ಪ್ರಧಾನ ಮಂತ್ರಿಯವರ ಕಛೇರಿ
ನವಜಾತ ಕರುವಿಗೆ 'ದೀಪಜ್ಯೋತಿ' ಎಂದು ಹೆಸರಿಟ್ಟ ಪ್ರಧಾನಮಂತ್ರಿ
Posted On:
14 SEP 2024 12:21PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮ್ಮ ನಿವಾಸದಲ್ಲಿ ಜನಿಸಿದ ನವಜಾತ ಕರುವಿಗೆ 'ದೀಪಜ್ಯೋತಿ' ಎಂದು ನಾಮಕರಣ ಮಾಡಿದ್ದಾರೆ.
Xನಲ್ಲಿ ವೀಡಿಯೊ ಮತ್ತು ಛಾಯಾಚಿತ್ರಗಳನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು:
"ನಮ್ಮ ಧರ್ಮಗ್ರಂಥಗಳಲ್ಲಿ 'ಗಾಂವ್: ಸರ್ವಸುಖ್ ಪ್ರದಾ:' ಎಂದು ಹೇಳಲಾಗಿದೆ.
ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿಯವರ ನಿವಾಸದಲ್ಲಿ ಅವರ ಕುಟುಂಬಕ್ಕೆ ಹೊಸ ಸದಸ್ಯರ ಆಗಮನವಾಗಿದೆ.
ಪ್ರಧಾನ ಮಂತ್ರಿಯವರ ಮನೆಯಲ್ಲಿ, ಪ್ರೀತಿಯ ಗೋಮಾತೆ ಹೊಸ ಕರುವಿಗೆ ಜನ್ಮವಿತ್ತಿದ್ದಾಳೆ, ಅವಳ ಹಣೆಯ ಮೇಲೆ ಬೆಳಕಿನ ಚಿಹ್ನೆ ಇದೆ.
ಆದ್ದರಿಂದ, ನಾನು ಅದಕ್ಕೆ 'ದೀಪಜ್ಯೋತಿ' ಎಂದು ನಾಮಕರಣ ಮಾಡಿದ್ದೇನೆ. ”
"7, ಲೋಕ ಕಲ್ಯಾಣ ಮಾರ್ಗಕ್ಕೆ ಹೊಸ ಸದಸ್ಯರ ಆಗಮನ!
'ದೀಪಜ್ಯೋತಿ' ನಿಜವಾಗಿಯೂ ಮುದ್ದಾದ ಕರು" ಎಂದು ಬರೆದುಕೊಂಡಿದ್ದಾರೆ.
*****
(Release ID: 2055159)
Visitor Counter : 41
Read this release in:
Odia
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Punjabi
,
Gujarati
,
Tamil
,
Telugu
,
Malayalam