ಸಂಪುಟ
azadi ka amrit mahotsav g20-india-2023

2020-21 ರಿಂದ 2025-26 ರವರೆಗೆ ಪ್ರಮುಖ ಬಂದರುಗಳು ಮತ್ತು ಹಡಗುಕಟ್ಟೆ ಕಾರ್ಮಿಕ ಮಂಡಳಿಯ ನೌಕರರು/ ಕಾರ್ಮಿಕರಿಗೆ ಪರಿಷ್ಕೃತ ಉತ್ಪಾದಕತೆ ಲಿಂಕ್ಡ್‌ ರಿವಾರ್ಡ್‌ (ಪಿಎಲ್‌ಆರ್‌) ಯೋಜನೆಗೆ ಸಂಪುಟದ ಅನುಮೋದನೆ

Posted On: 03 OCT 2024 8:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷ ತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, 2020-21ರಿಂದ 2025-26ರವರೆಗೆ ಪ್ರಮುಖ ಬಂದರುಗಳು ಮತ್ತು ಹಡಗುಕಟ್ಟೆ ಕಾರ್ಮಿಕ ಮಂಡಳಿಯ ನೌಕರರು/ಕಾರ್ಮಿಕರಿಗೆ ಹಾಲಿ ಇರುವ ಉತ್ಪಾದಕತೆ ಲಿಂಕ್ಡ್‌ ರಿವಾರ್ಡ್‌ (ಪಿಎಲ್‌ಆರ್‌) ಯೋಜನೆಯನ್ನು ಮಾರ್ಪಡಿಸಲು ತನ್ನ ಅನುಮೋದನೆ ನೀಡಿದೆ.

2020-21 ರಿಂದ 2025-26 ರವರೆಗೆ ಅನ್ವಯವಾಗುವ ಪರಿಷ್ಕೃತ ಪಿಎಲ್‌ಆರ್‌ ಯೋಜನೆಯು ಪ್ರಮುಖ ಬಂದರು ಪ್ರಾಧಿಕಾರಗಳ ಸುಮಾರು 20,704 ಉದ್ಯೋಗಿಗಳು ಮತ್ತು ಡಾಕ್‌ ಲೇಬರ್‌ ಬೋರ್ಡ್‌ ನೌಕರರು / ಕಾರ್ಮಿಕರಿಗೆ ಪ್ರಯೋಜನವನ್ನು ನೀಡುತ್ತದೆ. ಇಡೀ ಅವಧಿಗೆ ಒಟ್ಟು ಆರ್ಥಿಕ ಪರಿಣಾಮವು ಸುಮಾರು 200 ಕೋಟಿ ರೂ.ಗಳಾಗಿರುತ್ತದೆ.

ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು 2020-21 ರಿಂದ 2025-26 ರವರೆಗೆ ಎಲ್ಲಾ ಪ್ರಮುಖ ಬಂದರು ಪ್ರಾಧಿಕಾರಗಳು ಮತ್ತು ಡಾಕ್‌ ಲೇಬರ್‌ ಬೋರ್ಡ್‌ ನೌಕರರು / ಕಾರ್ಮಿಕರಿಗೆ ಉತ್ಪಾದಕತೆ ಲಿಂಕ್ಡ್‌ ರಿವಾರ್ಡ್‌ (ಪಿಎಲ್‌ಆರ್‌) ಯೋಜನೆಯನ್ನು ಮಾರ್ಪಡಿಸಿದೆ. ಉತ್ಪಾದಕತೆ ಲಿಂಕ್ಡ್‌ ರಿವಾರ್ಡ್‌ (ಪಿಎಲ್‌ಆರ್‌) ಅನ್ನು ತಿಂಗಳಿಗೆ ರೂ.7000/- ಬೋನಸ್‌ ಲೆಕ್ಕಾಚಾರಕ್ಕಾಗಿ ವೇತನ ಮಿತಿಯ ಮೇಲೆ ಲೆಕ್ಕಹಾಕಲಾಗಿದೆ. ಬಂದರು ನಿರ್ದಿಷ್ಟ ಕಾರ್ಯಕ್ಷ ಮತೆಯ ವೇಟೇಜ್‌ಅನ್ನು ಶೇ.50 ರಿಂದ ಶೇ.55ಕ್ಕೆ ಹೆಚ್ಚಿಸುವ ಮೂಲಕ ಮತ್ತು ಶೇ.60 ಕ್ಕೆ ಹೆಚ್ಚಿಸುವ ಮೂಲಕ ಪಿಎಲ್‌ಆರ್‌ಅನ್ನು ವಾರ್ಷಿಕವಾಗಿ ಪಾವತಿಸಲಾಗುತ್ತದೆ. 2025-26ರವರೆಗಿನ ಅವಧಿಯಲ್ಲಿಅಖಿಲ ಭಾರತ ಬಂದರು ಕಾರ್ಯಕ್ಷಮತೆಯ ವೇಟೇಜ್‌ ಸಹ ಶೇ.40ಕ್ಕೆ ಇಳಿಯುತ್ತದೆ, ಇದು ಅಖಿಲ ಭಾರತ ಬಂದರು ಕಾರ್ಯಕ್ಷ ಮತೆ ಮತ್ತು ನಿರ್ದಿಷ್ಟ ಬಂದರು ಕಾರ್ಯಕ್ಷ ಮತೆಗೆ ಅಸ್ತಿತ್ವದಲ್ಲಿರುವ ಶೇ.50 ರಷ್ಟು ಸಮಾನ ತೂಕವನ್ನು ಬದಲಾಯಿಸುತ್ತದೆ. ಪ್ರಸ್ತಾವಿತ ಮಾರ್ಪಾಡು ಪ್ರಮುಖ ಬಂದರುಗಳ ನಡುವಿನ ಸ್ಪರ್ಧೆಯ ಜತೆಗೆ ದಕ್ಷತೆಯ ಅಂಶವನ್ನು ತರುತ್ತದೆ ಎಂದು ನಿರೀಕ್ಷಿಸಲಾಗಿದೆ.

ಈ ಪಿಎಲ್‌ಆರ್‌ ಯೋಜನೆಯು ಉತ್ತಮ ಉತ್ಪಾದಕತೆಯನ್ನು ಉತ್ತೇಜಿಸುವುದರ ಜತೆಗೆ ಬಂದರು ವಲಯದಲ್ಲಿಉತ್ತಮ ಕೈಗಾರಿಕಾ ಸಂಬಂಧ ಮತ್ತು ಅನುಕೂಲಕರ ಕೆಲಸದ ವಾತಾವರಣವನ್ನು ಬೆಳೆಸುತ್ತದೆ.

ಉತ್ಪಾದಕತೆ ಲಿಂಕ್ಡ್‌ ರಿವಾರ್ಡ್‌ (ಪಿಎಲ್‌ಆರ್‌) ಎಂಬುದು ಪ್ರಮುಖ ಬಂದರು ಟ್ರಸ್ಟ್‌ಗಳು ಮತ್ತು ಡಾಕ್‌ ಲೇಬರ್‌ ಬೋರ್ಡ್‌ನ ಉದ್ಯೋಗಿಗಳು / ಕಾರ್ಮಿಕರಿಗೆ ಅಸ್ತಿತ್ವದಲ್ಲಿರುವ ಯೋಜನೆಯಾಗಿದ್ದು, ಇದರಲ್ಲಿ ಪ್ರಮುಖ ಬಂದರು ಪ್ರಾಧಿಕಾರಗಳ ಆಡಳಿತ ಮಂಡಳಿ ಮತ್ತು ಕಾರ್ಮಿಕ ಒಕ್ಕೂಟಗಳ ನಡುವೆ ಮಾಡಿಕೊಂಡ ಒಪ್ಪಂದದ ಆಧಾರದ ಮೇಲೆ ವಾರ್ಷಿಕ ಆಧಾರದ ಮೇಲೆ ಉದ್ಯೋಗಿಗಳು / ಕಾರ್ಮಿಕರಿಗೆ ಆರ್ಥಿಕ ಬಹುಮಾನವನ್ನು ನೀಡಲಾಗುತ್ತದೆ.

 

*****



(Release ID: 2061781) Visitor Counter : 28