ಪ್ರಧಾನ ಮಂತ್ರಿಯವರ ಕಛೇರಿ
‘ಮೇಕ್ ಇನ್ ಇಂಡಿಯಾ’ 140 ಕೋಟಿ ಭಾರತೀಯರ ಸಾಮೂಹಿಕ ಸಂಕಲ್ಪವನ್ನು ವಿವರಿಸುತ್ತದೆ: ಪ್ರಧಾನಮಂತ್ರಿ
ಕಳೆದೊಂದು ದಶಕದಲ್ಲಿ ಈ ಆಂದೋಲನ ಯಶಸ್ಸಿಗೆ ಅವಿರತವಾಗಿ ಶ್ರಮಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು
Posted On:
25 SEP 2024 11:33AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಉಪಕ್ರಮ 10 ವರ್ಷ ಪೂರೈಸಿರುವುದಕ್ಕೆ ಶ್ಲಾಘಿಸಿದ್ದಾರೆ. ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆ ರಾಷ್ಟ್ರವನ್ನು ಉತ್ಪಾದನೆ ಮತ್ತು ನಾವೀನ್ಯತೆಯ ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸುವ 140 ಕೋಟಿ ಭಾರತೀಯರ ಸಾಮೂಹಿಕ ಸಂಕಲ್ಪವನ್ನು ವಿವರಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಬಲವಾಗಿ ಪ್ರತಿಪಾದಿಸಿದರು. ಸಾಧ್ಯವಿರುವ ಎಲ್ಲ ವಿಧಾನಗಳ ಮೂಲಕ ‘ಮೇಕ್ ಇನ್ ಇಂಡಿಯಾವನ್ನು ಪ್ರೋತ್ಸಾಹಿಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ಪ್ರಧಾನಮಂತ್ರಿ ಅವರು ತಮ್ಮ ಸಾಮಾಜಿಕ ಜಾಲತಾಣ X ನಲ್ಲಿ ಹೀಗೆ ಹೇಳಿದ್ದಾರೆ.
“ಮೇಕ್ ಇನ್ ಇಂಡಿಯಾ ಇಂದಿಗೆ 10 ವರ್ಷ ಪೂರೈಸಿದೆ. ಕಳೆದ ಒಂದು ದಶಕದಲ್ಲಿ ಈ ಆಂದೋಲನವನ್ನು ಯಶಸ್ವಿಗೊಳಿಸಲು ಅವಿರತವಾಗಿ ಶ್ರಮಿಸುತ್ತಿರುವ ಎಲ್ಲರನ್ನು ನಾನು ಅಭಿನಂದಿಸುತ್ತೇನೆ. ‘ಮೇಕ್ ಇನ್ ಇಂಡಿಯಾ’ನಮ್ಮ ರಾಷ್ಟ್ರವನ್ನು ಉತ್ಪಾದನೆ ಮತ್ತು ನಾವೀನ್ಯತೆಯ ಶಕ್ತಿ ಕೇಂದ್ರವನ್ನಾಗಿ ಮಾಡಲು 140 ಕೋಟಿ ಭಾರತೀಯರ ಸಾಮೂಹಿಕ ಸಂಕಲ್ಪವನ್ನು ವಿವರಿಸುತ್ತದೆ. ನಾನಾ ಕ್ಷೇತ್ರಗಳಲ್ಲಿ ರಫ್ತು ಹೇಗೆ ಏರಿಕೆಯಾಗಿದೆ, ಸಾಮರ್ಥ್ಯಗಳನ್ನು ಸೃಷ್ಟಿಸಲಾಗಿದೆ ಮತ್ತು ಹೇಗೆ ಆರ್ಥಿಕತೆಯನ್ನು ಬಲಪಡಿಸಲಾಗಿದೆ ಎಂಬುದು ಗಮನಾರ್ಹವಾಗಿದೆ.
ಸಾಧ್ಯವಿರುವ ಎಲ್ಲ ವಿಧಾನಗಳ ಮೂಲಕ ‘ಮೇಕ್ ಇನ್ ಇಂಡಿಯಾ’ವನ್ನು ಪ್ರೋತ್ಸಾಹಿಸಲು ಭಾರತ ಸರ್ಕಾರ ಬದ್ಧವಾಗಿದೆ. ಸುಧಾರಣೆಗಳಲ್ಲಿ ಭಾರತದ ದಾಪುಗಾಲು ಕೂಡ ಮುಂದುವರಿಯುತ್ತದೆ. ನಾವು ಎಲ್ಲರೂ ಒಗ್ಗೂಡಿ ಆತ್ಮನಿರ್ಭರ ಮತ್ತು ವಿಕಸಿತ ಭಾರತವನ್ನು ನಿರ್ಮಿಸುತ್ತೇವೆ..!
*****
(Release ID: 2058843)
Visitor Counter : 39
Read this release in:
Punjabi
,
Odia
,
Manipuri
,
Urdu
,
Bengali-TR
,
Khasi
,
English
,
Hindi
,
Marathi
,
Assamese
,
Gujarati
,
Tamil
,
Telugu
,
Malayalam