ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಪದ್ಮ ಪ್ರಶಸ್ತಿಗಳಿಗೆ ಪ್ರೇರಣಾದಾಯಕ ವ್ಯಕ್ತಿಗಳ ನಾಮನಿರ್ದೇಶನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ  ಮೋದಿ ಮನವಿ

Posted On: 09 SEP 2024 6:09PM by PIB Bengaluru

ಪ್ರತಿಷ್ಠಿತ ಪದ್ಮ ಪ್ರಶಸ್ತಿಗಾಗಿ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಭಾರತದ ಜನರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮನವಿ ಮಾಡಿದ್ದಾರೆ.

ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ ತಳಮಟ್ಟದ ಸಾಧಕರನ್ನು ಗುರುತಿಸುವ ಅಗತ್ಯದ ಬಗ್ಗೆ ಶ್ರೀ ಮೋದಿ ಅವರು ಒತ್ತಿ ಹೇಳಿದ್ದಾರೆ. ನಾಮನಿರ್ದೇಶನ ಪ್ರಕ್ರಿಯೆಯ ಪಾರದರ್ಶಕ ಮತ್ತು ಪಾಲ್ಗೊಳ್ಳುವಿಕೆ ವಿಧಾನದ ಬಗ್ಗೆ ಒತ್ತಿ ಹೇಳಿರುವ ಶ್ರೀ ಮೋದಿ ಅವರು, ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ನಾಮನಿರ್ದೇಶನಗಳು ಸ್ವೀಕೃತವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಮತ್ತು ಅರ್ಹ ಅಭ್ಯರ್ಥಿಗಳನ್ನು ಅಧಿಕೃತ ಜಾಲತಾಣ http://awards.gov.in ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡುವಂತೆ ಮನವಿ ಮಾಡಿದ್ದಾರೆ. 

ಪ್ರಧಾನಮಂತ್ರಿಗಳ ಎಕ್ಸ್‌ ಪೋಸ್ಟ್‌ ಹೀಗಿದೆ:

“ನಾವು ಕಳೆದ ದಶಕದಲ್ಲಿ ಅಸಂಖ್ಯಾತ ತಳಮಟ್ಟದ ಸಾಧಕರಿಗೆ #PeoplesPadma ನೀಡಿ ಗೌರವಿಸಿದ್ದೇವೆ. ಈ ಪ್ರಶಸ್ತಿ ಪುರಸ್ಕೃತರ ಜೀವನ ಪಯಣ ಅಸಂಖ್ಯಾತ ಜನರಿಗೆ ಪ್ರೇರಣೆಯಾಗಿದೆ. ಅವರ ಸ್ಥೈರ್ಯ ಮತ್ತು ಗುರಿ ಸಾಧನೆಯ ಛಲ ಅವರ ಸಮೃದ್ಧ ಕಾರ್ಯದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.  ಹೆಚ್ಚು ಪಾರದರ್ಶಕ ಮತ್ತು ಪಾಲ್ಗೊಳ್ಳುವಿಕೆಯ ವ್ಯವಸ್ಥೆಯನ್ನು ರೂಪಿಸುವ ಉತ್ಸಾಹದಲ್ಲಿ, ನಮ್ಮ ಸರ್ಕಾರವು ವಿವಿಧ ಪದ್ಮ ಪ್ರಶಸ್ತಿಗಳಿಗೆ ಇತರರನ್ನು ನಾಮನಿರ್ದೇಶನ ಮಾಡುವಂತೆ ನಾಗರಿಕರನ್ನು ಆಹ್ವಾನಿಸುತ್ತಿದೆ. 

ಅನೇಕ ನಾಮಪತ್ರಗಳು ಸ್ವೀಕೃತವಾಗಿದೆ ಎಂಬುದು ನನಗೆ  ಸಂತಸ ತಂದಿದೆ.  ನಾಮನಿರ್ದೇಶನಗಳನ್ನು  ಸಲ್ಲಿಸಲು ಈ ತಿಂಗಳ 15 ಕೊನೆಯ ದಿನವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಪದ್ಮ ಪ್ರಶಸ್ತಿಗಳಿಗೆ ಸ್ಪೂರ್ತಿದಾಯಕ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡುವಂತೆ ನಾನು ಕೋರುತ್ತೇನೆ.  ನಾಮನಿರ್ದೇಶನ ಮಾಡಲು ಲಿಂಕ್ ಹೀಗಿದೆ: - https://awards.gov.in”.

 

 

*****



(Release ID: 2053308) Visitor Counter : 22