ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನೈಜೀರಿಯಾದ ಮರಾಠಿ ಸಮುದಾಯವು ತಮ್ಮ ಸಂಸ್ಕೃತಿ ಮತ್ತು ಮೂಲಸ್ಥಾನದ ಬೇರುಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಕ್ಕಾಗಿ ಅವರನ್ನು ಶ್ಲಾಘಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 17 NOV 2024 6:05AM by PIB Bengaluru

ನೈಜೀರಿಯಾದ ಮರಾಠಿ ಸಮುದಾಯವು ಅವರ ಸಂಸ್ಕೃತಿ ಮತ್ತು ಮೂಲ ಸ್ಥಾನದ ಬೇರುಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೇಳಿದರು. ಸಮುದಾಯವು ಮರಾಠಿ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡಿದ್ದಕ್ಕಾಗಿ ಸಂತೋಷವನ್ನು ವ್ಯಕ್ತಪಡಿಸಿತು.

ತಮ್ಮ ಎಕ್ಸ್ ಖಾತೆಯಲ್ಲಿನ ಸಂದೇಶದಲ್ಲಿ, ಅವರು ಈ ರೀತಿ ಬರೆದಿದ್ದಾರೆ:

“ನೈಜೀರಿಯಾದಲ್ಲಿ, ಮರಾಠಿ ಸಮುದಾಯವು ಮರಾಠಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಿದ್ದಕ್ಕಾಗಿ ಸಂತೋಷವನ್ನು ವ್ಯಕ್ತಪಡಿಸಿದ್ದು, ಅವರು ತಮ್ಮ ಸಂಸ್ಕೃತಿ ಮತ್ತು ಮೂಲಸ್ಥಾನದ ಬೇರುಗಳೊಂದಿಗೆ ಹೇಗೆ ಉತ್ತಮ ಸಂಪರ್ಕ ಹೊಂದಿದ್ದಾರೆ ಎಂಬುದು ನಿಜವಾಗಿಯೂ ಶ್ಲಾಘನೀಯ ವಿಷಯವಾಗಿದೆ."

 

 

*****


(ಪ್ರಕಟಣೆ ಐ.ಡಿ.: 2074191) ವಿಸಿಟರ್ ಕೌಂಟರ್ : 55