ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

45ನೇ ಚೆಸ್ ಒಲಿಂಪಿಯಾಡ್‌ ನಲ್ಲಿ ಮುಕ್ತ ಮತ್ತು ಮಹಿಳಾ ವಿಭಾಗದಲ್ಲಿ ಚಿನ್ನ ಗೆದ್ದ ಭಾರತ ತಂಡ ಪ್ರಧಾನಮಂತ್ರಿ ಶ್ಲಾಘನೆ 

प्रविष्टि तिथि: 23 SEP 2024 1:15AM by PIB Bengaluru

45ನೇ ಚೆಸ್ ಒಲಿಂಪಿಯಾಡ್‌ನ ಮುಕ್ತ ಮತ್ತು ಮಹಿಳೆಯರ ವಿಭಾಗದಲ್ಲಿ ಚಿನ್ನ ಗೆದ್ದ ಭಾರತ ತಂಡಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ತಮ್ಮ ಗಮನಾರ್ಹ ಸಾಧನೆ ತೋರಿಸಿದ ಪುರುಷ ಮತ್ತು ಮಹಿಳಾ ಚೆಸ್ ತಂಡಗಳನ್ನು ಅವರು ಅಭಿನಂದಿಸಿದ್ದಾರೆ. 

ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಅವರು,

"ನಮ್ಮ ಚೆಸ್ ತಂಡವು 45 ನೇ #FIDE ಚೆಸ್ ಒಲಿಂಪಿಯಾಡ್  ಗೆಲ್ಲುವ ಮೂಲಕ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟಿದೆ! ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಮುಕ್ತ ಮತ್ತು ಮಹಿಳಾ ವಿಭಾಗಗಳಲ್ಲಿ ಚಿನ್ನ ಗೆದ್ದಿದೆ! ವಿಶಿಷ್ಟ ಸಾಧನೆ ತೋರಿಸಿದ ಪುರುಷ ಮತ್ತು ಮಹಿಳೆಯರ ಚೆಸ್ ತಂಡಗಳಿಗೆ ಅಭಿನಂದನೆಗಳು. ಈ ಗಮನಾರ್ಹ ಸಾಧನೆಯು ಭಾರತದ ಕ್ರೀಡಾ ಪಥದಲ್ಲಿ ಹೊಸ ಅಧ್ಯಾಯವನ್ನು ಗುರುತಿಸುತ್ತದೆ. ಈ ಯಶಸ್ಸು ಪೀಳಿಗೆಯ ಚೆಸ್ ಉತ್ಸಾಹಿಗಳಿಗೆ ಆಟದಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರೇಪಣೆ ನೀಡಲಿ.'' ಎಂದು ಬರೆದಿದ್ದಾರೆ.
 

 

 

*****

 


(रिलीज़ आईडी: 2057865) आगंतुक पटल : 86
इस विज्ञप्ति को इन भाषाओं में पढ़ें: Marathi , Tamil , Telugu , Malayalam , Assamese , Bengali , Odia , English , Urdu , हिन्दी , Manipuri , Punjabi , Punjabi , Gujarati