ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚಿಕಾಗೋ ಭಾಷಣದ 132 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರನ್ನು ಸ್ಮರಿಸಿದರು

Posted On: 11 SEP 2024 11:06AM by PIB Bengaluru

1893 ರಲ್ಲಿ ಅಮೆರಿಕಾದ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ್ದ ಪ್ರಸಿದ್ಧ ಭಾಷಣವನ್ನು ಹಂಚಿಕೊಂಡು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಸ್ಮರಿಸಿಕೊಂಡಿದ್ದಾರೆ. 

ಭಾರತದ ಪ್ರಾಚೀನ ಏಕತೆ, ಶಾಂತಿ ಮತ್ತು ಸಹೋದರತೆಯ ಸಂದೇಶವನ್ನು ಸ್ವಾಮಿ ವಿವೇಕಾನಂದರು ಪರಿಚಯಿಸಿದ್ದು, ಅದು ಪೀಳಿಗೆಗೆ ಸ್ಫೂರ್ತಿ ನೀಡುತ್ತಿದೆ ಎಂದಿದ್ದಾರೆ. 

ಇದನ್ನು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು:

"1893 ರ ಈ ದಿನದಂದು, ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಅದ್ಬುತವಾಗಿ ಭಾಷಣ ಮಾಡಿ ಭಾರತ ದೇಶದ ಪ್ರಾಚೀನ ಏಕತೆ, ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಜಗತ್ತಿಗೆ ಪರಿಚಯಿಸಿದರು. ಅವರ ಮಾತುಗಳು ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಬಂದಿದೆ. ಒಗ್ಗಟ್ಟಿನ ಮತ್ತು ಸಾಮರಸ್ಯದ ಶಕ್ತಿಯನ್ನು ನಮಗೆ ನೆನಪಿಸುತ್ತವೆ." ಎಂದಿದ್ದಾರೆ.

 

 

*****


(Release ID: 2053716) Visitor Counter : 45