ಪ್ರಧಾನ ಮಂತ್ರಿಯವರ ಕಛೇರಿ
ಶಿಶು ಮತ್ತು ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸ್ವಚ್ಛ ಭಾರತ ಅಭಿಯಾನದ ಪರಿಣಾಮವನ್ನು ಎತ್ತಿ ಹಿಡಿಯುವ ವೈಜ್ಞಾನಿಕ ವರದಿಯನ್ನು ಹಂಚಿಕೊಂಡ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
Posted On:
05 SEP 2024 4:11PM by PIB Bengaluru
ಇಂದು ದೇಶದಲ್ಲಿ ಶಿಶು ಮತ್ತು ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಸ್ವಚ್ಛ ಭಾರತ ಅಭಿಯಾನದಂತಹ ಪ್ರಯತ್ನಗಳ ಪರಿಣಾಮವನ್ನು ಎತ್ತಿ ತೋರಿಸುವ ವೈಜ್ಞಾನಿಕ ವರದಿಯನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಂಚಿಕೊಂಡಿದ್ದಾರೆ.
ಪ್ರಧಾನಮಂತ್ರಿಯವರು Xನಲ್ಲಿ ಪೋಸ್ಟ್ ಮಾಡಿ:
"ಸ್ವಚ್ಛ ಭಾರತ ಅಭಿಯಾನದಂತಹ ಪ್ರಯತ್ನಗಳ ಪರಿಣಾಮವನ್ನು ಎತ್ತಿ ತೋರಿಸುವ ಸಂಶೋಧನೆಯನ್ನು ನೋಡಿ ಸಂತೋಷವಾಗಿದೆ. ಸಮಂಜಸ ಶೌಚಾಲಯಗಳ ಲಭ್ಯತೆಯು ಶಿಶು ಮತ್ತು ಮಕ್ಕಳ ಮರಣವನ್ನು ಕಡಿಮೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
ಸ್ವಚ್ಛ, ಸುರಕ್ಷಿತ ನೈರ್ಮಲ್ಯವು ಸಾರ್ವಜನಿಕ ಆರೋಗ್ಯಕ್ಕೆ ಗೇಮ್ ಚೇಂಜರ್ ಆಗಿ ಮಾರ್ಪಟ್ಟಿದೆ. ಭಾರತವು ಇದರಲ್ಲಿ ಮುನ್ನಡೆ ಸಾಧಿಸಿದೆ ಎಂದು ನನಗೆ ಸಂತೋಷವಾಗಿದೆ" ಎಂದು ಹೇಳಿದ್ದಾರೆ.
*****
(Release ID: 2052499)
Visitor Counter : 42
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam