ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ (ಎಸ್ ಡಿ ಆರ್ ಎಫ್) ಯಿಂದ ಕೇಂದ್ರ ಪಾಲು ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (ಎನ್ ಡಿ ಆರ್ ಎಫ್) ಯಿಂದ ಮುಂಗಡವಾಗಿ 14 ಪ್ರವಾಹ ಪೀಡಿತ ರಾಜ್ಯಗಳಿಗೆ  ಎಂ.ಎಚ್.ಎ.ಯಿಂದ 5858.60 ಕೋಟಿ ರೂ.ಬಿಡುಗಡೆ


ನೈಸರ್ಗಿಕ ಪ್ರಕೋಪಕ್ಕೆ ಈಡಾಗಿರುವ ರಾಜ್ಯಗಳ ಜನರು ಎದುರಿಸುತ್ತಿರುವ ಕಷ್ಟಗಳನ್ನು ತಗ್ಗಿಸುವಲ್ಲಿ ಮೋದಿ ಸರ್ಕಾರವು ರಾಜ್ಯಗಳ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ

ಪ್ರವಾಹ ಪೀಡಿತ ರಾಜ್ಯಗಳಾದ ಅಸ್ಸಾಂ, ಮಿಜೋರಾಂ, ಕೇರಳ, ತ್ರಿಪುರಾ, ನಾಗಾಲ್ಯಾಂಡ್, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಣಿಪುರಗಳಿಗೆ ಹಾನಿಯನ್ನು ಸ್ಥಳದಲ್ಲೇ ಮೌಲ್ಯಮಾಪನ ಮಾಡುವುದಕ್ಕಾಗಿ ಅಂತರ ಸಚಿವಾಲಯದ ಕೇಂದ್ರ ತಂಡಗಳನ್ನು (ಐಎಂಸಿಟಿ) ಕಳುಹಿಸಲಾಗಿದೆ

ಇತ್ತೀಚೆಗೆ ಪ್ರವಾಹದಿಂದ ಹಾನಿಗೊಳಗಾದ ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿನ ಹಾನಿಯನ್ನು  ಸ್ಥಳದಲ್ಲೇ ಮೌಲ್ಯಮಾಪನ ಮಾಡಲು ಐಎಂಸಿಟಿಗಳನ್ನು ಶೀಘ್ರದಲ್ಲೇ ಕಳುಹಿಸಲಾಗುವುದು

ಐಎಂಸಿಟಿಗಳ ಮೌಲ್ಯಮಾಪನ ವರದಿಗಳನ್ನು ಸ್ವೀಕರಿಸಿದ ನಂತರ, ಸ್ಥಾಪಿತ ಕಾರ್ಯವಿಧಾನದ ಪ್ರಕಾರ ವಿಪತ್ತು ಪೀಡಿತ ರಾಜ್ಯಗಳಿಗೆ ಎನ್ ಡಿ ಆರ್ ಎಫ್ ನಿಂದ ಹೆಚ್ಚುವರಿ ಆರ್ಥಿಕ ಸಹಾಯವನ್ನು ಅನುಮೋದಿಸಲಾಗುವುದು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಈ ವರ್ಷ 21 ರಾಜ್ಯಗಳಿಗೆ 14,958 ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ಬಿಡುಗಡೆ ಮಾಡಲಾಗಿದೆ

Posted On: 01 OCT 2024 6:46PM by PIB Bengaluru

ರಾಜ್ಯ ವಿಪತ್ತು ಪ್ರತಿಕ್ರಿಯಾ ನಿಧಿ (ಎಸ್ ಡಿ ಆರ್ ಎಫ್)ಯಿಂದ ಕೇಂದ್ರದ ಪಾಲಿನ ಹಣವಾಗಿ ಮತ್ತು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿ (ಎನ್ ಡಿ ಆರ್ ಎಫ್) ಯಿಂದ ಮುಂಗಡವಾಗಿ ಗೃಹ ಸಚಿವಾಲಯವು (ಎಂಎಚ್ಎ) 14 ಪ್ರವಾಹ ಪೀಡಿತ ರಾಜ್ಯಗಳಿಗೆ 5858.60 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಹಾರಾಷ್ಟ್ರಕ್ಕೆ 1492 ಕೋಟಿ ರೂ., ಆಂಧ್ರಪ್ರದೇಶಕ್ಕೆ 1036 ಕೋಟಿ ರೂ., ಅಸ್ಸಾಂಗೆ 716 ಕೋಟಿ ರೂ., ಬಿಹಾರಕ್ಕೆ 655.60 ಕೋಟಿ ರೂ., ಗುಜರಾತ್ ಗೆ 600 ಕೋಟಿ ರೂ., ಹಿಮಾಚಲ ಪ್ರದೇಶಕ್ಕೆ 189.20 ಕೋಟಿ ರೂ., ಕೇರಳಕ್ಕೆ 145.60 ಕೋಟಿ ರೂ., ಮಣಿಪುರಕ್ಕೆ 50 ಕೋಟಿ ರೂ., ಮಿಜೋರಾಂಗೆ 21.60 ಕೋಟಿ ರೂ., ನಾಗಾಲ್ಯಾಂಡಿಗೆ 19.20   ಕೋ.ರೂ., ಸಿಕ್ಕಿಂಗೆ  23.60  ಕೋ.ರೂ., ತೆಲಂಗಾಣಕ್ಕೆ  416.80  ಕೋ.ರೂ., ತ್ರಿಪುರಾಕ್ಕೆ  25   ಕೋ.ರೂ., ಪಶ್ಚಿಮ ಬಂಗಾಳಕ್ಕೆ  468 ಕೋ.ರೂ. ಸೇರಿದೆ.   ಈ ವರ್ಷ ನೈಋತ್ಯ ಮಾನ್ಸೂನ್ ಸಮಯದಲ್ಲಿ ಅತಿ ಹೆಚ್ಚು ಮಳೆ, ಪ್ರವಾಹ ಮತ್ತು ಭೂಕುಸಿತದಿಂದಾಗಿ ರಾಜ್ಯಗಳು ಬಾಧಿತವಾಗಿವೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಮೋದಿ ಸರ್ಕಾರವು ನೈಸರ್ಗಿಕ ವಿಪತ್ತುಗಳಿಂದ ಬಾಧಿತವಾದ ರಾಜ್ಯಗಳ ಜನರ ಕಷ್ಟಗಳನ್ನು ತಗ್ಗಿಸಲು  ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ.

ಪ್ರವಾಹ ಪೀಡಿತ ರಾಜ್ಯಗಳಾದ ಅಸ್ಸಾಂ, ಮಿಜೋರಾಂ, ಕೇರಳ, ತ್ರಿಪುರಾ, ನಾಗಾಲ್ಯಾಂಡ್, ಗುಜರಾತ್, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಣಿಪುರದಲ್ಲಿ ಹಾನಿಯನ್ನು ಸ್ಥಳದಲ್ಲೇ ಮೌಲ್ಯಮಾಪನ ಮಾಡುವುದಕ್ಕಾಗಿ ಅಂತರ ಸಚಿವಾಲಯದ ಕೇಂದ್ರ ತಂಡಗಳನ್ನು (ಐಎಂಸಿಟಿ) ಕಳುಹಿಸಲಾಗಿದೆ.

ಇದಲ್ಲದೆ, ಇತ್ತೀಚೆಗೆ ಪ್ರವಾಹದಿಂದ ಬಾಧಿತವಾದ ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿನ ಹಾನಿಯನ್ನು ಸ್ಥಳದಲ್ಲೇ ಮೌಲ್ಯಮಾಪನ ಮಾಡಲು ಐಎಂಸಿಟಿಗಳನ್ನು ಶೀಘ್ರದಲ್ಲೇ ಕಳುಹಿಸಲಾಗುವುದು. ಐಎಂಸಿಟಿಗಳ ಮೌಲ್ಯಮಾಪನ ವರದಿಗಳನ್ನು ಸ್ವೀಕರಿಸಿದ ನಂತರ, ಸ್ಥಾಪಿತ ಕಾರ್ಯವಿಧಾನದ ಪ್ರಕಾರ ವಿಪತ್ತು ಪೀಡಿತ ರಾಜ್ಯಗಳಿಗೆ ಎನ್ಡಿಆರ್ಎಫ್ನಿಂದ ಹೆಚ್ಚುವರಿ ಆರ್ಥಿಕ ಸಹಾಯವನ್ನು ಅನುಮೋದಿಸಲಾಗುವುದು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ, ಈ ವರ್ಷದಲ್ಲಿ ಈಗಾಗಲೇ 21 ರಾಜ್ಯಗಳಿಗೆ 14,958 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಎಸ್ಡಿಆರ್ಎಫ್ನಿಂದ 21 ರಾಜ್ಯಗಳಿಗೆ 9044.80 ಕೋಟಿ ರೂ., ಎನ್ಡಿಆರ್ಎಫ್ನಿಂದ 15 ರಾಜ್ಯಗಳಿಗೆ 4528.66 ಕೋಟಿ ರೂ., 11 ರಾಜ್ಯಗಳಿಗೆ ರಾಜ್ಯ ವಿಪತ್ತು ತಗ್ಗಿಸುವ ನಿಧಿಯಿಂದ (ಎಸ್ಡಿಎಂಎಫ್) 1385.45 ಕೋಟಿ ರೂ.ಸೇರಿದೆ.

ಆರ್ಥಿಕ ಸಹಾಯದ ಜೊತೆಗೆ, ಕೇಂದ್ರ ಸರ್ಕಾರವು ಎಲ್ಲಾ ಪ್ರವಾಹ ಪೀಡಿತ ರಾಜ್ಯಗಳಿಗೆ ಅಗತ್ಯವಾದ ಎನ್ಡಿಆರ್ಎಫ್ ತಂಡಗಳು, ಸೇನಾ ತಂಡಗಳು ಮತ್ತು ವಾಯುಪಡೆಯ ಬೆಂಬಲ ಸೇರಿದಂತೆ ಎಲ್ಲಾ ಲಾಜಿಸ್ಟಿಕ್ ಸಹಾಯವನ್ನು ಒದಗಿಸಿದೆ.

 

*****


(Release ID: 2061024) Visitor Counter : 37