ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ರಾಷ್ಟ್ರಪತಿಗಳು ಸಿಯಾಚಿನ್ ಬೇಸ್ ಕ್ಯಾಂಪಿಗೆ ಭೇಟಿ ಇತ್ತು ಸೈನಿಕರೊಂದಿಗೆ ಮಾತನಾಡಿದರು

Posted On: 26 SEP 2024 2:40PM by PIB Bengaluru

ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು (ಸೆಪ್ಟೆಂಬರ್ 26, 2024) ಸಿಯಾಚಿನ್ ಬೇಸ್ ಕ್ಯಾಂಪ್ ಗೆ ಭೇಟಿ ನೀಡಿದರು ಮತ್ತು ಸಿಯಾಚಿನ್ ಯುದ್ಧ ಸ್ಮಾರಕದಲ್ಲಿ ಗೌರವ ಸಲ್ಲಿಸಿದರು. ಈ ಯುದ್ಧ ಸ್ಮಾರಕವು ಏಪ್ರಿಲ್ 13, 1984 ರಂದು ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಭಾರತೀಯ ಸೇನೆಯು ಆಪರೇಷನ್ ಮೇಘದೂತ್ ಅನ್ನು ಪ್ರಾರಂಭಿಸಿದಾಗಿನಿಂದ ಹುತಾತ್ಮರಾದ ಸೈನಿಕರು ಮತ್ತು ಅಧಿಕಾರಿಗಳ ತ್ಯಾಗದ ಸಂಕೇತವಾಗಿದೆ. ರಾಷ್ಟ್ರಪತಿಗಳು ಅಲ್ಲಿ ನಿಯೋಜನೆಗೊಂಡಿದ್ದ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು.

ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿ, ನಾನು ಅವರ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಮತ್ತು ಎಲ್ಲಾ ನಾಗರಿಕರು ಅವರ ಶೌರ್ಯಕ್ಕೆ ವಂದಿಸುತ್ತಾರೆ ಎಂದು ಹೇಳಿದರು.

ಏಪ್ರಿಲ್ 1984 ರಲ್ಲಿ ಆಪರೇಷನ್ ಮೇಘದೂತ್ ಪ್ರಾರಂಭವಾದಾಗಿನಿಂದ, ಭಾರತೀಯ ಸಶಸ್ತ್ರ ಪಡೆಗಳ ವೀರ ಸೈನಿಕರು ಮತ್ತು ಅಧಿಕಾರಿಗಳು ಈ ಪ್ರದೇಶದ ಭದ್ರತೆಯನ್ನು ಖಾತ್ರಿಪಡಿಸಿದ್ದಾರೆ ಎಂದು ರಾಷ್ಟ್ರಪತಿಗಳು ಹೇಳಿದರು.  ಅವರು ತೀವ್ರ ಪ್ರತಿಕೂಲ  ಹವಾಮಾನ ಪರಿಸ್ಥಿತಿಗಳನ್ನು ಎದುರಿಸುತ್ತಾರೆ. ಭಾರೀ ಹಿಮಪಾತ ಮತ್ತು ಮೈನಸ್ 50 ಡಿಗ್ರಿ ತಾಪಮಾನದಂತಹ ಕಠಿಣ ಸಂದರ್ಭಗಳಲ್ಲಿಯೂ, ಅವರು ಸಮರ್ಪಣೆ ಮತ್ತು ಜಾಗರೂಕತೆಯಿಂದ  ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ. ಅವರು ಮಾತೃಭೂಮಿಯನ್ನು ರಕ್ಷಿಸುವಲ್ಲಿ ತ್ಯಾಗ ಮತ್ತು ಸಹಿಷ್ಣುತೆಯ ಅಸಾಮಾನ್ಯ ಮಾದರಿಯಾಗಿದ್ದಾರೆ. ಎಲ್ಲಾ ಭಾರತೀಯರಿಗೆ  ಯೋಧರ ತ್ಯಾಗ ಮತ್ತು ಶೌರ್ಯದ ಅರಿವಿದೆ ಮತ್ತು ನಾವು ಅವರನ್ನು ಗೌರವಿಸುತ್ತೇವೆ ಎಂದು ಅವರು ಸೈನಿಕರಿಗೆ ಹೇಳಿದರು.

ರಾಷ್ಟ್ರಪತಿಗಳು ಭಾಷಣವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Click here to see the President speech

 

*****



(Release ID: 2059267) Visitor Counter : 22