವೆ.
ವೇವ್ಸ್ ಅವಾರ್ಡ್ಸ್ ಆಫ್ ಎಕ್ಸಲೆನ್ಸ್
ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ನೀಡಲಾಗುವ ಪ್ರಶಸ್ತಿಗಳು ಅತ್ಯುತ್ತಮ ಪಾತ್ರ ಅನಿಮೇಷನ್, ಅತ್ಯುತ್ತಮ ದೃಶ್ಯ ಪರಿಣಾಮಗಳು ಮತ್ತು ಅತ್ಯುತ್ತಮ ಕಿರುಚಿತ್ರದಂತಹ ವಿಭಾಗಗಳನ್ನು ಒಳಗೊಂಡಿವೆ. ವಿಜೇತರು ಮಾರ್ಗದರ್ಶನ, ಉದ್ಯಮದ ನಾಯಕರೊಂದಿಗೆ ನೆಟ್ವರ್ಕಿಂಗ್ ಅವಕಾಶಗಳು ಮತ್ತು ಸರ್ಕಾರದ 'ಕ್ರಿಯೇಟ್ ಇನ್ ಇಂಡಿಯಾ' ಉಪಕ್ರಮದೊಂದಿಗೆ ಹೊಂದಿಕೆಯಾಗುವ ಭಾರತದ ಸೃಜನಶೀಲ ಕ್ರಾಂತಿಯ ಭಾಗವಾದ ಮಾನ್ಯತೆಯನ್ನು ಪಡೆಯುತ್ತಾರೆ.

ಮುಂಬರುವ ವೇವ್ಸ್ ಅವಾರ್ಡ್ಸ್ ಆಫ್ ಎಕ್ಸಲೆನ್ಸ್ ನಲ್ಲಿ ಭಾಗವಹಿಸಲು ಸೃಷ್ಟಿಕರ್ತರನ್ನು ಪ್ರೇರೇಪಿಸಲು ಭಾರತದ ವಿವಿಧ ನಗರಗಳಲ್ಲಿ ಅಂತಾರಾಷ್ಟ್ರೀಯ ಅನಿಮೇಷನ್ ಡೇ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಮುಂಬರುವ ವಾರಗಳಲ್ಲಿ, ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಪುಣೆ, ಇಂದೋರ್, ನಾಸಿಕ್, ಮುಂಬೈ, ನೋಯ್ಡಾ, ಬೆಂಗಳೂರು ಮತ್ತು ಇತರ ಹಲವಾರು ಉಪ ನಗರಗಳಲ್ಲಿ ಈ ಉತ್ಸವವನ್ನುಆಚರಿಸಲಾಗುವುದು.
ಈ ಹಿಂದೆ, ಆಸಿಫಾ ಇಂಡಿಯಾ 2024 ರ ನವೆಂಬರ್ 16-17 ರ ನಡುವೆ ಹೈದರಾಬಾದಿನಲ್ಲಿ ಅಂತಾರಾಷ್ಟ್ರೀಯ ಅನಿಮೇಷನ್ ದಿನವನ್ನು ಯಶಸ್ವಿಯಾಗಿ ಆಯೋಜಿಸಿತ್ತು ಮತ್ತು ಮುಂಬರುವ ವೇವ್ಸ್ ಅವಾರ್ಡ್ಸ್ ಆಫ್ ಎಕ್ಸಲೆನ್ಸ್ನಲ್ಲಿ ಭಾಗವಹಿಸಲು ಸೃಷ್ಟಿಕರ್ತರನ್ನು ಪ್ರೇರೇಪಿಸಲು ನವೆಂಬರ್ 21 ರಂದು ಭೋಪಾಲ್ ವಿನ್ಯಾಸ ಉತ್ಸವದಲ್ಲಿ ಭಾಗವಹಿಸಿತ್ತು.

ಹೈದರಾಬಾದ್ ಐಎಡಿ'24 ಸಂದರ್ಭದಲ್ಲಿ ಉದ್ಯಮ ತಜ್ಞರೊಂದಿಗೆ ಪ್ಯಾನಲ್ ಚರ್ಚೆ ನಡೆಸಲಾಯಿತು.
ಫ್ರಾನ್ಸ್ ನ ಅನ್ನೆಸಿಯಲ್ಲಿ 1960ರಲ್ಲಿ ಸ್ಥಾಪನೆಯಾದ ಮತ್ತು 24 ವರ್ಷಗಳಿಂದ ಭಾರತದಲ್ಲಿ ಸಮುದಾಯವನ್ನು ಸಕ್ರಿಯವಾಗಿ ನಿರ್ಮಿಸುತ್ತಿರುವ ಆಸಿಫಾ, ಕಾರ್ಯಾಗಾರಗಳು, ಸಿಜಿ ಮೀಟಪ್ ಮತ್ತು ಅದರ ಅಂತಾರಾಷ್ಟ್ರೀಯ ಅನಿಮೇಷನ್ ಡೇ (ಐಎಡಿ) ಉತ್ಸವದಂತಹ ಕಾರ್ಯಕ್ರಮಗಳ ಮೂಲಕ ಪ್ರತಿಭೆ ಮತ್ತು ನಾವೀನ್ಯತೆಯನ್ನು ಬೆಳೆಸುವ ಕೊಡುಗೆಗಳಿಗೆ ಹೆಸರುವಾಸಿಯಾಗಿದೆ, ಈ ವರ್ಷ ಅದು 15 ಭಾರತೀಯ ನಗರಗಳಲ್ಲಿ ವ್ಯಾಪ್ತಿಯನ್ನು ಹೊಂದಿದೆ.
ವೇವ್ಸ್ ಅವಾರ್ಡ್ಸ್ ಆಫ್ ಎಕ್ಸಲೆನ್ಸ್ 2025 ಸಲ್ಲಿಕೆ ವಿವರಗಳು:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಡಿಸೆಂಬರ್ 15, 2024
ಸಲ್ಲಿಕೆ ಪೋರ್ಟಲ್: https://filmfreeway.com/asifaiad
ಇಂಡಿಯಾ ಪಾಸ್ : ಭಾರತ10281892 (india10281892)
ವೇವ್ಸ್ ಪಾಸ್ ಕೋಡ್: ASIFAIADINDIA25

ಹೈದರಾಬಾದ್- ಅಂತಾರಾಷ್ಟ್ರೀಯ ಅನಿಮೇಷನ್ ದಿನದಂದು ಆಸಿಫಾ ಇಂಡಿಯಾದ ಅಧ್ಯಕ್ಷ ಸಂಜಯ್ ಖಿಮೆಸಾರಾ ಅವರಿಂದ ಗುರುತಿಸಲ್ಪಟ್ಟ ಮರಿಯಾ ಎಲೆನಾ ಗುಟೆರೆಜ್
ಮುಂಬರುವ ದಿನಗಳಲ್ಲಿ ಆಸಿಫಾ ಇಂಡಿಯಾ ಐಎಡಿ ವೇಳಾಪಟ್ಟಿ ಇಲ್ಲಿದೆ:
ನಗರ
|
ದಿನಾಂಕಗಳು
|
ಬೆಂಗಳೂರು
|
6 ನೇ ಡಿಸೆಂಬರ್, 2024
|
ಮುಂಬಯಿ (ಎ.ಜಿ.ಐ.ಎಫ್.)
|
6ನೇ & 7 ನೇ ಡಿಸೆಂಬರ್ 2024
|
ಪುಣೆ
|
29ನೇ ಡಿಸೆಂಬರ್ 2024
|
ಇಂದೋರ್
|
14ನೇ ಡಿಸೆಂಬರ್ 2024
|
ನಾಸಿಕ್
|
3ನೇ ಜನವರಿ 2025
|
ಬಿಲಾಸ್ಪುರ
|
18 ನೇ ಜನವರಿ 2025
|
ಮೊಹಾಲಿ
|
24ನೇ ಜನವರಿ 2025
|
ಕೋಲ್ಕೊತ್ತ
|
31 ನೇ ಜನವರಿ 2025
|
*****
Release ID:
(Release ID: 2079441)
| Visitor Counter:
55
Read this release in:
Odia
,
Urdu
,
Khasi
,
English
,
Hindi
,
Marathi
,
Assamese
,
Punjabi
,
Gujarati
,
Tamil
,
Malayalam