ಸಂಪುಟ
azadi ka amrit mahotsav g20-india-2023

2024ರ ಹಿಂಗಾರು ಹಂಗಾಮಿನಲ್ಲಿ(01.10.2024ರಿಂದ 31.03.2025ರ ವರೆಗೆ) ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳಿಗೆ ಪೋಷಕಾಂಶ ಆಧಾರಿತ ಸಬ್ಸಿಡಿ ದರ ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದ ಕೇಂದ್ರ ಸಚಿವ ಸಂಪುಟ ಸಭೆ

Posted On: 18 SEP 2024 3:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಿತು. 2024ರ ಹಿಂಗಾರು ಹಂಗಾಮಿನಲ್ಲಿ(01.10.2024ರಿಂದ 31.03.2025 ರ ವರೆಗೆ ಅನ್ವಯ) ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್(ಪಿ ಅಂಡ್ ಕೆ) ರಸಗೊಬ್ಬರಗಳಿಗೆ ಪೋಷಕಾಂಶ ಆಧಾರಿತ ಸಬ್ಸಿಡಿ(ಎನ್|ಬಿಎಸ್) ದರ ನಿಗದಿಪಡಿಸುವಂತೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವಾಲಯ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ.

2024ರ ಹಿಂಗಾರು ಹಂಗಾಮಿಗೆ ಸುಮಾರು 24,475.53 ಕೋಟಿ ರೂ. ತಾತ್ಕಾಲಿಕ ಬಜೆಟ್ ನೆರವಿನ ಅಗತ್ಯವಿದೆ.

ಪ್ರಯೋಜನಗಳು:

  • ರೈತರಿಗೆ ಸಬ್ಸಿಡಿ ದರದಲ್ಲಿ, ಕೈಗೆಟಕುವ ದರಕ್ಕೆ ಮತ್ತು ಸಮಂಜಸ ಬೆಲೆಗೆ ರಸಗೊಬ್ಬರ ಲಭ್ಯತೆಯನ್ನು ಖಚಿತಪಡಿಸಲಿದೆ.
  • ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಸಗೊಬ್ಬರಗಳ ಬೆಲೆಯಲ್ಲಿ ಆಗುತ್ತಿರುವ ಇತ್ತೀಚಿನ ಪ್ರವೃತ್ತಿಗಳು ಮತ್ತು ಅದಕ್ಕೆ ಸಂಬಂಧಿಸಿದ ಒಳಮಾಹಿತಿ ಆಧರಿಸಿ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್(ಪಿ ಅಂಡ್ ಕೆ) ರಸಗೊಬ್ಬರಗಳ ಮೇಲಿನ ಸಬ್ಸಿಡಿ ತರ್ಕಬದ್ಧಗೊಳಿಸಲಿದೆ.

ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು:

ರೈತರಿಗೆ ಕೈಗೆಟಕುವ ಬೆಲೆಗೆ ಈ ರಸಗೊಬ್ಬರಗಳ ಸುಗಮ ಲಭ್ಯತೆ ಖಚಿತಪಡಿಸಲು ಪಿ & ಕೆ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು 2024ರ ಹಿಂಗಾರು ಹಂಗಾಮಿಗೆ ಅನುಮೋದಿಸಿದ ದರಗಳ ಆಧಾರದ ಮೇಲೆ ಒದಗಿಸಲಾಗುತ್ತದೆ(01.10.2024 ರಿಂದ 31.03.2025 ರವರೆಗೆ ಅನ್ವಯಿಸುತ್ತದೆ).

ಹಿನ್ನೆಲೆ:

ರಸಗೊಬ್ಬರ ತಯಾರಕರು ಮತ್ತು ಆಮದುದಾರರ ಮೂಲಕ ಸರ್ಕಾರವು 28 ದರ್ಜೆಯ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳನ್ನು ರೈತರಿಗೆ ಸಬ್ಸಿಡಿ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ. 01.04.2010ರಿಂದ ಅನ್ವಯವಾಗುವಂತೆ, ಎನ್|ಬಿಎಸ್ ಯೋಜನೆ ಅಡಿ, ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ರೈತಸ್ನೇಹಿ ವಿಧಾನಕ್ಕೆ ಅನುಗುಣವಾಗಿ, ಸರ್ಕಾರವು ಕೈಗೆಟುಕುವ ಬೆಲೆಗೆ ರೈತರಿಗೆ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳ ಲಭ್ಯತೆ ಖಚಿತಪಡಿಸಲು ಬದ್ಧವಾಗಿದೆ. ಯೂರಿಯಾ, ಡಿಎಪಿ, ಎಂಒಪಿ ಮತ್ತು ಸಲ್ಫರ್‌ಗಳ ಅಂತಾರಾಷ್ಟ್ರೀಯ ಬೆಲೆ ಏರಿಳಿತದ ಇತ್ತೀಚಿನ ಪ್ರವೃತ್ತಿಗಳನ್ನು ಗಮನಿಸಿ, ಕೇಂದ್ರ ಸರ್ಕಾರವು 2024ರ ಹಿಂಗಾರು ಹಂಗಾಮಿನಲ್ಲಿ 01.10.24 ರಿಂದ 31.03.25ರ ವರೆಗೆ ಅನ್ವಯವಾಗುವಂತೆ, ಎನ್|ಬಿಎಸ್ ಯೋಜನೆ ಅಡಿ ಫಾಸ್ಫೇಟಿಕ್ ಮತ್ತು ಪೊಟ್ಯಾಸಿಕ್ ರಸಗೊಬ್ಬರಗಳಿಗೆ ಸಬ್ಸಿಡಿ ನೀಡಲು ನಿರ್ಧರಿಸಿದೆ. ಅನುಮೋದಿತ ಮತ್ತು ಅಧಿಸೂಚಿತ ದರಗಳ ಪ್ರಕಾರ ರಸಗೊಬ್ಬರ ಕಂಪನಿಗಳಿಗೆ ಸಬ್ಸಿಡಿ ಒದಗಿಸಲಾಗುವುದು. ಇದರಿಂದ ರಸಗೊಬ್ಬರಗಳು ರೈತರಿಗೆ ಕೈಗೆಟುಕುವ ಬೆಲೆಗೆ ಲಭ್ಯವಾಗುವಂತೆ ಮಾಡಲಾಗುತ್ತದೆ.

 

 

*****

 



(Release ID: 2056363) Visitor Counter : 39