ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಪೊಲೀಸ್ ಸ್ಮರಣಾರ್ಥ ದಿನದಂದು ಸೇವೆಯಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಿದರು


ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕನಸನ್ನು ನನಸು ಮಾಡಲು ದೇಶಾದ್ಯಂತ ಪೊಲೀಸ್ ಸಿಬ್ಬಂದಿ ಸಂಕಲ್ಪ ತೊಟ್ಟಿದ್ದಾರೆ

ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿರುವ ಕೇಂದ್ರ ರಚನೆಯು ಕರ್ತವ್ಯಕ್ಕೆ ನಮ್ಮ ಪೊಲೀಸರ ಅಚಲವಾದ ಬದ್ಧತೆ, ಅವರ ಆಳವಾದ ದೇಶಭಕ್ತಿ ಮತ್ತು ಸರ್ವೋಚ್ಚ ತ್ಯಾಗ ಮಾಡುವ ಸಂಕಲ್ಪದ ಸಂಕೇತವಾಗಿದೆ

ಕರ್ತವ್ಯ ನಿರ್ವಹಿಸುವಲ್ಲಿ ತ್ಯಾಗ, ಬಲಿದಾನ ಮಾಡಿದ ಪೊಲೀಸ್ ಸಿಬ್ಬಂದಿಗೆ ದೇಶ ಸದಾ ಋಣಿಯಾಗಿರುತ್ತದೆ

ಪೊಲೀಸ್ ಸಿಬ್ಬಂದಿಯವರ ಕಲ್ಯಾಣ ಮೋದಿ ಸರ್ಕಾರದ ಆದ್ಯತೆಯಾಗಿದೆ

ಮೋದಿ ಸರ್ಕಾರವು ಆರೋಗ್ಯ, ವಸತಿ ಮತ್ತು ಪೊಲೀಸ್ ಸಿಬ್ಬಂದಿಗೆ ವಿದ್ಯಾರ್ಥಿವೇತನಕ್ಕೆ ಸಂಬಂಧಿಸಿದ ಅನೇಕ ಕಲ್ಯಾಣ ಯೋಜನೆಗಳನ್ನು ತಂದಿದೆ

ಜವಾನರ ತ್ಯಾಗದ ಗೌರವಾರ್ಥವಾಗಿ ಪ್ರಧಾನಿ ಮೋದಿ ನಿರ್ಮಿಸಿದ ರಾಷ್ಟ್ರೀಯ ಪೊಲೀಸ್ ಸ್ಮಾರಕವು ನಮ್ಮ ಯುವಕರನ್ನು ಪ್ರೇರೇಪಿಸುತ್ತದೆ ಮತ್ತು ನಾವು ಇಂದು ಅನುಭವಿಸುತ್ತಿರುವ ಸುರಕ್ಷತೆ ಮತ್ತು ಪ್ರಗತಿಯು ಸಾವಿರಾರು ಸೈನಿಕರ ಅತ್ಯುನ್ನತ ತ್ಯಾಗದಿಂದಾಗಿ ಎಂದು ನಾಗರಿಕರಿಗೆ ನೆನಪಿಸುತ್ತದೆ

ಪೊಲೀಸರ ತ್ಯಾಗದ ಗೌರವಾರ್ಥ ಪ್ರಧಾನಮಂತ್ರಿ ಮೋದಿಜಿ ನಿರ್ಮಿಸಿದ ರಾಷ್ಟ್ರೀಯ ಪೊಲೀಸ್ ಸ್ಮಾರಕವು ಯುವಕರಿಗೆ ಸ್ಫೂರ್ತಿ ನೀಡುತ್ತದೆ ಮತ್ತು ನಾವು ಇಂದು ಅನುಭವಿಸುತ್ತಿರುವ ಸುರಕ್ಷತೆ ಮತ್ತು ಪ್ರಗತಿಯು ಸಾವಿರಾರು ಸೈನಿಕರ ತ್ಯಾಗದಿಂದಾಗಿ ಎಂದು ನಾಗರಿಕರಿಗೆ ನೆನಪಿಸುತ್ತದೆ

ಕಳೆದ ದಶಕದಲ್ಲಿ, ಭದ್ರತಾ ಪಡೆಗಳ ಕರ್ತವ್ಯ ನಿಷ್ಠೆಯಿಂದಾಗಿ, ಎಡಪಂಥೀಯ ಉಗ್ರವಾದ ಮತ್ತು ಕಾಶ್ಮೀರ ಮತ್ತು ಈಶಾನ್ಯದಲ್ಲಿ ದಶಕಗಳ ಕಾಲದ ಅಶಾಂತಿ ಕೊನೆಗೊಂಡಿತು

ದೇಶವು ಡ್ರೋನ್ ಗಳು, ಮಾದಕ ವಸ್ತುಗಳ ವ್ಯವಹಾರ, ಸೈಬರ್ ಅಪರಾಧ, ಕೃತಕಬುದ್ದಿಮತ್ತೆ ಮೂಲಕ ಅಶಾಂತಿ ಹರಡುವ ಪ್ರಯತ್ನಗಳಂತಹ ಸವಾಲುಗಳನ್ನು ಎದುರಿಸುತ್ತಿದೆ

ಅಪಾಯಗಳು ಮತ್ತು ಸವಾಲುಗಳು ಎಷ್ಟೇ ದೊಡ್ಡದಾದರೂ ನಮ್ಮ ಸೈನಿಕರ ದೃಢ ಸಂಕಲ್ಪದ ಮುಂದೆ ಅವು ನಿಲ್ಲಲಾರರವು

ಸೈನಿಕರು ದೇಶಕ್ಕಾಗಿ ತಮ್ಮ ಅತ್ಯುನ್ನತ ತ್ಯಾಗವನ್ನು ಮಾಡಿದ್ದಾರೆ ಮತ್ತು ಅದರಿಂದಾಗಿಯೇ ದೇಶವು ಪ್ರಗತಿಯಲ್ಲಿದೆ

1959 ರಲ್ಲಿ ಈ ದಿನದಂದು, 10 ಸಿ ಆರ್ ಪಿ ಎಫ್ ಸೈನಿಕರು ಚೀನಾದ ಸೈನ್ಯದ ವಿರುದ್ಧ ಹೋರಾಡುವಾಗ ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು, ಆದ್ದರಿಂದ ಈ ದಿನವನ್ನು ಪೊಲೀಸ್ ಸ್ಮಾರಕ ದಿನವನ್ನಾಗಿ ಆಚರಿಸಲಾಗುತ್ತದೆ

Posted On: 21 OCT 2024 2:52PM by PIB Bengaluru

ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ನವದೆಹಲಿಯ ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ಪೊಲೀಸ್ ಸ್ಮರಣಾರ್ಥ ದಿನದಂದು ಹುತಾತ್ಮರಿಗೆ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ, ಗೃಹ ವ್ಯವಹಾರಗಳ ರಾಜ್ಯ ಸಚಿವರಾದ ಶ್ರೀ ಬಂಡಿ ಸಂಜಯ್ ಕುಮಾರ್, ಕೇಂದ್ರ ಗೃಹ ಕಾರ್ಯದರ್ಶಿ ಶ್ರೀ ಗೋವಿಂದ್ ಮೋಹನ್, ಇಂಟೆಲಿಜೆನ್ಸ್ ಬ್ಯೂರೋ (ಐಬಿ) ನಿರ್ದೇಶಕ ಶ್ರೀ ತಪನ್ ಕುಮಾರ್ ದೇಕಾ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್ ) ಹಿರಿಯ ಅಧಿಕಾರಿಗಳು ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕೇಂದ್ರ ಗೃಹ ಸಚಿವರು ತಮ್ಮ ಭಾಷಣದಲ್ಲಿ, ಪೊಲೀಸರು ಕಾಶ್ಮೀರದಿಂದ ಕನ್ಯಾಕುಮಾರಿ ಮತ್ತು ಕಚ್ನಿಂದ ಕಿಬಿತುವರೆಗಿನ ಭಾರತದ ಗಡಿಗಳನ್ನು ರಕ್ಷಿಸುತ್ತಾರೆ ಎಂದು ಹೇಳಿದರು. ಹಗಲಿರುಳು, ಹಬ್ಬ ಹರಿದಿನಗಳಾಗಲಿ, ವಿಕೋಪಗಳಾಗಲಿ, ವಿಪರೀತ ಸೆಖೆ, ಮಳೆ, ಚಳಿಯ ಅಲೆಗಳಲ್ಲಿ ಪಡೆಗಳ ಸಿಬ್ಬಂದಿ ಸದಾ ನಮ್ಮನ್ನು ಮತ್ತು ಗಡಿಯನ್ನು ಕಾವಲು ಕಾಯುತ್ತಿರುತ್ತಾರೆ ಎಂದು ತಿಳಿಸಿದರು.

ರಾಷ್ಟ್ರೀಯ ಪೊಲೀಸ್ ಸ್ಮಾರಕದ ಮಧ್ಯದಲ್ಲಿರುವ ರಚನೆಯು ನಮ್ಮ ಸೈನಿಕರ ಕರ್ತವ್ಯದ ಬಗ್ಗೆ ಅಚಲವಾದ ಬದ್ಧತೆ, ಅವರ ಆಳವಾದ ದೇಶಭಕ್ತಿ ಮತ್ತು ಸರ್ವೋಚ್ಚ ತ್ಯಾಗ ಮಾಡುವ ಅವರ ಉತ್ಸಾಹದ ಸಂಕೇತವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. 1959 ರಲ್ಲಿ ಇದೇ ದಿನ 10 ಕೇಂದ್ರೀಯ ಮೀಸಲು ಪೊಲೀಸ್ ಪಡೆ  (ಸಿಆರ್‌ ಪಿ ಫ್) ಸಿಬ್ಬಂದಿ ಚೀನಾದ ಸೇನೆಯನ್ನು ಧೈರ್ಯದಿಂದ ಎದುರಿಸಿ ಪ್ರಾಣ ತ್ಯಾಗ ಮಾಡಿದರು. ಪ್ರಧಾನಮಂತ್ರಿಯಾದ ನಂತರ ಶ್ರೀ ನರೇಂದ್ರ ಮೋದಿಯವರು ಈ ಸೈನಿಕರ ತ್ಯಾಗವನ್ನು ಗೌರವಿಸಲು ದೆಹಲಿಯ ಹೃದಯಭಾಗದಲ್ಲಿ ಪೊಲೀಸ್ ಸ್ಮಾರಕವನ್ನು ನಿರ್ಮಿಸಲು ನಿರ್ಧರಿಸಿದರು ಎಂದು ಶ್ರೀ ಶಾ ಹೇಳಿದರು.  ಈ ಪೊಲೀಸ್ ಸ್ಮಾರಕವು ನಮ್ಮ ಯುವಕರನ್ನು ಪ್ರೇರೇಪಿಸುತ್ತದೆ ಮತ್ತು ಇಂದು ನಾವು ಸುರಕ್ಷಿತವಾಗಿದ್ದು ಅಭಿವೃದ್ಧಿಯ ಪಥದಲ್ಲಿ ನಡೆಯುತ್ತಿದ್ದೇವೆ ಎನ್ನುವುದನ್ನು ನಾಗರಿಕರಿಗೆ ನೆನಪಿಸುತ್ತದೆ.

36,468 ಪೊಲೀಸ್ ಸಿಬ್ಬಂದಿ ದೇಶದ ಸುರಕ್ಷತೆ ಮತ್ತು ಭದ್ರತೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ, ಇದರಿಂದಾಗಿ ರಾಷ್ಟ್ರದ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು. ಕಳೆದ ಒಂದು ವರ್ಷದಲ್ಲಿ 216 ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲಿ ಪ್ರಾಣ ತ್ಯಾಗ ಮಾಡಿದ್ದು, ಈ ವೀರ ಯೋಧರಿಗೆ ದೇಶ ಎಂದೆಂದಿಗೂ ಋಣಿಯಾಗಿದೆ ಎಂದು ತಿಳಿಸಿದರು.

ನಮ್ಮ ಪೊಲೀಸ್ ಪಡೆಗಳು ದೇಶದ ಭದ್ರತೆಗಾಗಿ ಸರ್ವೋಚ್ಚ ತ್ಯಾಗ ಮಾಡುವ ಸಂಪ್ರದಾಯವಿದೆ ಎಂದು ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರು ಹೇಳಿದರು. ಹಿಮಾಲಯದ ಹಿಮಾವೃತ ಮತ್ತು ದುರ್ಗಮ ಶಿಖರಗಳಿಂದ ಹಿಡಿದು ಕಚ್ ಮತ್ತು ಬಾರ್ಮರ್ನ ಕಠಿಣ ಮರುಭೂಮಿಗಳು ಮತ್ತು ವಿಶಾಲವಾದ ಸಾಗರಗಳವರೆಗೆ ವೀರ ಸೈನಿಕರು ದೇಶವನ್ನು ನಿರ್ಭಯವಾಗಿ ರಕ್ಷಿಸಿ, ಅದರ ಭದ್ರತೆಯನ್ನು ಖಾತ್ರಿಪಡಿಸಿದ ಹೆಮ್ಮೆಯ ಇತಿಹಾಸವೂ ನಮ್ಮಲ್ಲಿದೆ ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರ, ಎಡಪಂಥೀಯ ಉಗ್ರವಾದ ಮತ್ತು ಈಶಾನ್ಯದಲ್ಲಿ ದಶಕಗಳಿಂದ ಅಶಾಂತಿಯ ವಾತಾವರಣವಿತ್ತು ಆದರೆ ಕಳೆದ ದಶಕದಲ್ಲಿ ನಮ್ಮ ಭದ್ರತಾ ಪಡೆಗಳ ಕರ್ತವ್ಯನಿಷ್ಠೆಯಿಂದಾಗಿ ನಾವು ಈ ಸ್ಥಳಗಳಲ್ಲಿ ಶಾಂತಿ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಆದರೆ ನಮ್ಮ ಹೋರಾಟ ಇನ್ನೂ ಮುಗಿದಿಲ್ಲ ಎಂದರು. ಡ್ರೋನ್ಗಳ ಬೆದರಿಕೆ, ಮಾದಕ ದ್ರವ್ಯ ವ್ಯಾಪಾರ, ಸೈಬರ್ ಅಪರಾಧಗಳು, ಕೃತಕಬುದ್ಧಿಮತ್ತೆ ಮೂಲಕ ಅಶಾಂತಿ ಹರಡುವ ಪ್ರಯತ್ನಗಳು, ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಪಿತೂರಿಗಳು, ಒಳನುಸುಳುವಿಕೆ, ಅಕ್ರಮ ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಭಯೋತ್ಪಾದನೆಯಂತಹ ಸವಾಲುಗಳು ಇಂದು ನಮ್ಮ ಮುಂದೆ ನಿಂತಿವೆ. ಬೆದರಿಕೆಗಳು ಮತ್ತು ಸವಾಲುಗಳು ಎಷ್ಟೇ ದೊಡ್ಡದಾದರೂ ನಮ್ಮ ಸೈನಿಕರ ದೃಢ ಸಂಕಲ್ಪದ ಮುಂದೆ ಅವರು ನಿಲ್ಲಲಾರರವು ಎಂದು ಶ್ರೀ ಶಾ ಹೇಳಿದರು.

2047ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಈಡೇರಿಸಲು ದೇಶಾದ್ಯಂತ ಪೊಲೀಸ್ ಸಿಬ್ಬಂದಿ ಸಂಕಲ್ಪ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ದೇಶದ ಸಂಸತ್ತು ಅಂಗೀಕರಿಸಿದ ಮೂರು ಹೊಸ ಕ್ರಿಮಿನಲ್ ಕಾನೂನುಗಳ ಅನುಷ್ಠಾನವು ಈಗಾಗಲೇ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾರಂಭವಾಗಿದೆ ಎಂದು ಅವರು ಹೇಳಿದರು. ಒಮ್ಮೆ ಈ ಕಾನೂನುಗಳು ಸಂಪೂರ್ಣವಾಗಿ ಜಾರಿಯಾದರೆ ನಮ್ಮ ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ವಿಶ್ವದ ಅತ್ಯಂತ ಆಧುನಿಕ ನ್ಯಾಯ ವ್ಯವಸ್ಥೆಯಾಗಲಿದೆ ಎಂದು ಹೇಳಿದರು. ದೇಶದ ಯಾವುದೇ ಮೂಲೆಯಲ್ಲಿ ದಾಖಲಾದ ಯಾವುದೇ ಅಪರಾಧಕ್ಕೆ ಸುಪ್ರೀಂ ಕೋರ್ಟ್ ನವರೆಗೂ ಮೂರು ವರ್ಷಗಳಲ್ಲಿ ನ್ಯಾಯ ಸಿಗುತ್ತದೆ ಎಂದು ಅವರು ಹೇಳಿದರು. ಈ ಮೂರು ಹೊಸ ಕಾನೂನುಗಳ ಅನುಷ್ಠಾನದಲ್ಲಿ ನ್ಯಾಯ ವಿಳಂಬವನ್ನು ನಿವಾರಿಸುವ ಮಾರ್ಗವಿದೆ ಎಂದು ಅವರು ಒತ್ತಿ ಹೇಳಿದರು.

ಮೋದಿ ಸರ್ಕಾರವು ಪೊಲೀಸ್ ಸಿಬ್ಬಂದಿಯ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು.  ಆಯುಷ್ಮಾನ್ ಸಿ ಎ ಪಿ ಎಫ್ ಯೋಜನೆಯ ಮೂಲಕ 41 ಲಕ್ಷಕ್ಕೂ ಹೆಚ್ಚು ಕಾರ್ಡ್ ಗಳನ್ನು ವಿತರಿಸಲಾಗಿದೆ ಮತ್ತು ಸುಮಾರು ರೂ. 1422 ಕೋಟಿ ಮೊತ್ತದ 13 ಲಕ್ಷ ಕೋರಿಕೆ (ಕ್ಲೈಮ್) ಗಳು ಇತ್ಯರ್ಥವಾಗಿದೆ. ಈ ಕಾರ್ಡ್ ಮೂಲಕ ನಮ್ಮ ಸಿಬ್ಬಂದಿ  ಮತ್ತು ಅವರ ಕುಟುಂಬದವರ ಆರೋಗ್ಯವನ್ನು ಎಲ್ಲಿ ಬೇಕಾದರೂ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ವಸತಿ ಯೋಜನೆಯಲ್ಲಿಯೂ ವಸತಿ ಸಂತೃಪ್ತಿ ಅನುಪಾತ ಹೆಚ್ಚಿಸುವ ಗುರಿ ಹೊಂದಿದ್ದೇವೆ ಎಂದರು. ಮೋದಿ ಸರ್ಕಾರವು 2015 ರಲ್ಲಿ 3100 ಕೋಟಿ ರೂಪಾಯಿ ವೆಚ್ಚದಲ್ಲಿ 13,000 ಮನೆಗಳು ಮತ್ತು 113 ಬ್ಯಾರಕ್ ಗಳ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು, ಇದರಲ್ಲಿ 11,276 ಮನೆಗಳು ಮತ್ತು 111 ಬ್ಯಾರಕ್ ಗಳ ನಿರ್ಮಾಣವು ಮಾರ್ಚ್ 2024 ರ ವೇಳೆಗೆ ಪೂರ್ಣಗೊಂಡಿದೆ. ಅವರು ಸಿಎಪಿಎಫ್ ಇ-ಆವಾಸ್ ವೆಬ್ ಪೋರ್ಟಲ್ ಮೂಲಕ ಖಾಲಿ ಮನೆಗಳನ್ನು ಹಂಚಲಾಗಿದೆ ಎಂದು ಹೇಳಿದರು. ಪ್ರಧಾನಮಂತ್ರಿಗಳ ವಿದ್ಯಾರ್ಥಿವೇತನ ಯೋಜನೆಯು ನಮ್ಮ ಪೊಲೀಸ್ ಸಿಬ್ಬಂದಿಯ ಮಕ್ಕಳಿಗೆ ವರದಾನವಾಗಿದೆ ಎಂದು ಸಾಬೀತಾಗಿದೆ. ಇದರೊಂದಿಗೆ ಎಂಬಿಬಿಎಸ್ನಲ್ಲಿ 26 ಮತ್ತು ಬಿಡಿಎಸ್ನಲ್ಲಿ 3 ಸೀಟುಗಳನ್ನು ಸಿಎಪಿಎಫ್ ಸಿಬ್ಬಂದಿಯ ಕುಟುಂಬದ ಸದಸ್ಯರಿಗೆ ಮೀಸಲಿಡಲಾಗಿದೆ. ಕೇಂದ್ರೀಯ ಎಕ್ಸ್ ಗ್ರೇಷಿಯಾ ಮೊತ್ತವನ್ನು ಹೆಚ್ಚಿಸುವುದು ಮತ್ತು ಏಕರೂಪದ ಪರಿಹಾರವನ್ನು ನೀಡುವುದು ನಮ್ಮ ಯೋಧರ ಕುಟುಂಬಗಳಿಗೆ ಸಾಕಷ್ಟು ಪರಿಹಾರವನ್ನು ನೀಡುತ್ತದೆ ಎಂದು ಅವರು ಹೇಳಿದರು. 

ನಮ್ಮ ಪೊಲೀಸ್ ಸಿಬ್ಬಂದಿ, ವಿಶೇಷವಾಗಿ ಸಿ ಎ ಪಿ ಎಫ್ ಗಳ ಸಿಬ್ಬಂದಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದರ ಜೊತೆಗೆ ದೇಶದ ಭದ್ರತೆಯನ್ನು ಖಾತ್ರಿಪಡಿಸುವುದರ ಜೊತೆಗೆ ಅನೇಕ ಇತರ ಕಾರ್ಯಗಳನ್ನು ನಿರ್ವಹಿಸುತ್ತಾರೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. 2019 ರಿಂದ 2024 ರವರೆಗೆ ಸಿಎಪಿಎಫ್ ಸಿಬ್ಬಂದಿ ಸುಮಾರು 5 ಕೋಟಿ 80 ಲಕ್ಷ 90 ಸಾವಿರ ಸಸಿಗಳನ್ನು ನೆಟ್ಟು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದರು. ಸಿವಿಕ್ ಆಕ್ಷನ್ ಕಾರ್ಯಕ್ರಮದ ಮೂಲಕ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಎಲ್ಲಾ ಯೋಜನೆಗಳನ್ನು ಎಲ್ಲಾ ಗಡಿ ಜಿಲ್ಲೆಗಳ ನಾಗರಿಕರಿಗೆ ತಲುಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಶ್ರೀ ಶಾ ಹೇಳಿದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಬಲಿದಾನ ವ್ಯರ್ಥವಾಗದು ಎಂದು ಗೃಹ ಸಚಿವರು ಹೇಳಿದರು,. ಈ ಸೈನಿಕರ ತ್ಯಾಗ ಬಲಿದಾನದಿಂದ ದೇಶದ ಭದ್ರತೆ ಖಾತ್ರಿಯಾಗಲಿದ್ದು, ಈ ಸೈನಿಕರ ಬಲಿದಾನದಿಂದಾಗಿ ದೇಶದ ಭದ್ರತೆ ಖಾತ್ರಿಯಾಗಿದ್ದು, 2047ರ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಉಳಿಯಲಿದೆ. ಸ್ವಾತಂತ್ರ್ಯದ ಶತಮಾನೋತ್ಸವದ ಸಂದರ್ಭದಲ್ಲಿಯೂ ಕೃತಜ್ಞರಾಗಿರುವ ರಾಷ್ಟ್ರವು ಈ ಸೈನಿಕರ ತ್ಯಾಗವನ್ನು ಸದಾ ಗೌರವದಿಂದ ಸ್ಮರಿಸುತ್ತದೆ ಎಂದು ಹೇಳಿದರು.

 

*****




(Release ID: 2066718) Visitor Counter : 22