ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಹಾಕಿ ದಂತಕಥೆ ಮೇಜರ್ ಧ್ಯಾನ್ ಚಂದ್ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ  "ಖೇಲ್ ಉತ್ಸವ 2024" ಆಯೋಜಿಸಿದ್ದ ವಾರ್ತಾ ಮತ್ತು ಪ್ರಸಾರ ಸಚಿವಾಲಯ


"ಖೇಲ್ ಉತ್ಸವ 2024"ರಲ್ಲಿ ಉತ್ಸಾಹ ಮತ್ತು ಲವಲವಿಕೆಯಿಂದ ಭಾಗವಹಿಸಿದ 200ಕ್ಕಿಂತ ಹೆಚ್ಚಿನ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ

Posted On: 06 SEP 2024 10:52AM by PIB Bengaluru

ಹಾಕಿ ದಂತಕಥೆ “ಮೇಜರ್ ಧ್ಯಾನ್ ಚಂದ್ ಅವರ ಜನ್ಮ ವಾರ್ಷಿಕೋತ್ಸವ” ಹಾಗೂ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ “ರಾಷ್ಟ್ರೀಯ ಕ್ರೀಡಾ ದಿನ 2024 ಆಚರಣೆ” ಅಂಗವಾಗಿ, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯವು ನವದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂ ಮತ್ತು ಜವಾಹರಲಾಲ್ ನೆಹರು ಸ್ಟೇಡಿಯಂನಲ್ಲಿ 2024 ಆಗಸ್ಟ್ 27ರಿಂದ 2024 ಆಗಸ್ಟ್ 30ರ ವರೆಗೆ "ಖೇಲ್ ಉತ್ಸವ 2024" ಆಯೋಜಿಸಿತ್ತು.

ಸಚಿವಾಲಯವು ತನ್ನ ಚೊಚ್ಚಲ ಆವೃತ್ತಿಯಲ್ಲಿ, 4 ಕ್ರೀಡೆಗಳಲ್ಲಿ ಪಂದ್ಯಾವಳಿಗಳನ್ನು ಆಯೋಜಿಸಿತ್ತು. ಅವುಗಳೆಂದರೆ ಕ್ರಿಕೆಟ್, ಹಾಕಿ, ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್. ಸಚಿವಾಲಯದ 200ಕ್ಕಿಂತ ಹೆಚ್ಚಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಉತ್ಸಾಹ ಮತ್ತು ಲವಲವಿಕೆಯಿಂದ ಭಾಗವಹಿಸಿ, ಕಾರ್ಯಕ್ರಮವನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಿದರು. ಖೇಲ್ ಉತ್ಸವದ ಮುಂಬರುವ ಆವೃತ್ತಿಗಳಲ್ಲಿ ಹೆಚ್ಚಿನ ಕ್ರೀಡೆಗಳನ್ನು ಸೇರಿಸಲು ಸಚಿವಾಲಯ ಉದ್ದೇಶಿಸಿದೆ.

ಮೇಜರ್ ಧ್ಯಾನ್ ಚಂದ್ ಟ್ರೋಫಿಗಳ ವಿತರಣೆ ಸಮಾರಂಭವನ್ನು 2024 ಸೆಪ್ಟೆಂಬರ್ 4ರಂದು ಶಾಸ್ತ್ರಿ ಭವನದ ಪಿಐಬಿ ಕಾನ್ಫರೆನ್ಸ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.  ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು ಮತ್ತು ಸಚಿವಾಲಯದ ಇತರೆ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಟ್ರೋಫಿಗಳ ವಿತರಣೆ ಜರುಗಿತು.

 

*****


(Release ID: 2052485) Visitor Counter : 49