ಗೃಹ ವ್ಯವಹಾರಗಳ ಸಚಿವಾಲಯ
ನವದೆಹಲಿಯಲ್ಲಿ ರಾಷ್ಟ್ರೀಯ ಏಕತೆಯ ದಿನದ ಅಂಗವಾಗಿ ಆಯೋಜಿಸಲಾದ 'ಏಕತೆಗಾಗಿ ಓಟ'ಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಚಾಲನೆ ನೀಡಿದರು
ಭಾರತದ ಏಕತೆ ಮತ್ತು ಸಮಗ್ರತೆಗಾಗಿ ದೇಶದ ಜನರನ್ನು ಪ್ರತಿಜ್ಞೆ ಮಾಡುವಂತೆ ಮಾಡಲು ಮಹಾನ್ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮರಣಾರ್ಥ 2015 ರಲ್ಲಿ 'ಏಕತೆಗಾಗಿ ಓಟ' ಆಯೋಜಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಿರ್ಧರಿಸಿದ್ದರು
ʼಏಕತೆಗಾಗಿ ಓಟ' ಕೇವಲ ಭಾರತದ ಏಕತೆಯ ಪ್ರತಿಜ್ಞೆಯಾಗಿರದೆ, ಇಂದು ಅಭಿವೃದ್ಧಿ ಹೊಂದಿದ ಭಾರತದ ಪ್ರತಿಜ್ಞೆಯೂ ಕೂಡ ಆಗಿದೆ
ಸ್ವಾತಂತ್ರ್ಯದ ನಂತರ, 550 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಒಟ್ಟುಗೂಡಿಸಿ ಇಂದಿನ ಭಾರತವನ್ನು ರಚಿಸುವುದು ಸರ್ದಾರ್ ಸಾಹೇಬರ ಬಲವಾದ ಇಚ್ಛಾಶಕ್ತಿ ಮತ್ತು ತ್ವರಿತ ನಿರ್ಧಾರದಿಂದಾಗಿ ಮಾತ್ರ ಸಾಧ್ಯವಾಯಿತು
ಇಂದು, ಭಾರತವು ಪ್ರತಿ ಕ್ಷೇತ್ರದಲ್ಲೂ ನಾಯಕನಾಗುವ ಹಾದಿಯಲ್ಲಿ ವಿಶ್ವದ ಮುಂದೆ ದೃಢವಾಗಿ ನಿಂತಿದೆ ಮತ್ತು ಅದರ ಅಡಿಪಾಯವನ್ನು ಹಾಕಿದ್ದು ಸರ್ದಾರ್ ಪಟೇಲ್
ಗುಜರಾತ್ ನ ಕೆವಾಡಿಯಾದಲ್ಲಿ ವಿಶ್ವದ ಅತಿ ಎತ್ತರದ ಪ್ರತಿಮೆ ನಿರ್ಮಿಸುವ ಮೂಲಕ ಪ್ರಧಾನಮಂತ್ರಿ ಮೋದಿ ಅವರು ಸರ್ದಾರ್ ಪಟೇಲ್ ಅವರ ಸ್ಮರಣೆಯನ್ನು ಜೀವಂತಗೊಳಿಸಿದ್ದಾರೆ
ಪ್ರತಿ ಕ್ಷೇತ್ರದಲ್ಲೂ ಸರ್ದಾರ್ ಪಟೇಲ್ ಅವರ ದೂರದೃಷ್ಟಿ, ಆಲೋಚನೆಗಳು ಮತ್ತು ಸಂದೇಶಗಳಿಗೆ ಪ್ರಧಾನಿಮಂತ್ರಿ ಮೋದಿಯವರು ಮೂರ್ತ ರೂಪ ಕೊಟ್ಟಿರುವರು
'ಏಕತೆಗಾಗಿ ಓಟ'ದ ಮೂಲಕ ಭಾರತದ ಏಕತೆಯನ್ನು ಬಲಪಡಿಸಲು ಮತ್ತು 2047ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಪ್ರತಿಜ್ಞೆ ಮಾಡುವಂತೆ ಕೇಂದ್ರ ಗೃಹ ಸಚಿವರು ಭಾರತೀಯರಿಗೆ ಕರೆ ನೀಡಿದರು
Posted On:
29 OCT 2024 11:54AM by PIB Bengaluru
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯಲ್ಲಿ ಆಯೋಜಿಸಲಾದ 'ಏಕತೆಗಾಗಿ ಓಟ'ಕ್ಕೆ ಚಾಲನೆ ನೀಡಿದರು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಸಂದರ್ಭದಲ್ಲಿ, ಅಂದರೆ ಅಕ್ಟೋಬರ್ 31 ರಂದು ಆಚರಿಸಲಾಗುವ ರಾಷ್ಟ್ರೀಯ ಏಕತಾ ದಿನದ ಅಂಗವಾಗಿ 'ಏಕತೆಗಾಗಿ ಓಟ' ವನ್ನು ಆಯೋಜಿಸಲಾಗಿದೆ. ಕೇಂದ್ರ ಸಂಪುಟದ ಸಚಿವರಾದ ಶ್ರೀ ಮನೋಹರ್ ಲಾಲ್ ಖಟ್ಟರ್, ಡಾ. ಮನ್ಸುಖ್ ಮಾಂಡವಿಯಾ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಶ್ರೀ ವಿನಯ್ ಕುಮಾರ್ ಸಕ್ಸೇನಾ ಸೇರಿದಂತೆ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ತಮ್ಮ ಭಾಷಣದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2015 ರಲ್ಲಿ ಮಹಾನ್ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮರಣಾರ್ಥ 'ಏಕತೆಗಾಗಿ ಓಟ' ಆಯೋಜಿಸಲು ನಿರ್ಧರಿಸಿದರು ಎಂದು ಹೇಳಿದರು. ಅಂದಿನಿಂದ ಇಡೀ ದೇಶವು ‘ಏಕತೆಗಾಗಿ ಓಟ’ದ ಮೂಲಕ ಇಡೀ ದೇಶವು ಏಕತೆ ಮತ್ತು ಸಮಗ್ರತೆಗಾಗಿ ಪ್ರತಿಜ್ಞೆ ಮಾಡುವುದಲ್ಲದೆ ಭಾರತಮಾತೆಯ ಸೇವೆಗೆ ತನ್ನನ್ನು ತಾನು ಸಮರ್ಪಿಸಿಕೊಂಡಿದೆ ಎಂದು ಹೇಳಿದರು. 'ಏಕತೆಗಾಗಿ ಓಟ' ದೇಶದ ಏಕತೆಯ ಪ್ರತಿಜ್ಞೆಯಾಗಿದೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಪ್ರತಿಜ್ಞೆಯಾಗಿದೆ ಎಂದು ಶ್ರೀ ಶಾ ಹೇಳಿದರು. 2047 ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಪ್ರತಿಜ್ಞೆಯನ್ನು ಪ್ರಧಾನಮಂತ್ರಿ ಮೋದಿಯವರು ಎಲ್ಲಾ ಭಾರತೀಯರ ಮುಂದೆ ಇಟ್ಟಿದ್ದಾರೆ, ಇದು ವಿಶ್ವದ ಎಲ್ಲಾ ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿ ಇರಿಸಲಿದೆ ಎಂದು ಅವರು ಹೇಳಿದರು.
ಭಾರತವು ಇಂದು ಪ್ರವರ್ಧಮಾನಕ್ಕೆ ಬರುತ್ತಿರುವ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಲಿಷ್ಠ ರಾಷ್ಟ್ರವಾಗಿ ಜಗತ್ತಿನ ಮುಂದೆ ನಿಂತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇತಿಹಾಸದತ್ತ ತಿರುಗಿ ನೋಡಿದರೆ ಸ್ವಾತಂತ್ರ್ಯಾ ನಂತರ 550ಕ್ಕೂ ಹೆಚ್ಚು ರಾಜ ಸಂಸ್ಥಾನಗಳನ್ನು ಒಗ್ಗೂಡಿಸಿ ಇಂದಿನ ಭಾರತದ ನಿರ್ಮಾಣ ಸಾಧ್ಯವಾಗಿರುವುದು ಸರ್ದಾರ್ ಸಾಹೇಬರ ದೃಢ ಸಂಕಲ್ಪ ಹಾಗೂ ತ್ವರಿತ ನಿರ್ಧಾರದಿಂದ ಮಾತ್ರ ಎಂದರು. ಸರ್ದಾರ್ ಪಟೇಲ್ ಅವರ ದೃಢ ಸಂಕಲ್ಪದಿಂದಾಗಿ ಇಂದು ಭಾರತವು ವಿಶ್ವದ ಮುಂದೆ ಒಗ್ಗಟ್ಟಾಗಿ ಮತ್ತು ಬಲವಾಗಿ ನಿಂತಿದೆ ಎಂದು ಅವರು ಹೇಳಿದರು. ಇಂದು ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ನಾಯಕನಾಗುವ ಹಾದಿಯಲ್ಲಿ ವಿಶ್ವದ ಮುಂದೆ ಪ್ರಬಲವಾಗಿ ನಿಂತಿದೆ ಮತ್ತು ಅದರ ಬುನಾದಿಯನ್ನು ಹಾಕಿದ್ದು ಸರ್ದಾರ್ ಪಟೇಲ್ ಎಂದು ಅವರು ಹೇಳಿದರು.
ಹಲವಾರು ವರ್ಷಗಳಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಮರೆತು ಭಾರತ ರತ್ನ ಗೌರವದಿಂದ ವಂಚಿತರನ್ನಾಗಿಸಿದ್ದು ದುರದೃಷ್ಟಕರ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹೇಳಿದರು. ಪ್ರಧಾನಮಂತ್ರಿ ಮೋದಿ ಅವರು ಗುಜರಾತ್ ನ ಕೆವಾಡಿಯಾದಲ್ಲಿ ವಿಶ್ವದ ಅತಿ ಎತ್ತರದ ಪ್ರತಿಮೆ ನಿರ್ಮಿಸುವ ಮೂಲಕ ಸರ್ದಾರ್ ಪಟೇಲ್ ಅವರ ಸ್ಮರಣೆಯನ್ನು ಜೀವಂತಗೊಳಿಸಿದ್ದಾರೆ ಎಂದು ಹೇಳಿದರು. ಪ್ರತಿಯೊಂದು ಕ್ಷೇತ್ರದಲ್ಲೂ ಸರ್ದಾರ್ ಪಟೇಲ್ ಅವರ ದೂರದೃಷ್ಟಿ, ಆಲೋಚನೆಗಳು ಮತ್ತು ಸಂದೇಶಗಳಿಗೆ ಪ್ರಧಾನಮಂತ್ರಿ ಮೋದಿಯವರು ಮೂರ್ತರೂಪವನ್ನು ನೀಡಿದ್ದಾರೆ ಎಂದು ಶ್ರೀ ಶಾ ಹೇಳಿದರು.
ಸರ್ದಾರ್ ಪಟೇಲರ ಶ್ರೇಷ್ಠ ವಿಚಾರಗಳು ದೇಶದ ಯುವ ಪೀಳಿಗೆಗೆ ದಾರಿದೀಪವಾಗುವುದು ಖಂಡಿತ ಎಂದು ಶ್ರೀ ಅಮಿತ್ ಶಾ ಹೇಳಿದರು. ‘Run for Unity’ ಏಕತೆಗಾಗಿ ಓಟದ ಮೂಲಕ ಭಾರತದ ಏಕತೆಯನ್ನು ಬಲಪಡಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುವಂತೆ ಮತ್ತು 2047ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಕೇಂದ್ರ ಗೃಹ ಸಚಿವರು ಭಾರತೀಯರಿಗೆ ಕರೆ ನೀಡಿದರು.
*****
(Release ID: 2069820)
Visitor Counter : 26