ಸಂಪುಟ ಕಾರ್ಯಾಲಯ
ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯು ಬಂಗಾಳಕೊಲ್ಲಿಯಲ್ಲಿ ಉಂಟಾಗಲಿರುವ ಚಂಡಮಾರುತವನ್ನು ಎದುರಿಸಲು ಇರುವ ಸಿದ್ಧತೆಯನ್ನು ಪರಿಶೀಲಿಸಲು ಸಭೆ ನಡೆಸಿತು
प्रविष्टि तिथि:
21 OCT 2024 5:44PM by PIB Bengaluru
ಸಚಿವ ಸಂಪುಟದ, ಡಾ. ಟಿ.ವಿ. ಸೋಮನಾಥನ್ ಅವರು ಬಂಗಾಳಕೊಲ್ಲಿಯಲ್ಲಿ ಉಂಟಾಗಲಿರುವ ಚಂಡಮಾರುತವನ್ನು ಎದುರಿಸಲು ಇರುವ ಸಿದ್ಧತೆಯನ್ನು ಪರಿಶೀಲಿಸಲು ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯ (ಎನ್ ಸಿ ಎಂ ಸಿ) ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಹಾನಿರ್ದೇಶಕರು, ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಉತ್ತಮವಾಗಿ ಗುರುತಿಸಲಾದ ಕಡಿಮೆ ಒತ್ತಡದ ಪ್ರದೇಶದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಸಮಿತಿಗೆ ವಿವರಿಸಿದರು. ಇದು ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದ್ದು ಅಕ್ಟೋಬರ್ 22 ರಂದು ಬೆಳಿಗ್ಗೆ ಅವಪಾತಕ್ಕೆ ತಿರುಗುವುದು ಮತ್ತು 23ನೇ ಅಕ್ಟೋಬರ್, 2024 ರ ಹೊತ್ತಿಗೆ ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಮೇಲೆ ಚಂಡಮಾರುತವಾಗಿ ತೀವ್ರಗೊಳ್ಳಬಹುದು. ಅದರ ನಂತರ, ಅದು ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತದೆ ಮತ್ತು ಅಕ್ಟೋಬರ್ 24 ರ ಬೆಳಿಗ್ಗೆ ವಾಯುವ್ಯ ಬಂಗಾಳ ಕೊಲ್ಲಿಯ ಮೇಲೆ ಒಡಿಶಾ ಪಶ್ಚಿಮ ಬಂಗಾಳ ಕರಾವಳಿಯನ್ನು ತಲುಪುವ ಸಾಧ್ಯತೆಯಿದೆ. ವಾಯುವ್ಯಕ್ಕೆ ಚಲಿಸುವುದನ್ನು ಮುಂದುವರೆಸುತ್ತಾ, ಇದು ಉತ್ತರ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿಯನ್ನು ಪುರಿ ಮತ್ತು ಸಾಗರ್ ದ್ವೀಪದ ನಡುವೆ 24 ರ ರಾತ್ರಿ ಮತ್ತು 25 ಅಕ್ಟೋಬರ್, 2024 ರ ಮುಂಜಾನೆ ತೀವ್ರ ಚಂಡಮಾರುತವಾಗಿ ಗಂಟೆಗೆ 100-110 ಕಿ.ಮೀ. ವೇಗದಿಂದ 120ಕ್ಕೆ ತಲುಪುವ ಸಾಧ್ಯತೆಯಿದೆ.
ಒಡಿಶಾ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗಳು ಚಂಡಮಾರುತದ ನಿರೀಕ್ಷಿತ ಹಾದಿಯಲ್ಲಿ ಜನರನ್ನು ರಕ್ಷಿಸಲು ತೆಗೆದುಕೊಳ್ಳುತ್ತಿರುವ ಪೂರ್ವಸಿದ್ಧತಾ ಕ್ರಮಗಳು ಮತ್ತು ಸ್ಥಳೀಯ ಆಡಳಿತವು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಸಮಿತಿಗೆ ತಿಳಿಸಿದರು. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದ್ದು, ಸಮುದ್ರದಲ್ಲಿದ್ದವರನ್ನು ಸುರಕ್ಷಿತ ಸ್ಥಳಕ್ಕೆ ಕರೆಸಲಾಗಿದೆ. ನಿಯಂತ್ರಣ ಕೊಠಡಿಗಳನ್ನು ಸಹ ಸಕ್ರಿಯಗೊಳಿಸಲಾಗಿದ್ದು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ. ಸಾಕಷ್ಟು ಶೆಲ್ಟರ್ ಗಳು, ವಿದ್ಯುತ್ ಸರಬರಾಜು, ಔಷಧ ಮತ್ತು ತುರ್ತು ಸೇವೆಗಳನ್ನು ಸಿದ್ಧವಾಗಿರಿಸಲಾಗಿದೆ. ಅಸುರಕ್ಷಿತ ಪ್ರದೇಶಗಳಲ್ಲಿ ವಾಸಿಸುವ ಜನರನ್ನು, ಸ್ಥಳಾಂತರಿಸಲು ಗುರುತಿಸಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ ಡಿಆರ್ಎಫ್) ಪಶ್ಚಿಮ ಬಂಗಾಳದಲ್ಲಿ 14 ತಂಡಗಳನ್ನು ಮತ್ತು ಒಡಿಶಾದಲ್ಲಿ 11 ತಂಡಗಳನ್ನು ನಿಯೋಜಿಸಿದೆ. ಸೇನೆ, ನೌಕಾಪಡೆ ಮತ್ತು ಕರಾವಳಿ ರಕ್ಷಣಾ ಮತ್ತು ಪರಿಹಾರ ತಂಡಗಳು ಹಡಗುಗಳು ಮತ್ತು ವಿಮಾನಗಳನ್ನು ಸನ್ನದ್ಧವಾಗಿ ಇರಿಸಿವೆ. ಪಾರಾದೀಪ್ ಮತ್ತು ಹಲ್ದಿಯಾ ಬಂದರುಗಳಿಗೆ ನಿಯಮಿತ ಎಚ್ಚರಿಕೆಗಳು ಮತ್ತು ಸಲಹೆಗಳನ್ನು ಕಳುಹಿಸಲಾಗುತ್ತಿದೆ. ತಕ್ಷಣದ ದುರಸ್ತಿಗಾಗಿ ಇಂಧನ ಸಚಿವಾಲಯ ಮತ್ತು ದೂರಸಂಪರ್ಕ ಇಲಾಖೆಯಿಂದ ತುರ್ತು ತಂಡಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ.
ಕೇಂದ್ರದ ಸಂಸ್ಥೆಗಳು ಹಾಗು ಒಡಿಶಾ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಸನ್ನದ್ಧತೆಯ ಕ್ರಮಗಳನ್ನು ಪರಿಶೀಲಿಸಿದ ಸಚಿವ ಸಂಪುಟದ ಕಾರ್ಯದರ್ಶಿ, ಎಲ್ಲಾ ಅಗತ್ಯ ತಡೆಗಟ್ಟುವ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸಂಸ್ಥೆಗಳು ತೆಗೆದುಕೊಳ್ಳಬಹುದು ಎಂದು ಒತ್ತಿ ಹೇಳಿದರು. ಒಂದೂ ಜೀವಹಾನಿ ಆಗದೇ ಇರುವುದು ಮತ್ತು ಆಸ್ತಿ ಮತ್ತು ಮೂಲಸೌಕರ್ಯಗಳ ಹಾನಿಯನ್ನು ಕಡಿಮೆ ಮಾಡುವುದು, ಹಾನಿಯ ಸಂದರ್ಭದಲ್ಲಿ, ಅಗತ್ಯ ಸೇವೆಗಳನ್ನು ಕಡಿಮೆ ಸಮಯದಲ್ಲಿ ಮರುಸ್ಥಾಪಿಸುವುದು ಗುರಿಯಾಗಿರಬೇಕು ಎಂದು ಹೇಳಿದರು.
ಸಮುದ್ರದಲ್ಲಿರುವ ಮೀನುಗಾರರನ್ನು ಹಿಂದಕ್ಕೆ ಕರೆಸಿಕೊಳ್ಳುವುದನ್ನು ಮತ್ತು ಅಸುರಕ್ಷಿತ ಪ್ರದೇಶಗಳ ಜನರನ್ನು ಸಮಯಕ್ಕೆ ಸರಿಯಾಗಿ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸಚಿವ ಸಂಪುಟದ ಕಾರ್ಯದರ್ಶಿ ಹೇಳಿದರು. ಒಡಿಶಾ ಮತ್ತು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಎಲ್ಲಾ ಕೇಂದ್ರ ಸಂಸ್ಥೆಗಳು ಸಂಪೂರ್ಣ ಜಾಗರೂಕವಾಗಿವೆ ಮತ್ತು ಸಹಾಯಕ್ಕಾಗಿ ಲಭ್ಯವಿರುತ್ತವೆ ಎಂದು ಅವರು ಭರವಸೆ ನೀಡಿದರು. ಆಂಧ್ರಪ್ರದೇಶ, ಛತ್ತೀಸ್ ಗಢ ಮತ್ತು ಜಾರ್ಖಂಡ್ ರಾಜ್ಯಗಳು ಸಹ ಭಾರೀ ಮಳೆಯಿಂದ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧರಾಗಿರಲು ಎಂದು ಸಲಹೆ ನೀಡಿದರು. ಯಾವುದೇ ಪ್ರವಾಹವನ್ನು ತಪ್ಪಿಸಲು ಸಂಭವನೀಯ ಪೀಡಿತ ಪ್ರದೇಶದ ಅಣೆಕಟ್ಟು ಪ್ರದೇಶಗಳಿಂದ ನೀರನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ನಿಯಂತ್ರಿಸಬೇಕು ಎಂದು ಸಚಿವ ಸಂಪುಟದ ಕಾರ್ಯದರ್ಶಿ ಒತ್ತಿ ಹೇಳಿದರು.
ಸಭೆಯಲ್ಲಿ ಒಡಿಶಾ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಗಳು, ಕೇಂದ್ರ ಗೃಹ ಕಾರ್ಯದರ್ಶಿ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಮೀನುಗಾರಿಕೆ, ವಿದ್ಯುತ್, ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯಗಳ ಕಾರ್ಯದರ್ಶಿಗಳು, ಆಂಧ್ರಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ದೂರಸಂಪರ್ಕ ಇಲಾಖೆ (ತಾಂತ್ರಿಕ) ), ಚೀಫ್ ಆಫ್ ಇಂಟಿಗ್ರೇಟೆಡ್ ಸೆಕ್ಯುರಿಟಿ ಸ್ಟಾಫ್ (ಸಿಐಎಸ್ ಸಿ) ಜೊತೆಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಮಹಾನಿರ್ದೇಶಕರು, ಭಾರತೀಯ ಕರಾವಳಿ ಕಾವಲುಪಡೆಯ ಮಹಾನಿರ್ದೇಶಕರು ಮತ್ತು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
*****
(रिलीज़ आईडी: 2066945)
आगंतुक पटल : 86
इस विज्ञप्ति को इन भाषाओं में पढ़ें:
Odia
,
English
,
Urdu
,
हिन्दी
,
Marathi
,
Assamese
,
Manipuri
,
Punjabi
,
Gujarati
,
Tamil
,
Telugu