ಗೃಹ ವ್ಯವಹಾರಗಳ ಸಚಿವಾಲಯ
ಪದ್ಮ ಪ್ರಶಸ್ತಿಗಳು-2025, ನಾಮನಿರ್ದೇಶನ / ಶಿಫಾರಸು ಮಾಡಲು 15ನೇ ಸೆಪ್ಟೆಂಬರ್, 2024ರವರೆಗೆ ಅವಕಾಶವಿರಲಿದೆ
Posted On:
12 SEP 2024 3:30PM by PIB Bengaluru
2025ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ 2025ರ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು / ಶಿಫಾರಸುಗಳು, 01 ಮೇ 2024ರಿಂದ ಪ್ರಾರಂಭವಾಗಿದ್ದು, ಕೊನೆಯ ದಿನಾಂಕ ಸೆಪ್ಟೆಂಬರ್ 15, 2024 ಆಗಿರುತ್ತದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು / ಶಿಫಾರಸುಗಳನ್ನು ಕೇವಲ ರಾಷ್ಟ್ರೀಯ ಪುರಸ್ಕಾರ ಜಾಲತಾಣ https://awards.gov.in ದಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ.
ನಾಮನಿರ್ದೇಶನಗಳು / ಶಿಫಾರಸುಗಳು https://awards.gov.in ಜಾಲತಾಣದಲ್ಲಿ ಲಭ್ಯವಿರುವ ಸ್ವರೂಪದಲ್ಲಿ ನಿಗದಿಪಡಿಸಿದ ಎಲ್ಲಾ ಸಂಬಂಧಿತ ವಿವರಗಳನ್ನು ಒಳಗೊಂಡಿರಬೇಕು. ವ್ಯಕ್ತಿ ಪರಿಚಯ/ಚಿತ್ರಣ ನಿರೂಪಣಾ ರೂಪದ ಬರಹದಲ್ಲಿ (ಗರಿಷ್ಠ 800 ಪದಗಳು) ಉಲ್ಲೇಖವನ್ನು ಒಳಗೊಂಡಂತೆ, ಆಯಾ ಕ್ಷೇತ್ರ / ವರ್ಗಗಳಲ್ಲಿ ಶಿಫಾರಸು ಮಾಡಿದ ವ್ಯಕ್ತಿಯ ( ಆಕೆಯ/ಅವರ ) ವಿಶಿಷ್ಟ ಮತ್ತು ಅತ್ಯುತ್ತಮ ಸಾಧನೆಗಳು/ ಸೇವೆಯನ್ನು ಸ್ಪಷ್ಟವಾಗಿ ನಮೋದಿಸಬೇಕು.
*****
(Release ID: 2054202)
Visitor Counter : 50
Read this release in:
Assamese
,
Telugu
,
Malayalam
,
English
,
Urdu
,
Marathi
,
Hindi
,
Manipuri
,
Punjabi
,
Gujarati
,
Tamil