ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ಪ್ರಧಾನಮಂತ್ರಿ ಸಿಂಗಾಪುರದ ಎಇಎಂಗೆ ಭೇಟಿ 

Posted On: 05 SEP 2024 10:22AM by PIB Bengaluru

ಪ್ರಧಾಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿ ಗೌರವಾನ್ವಿತ  ಶ್ರೀ ಲಾರೆನ್ಸ್ ವಾಂಗ್ ಅವರೊಂದಿಗೆ ಸಿಂಗಾಪುರದ ಮುಂಚೂಣಿ ಸೆಮಿಕಂಡಕ್ಟರ್‌ ಮತ್ತು ಎಲೆಕ್ಟ್ರಾನಿಕ್ಸ್ ವಲಯದ ಕಂಪನಿ ಎಇಎಂಗೆ ಭೇಟಿ ನೀಡಿದ್ದರು. ಜಾಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಣಿಯಲ್ಲಿ ಎಇಎಂನ ಪಾತ್ರ, ಅದರ ಕಾರ್ಯಾಚರಣೆಗಳು ಮತ್ತು ಭಾರತದ ಯೋಜನೆಗಳ ಬಗ್ಗೆ ಅವರಿಗೆ ವಿವರಿಸಲಾಯಿತು. ಸಿಂಗಾಪುರ ಸೆಮಿಕಂಡಕ್ಟರ್ ಇಂಡಸ್ಟ್ರಿ ಅಸೋಸಿಯೇಷನ್ ಸಿಂಗಾಪುರದಲ್ಲಿ ಸೆಮಿಕಂಡಕ್ಟರ್‌ಗೆ ಪೂರಕ ಪರಿಸರ ಅಭಿವೃದ್ಧಿ ಮತ್ತು ಭಾರತದೊಂದಿಗೆ ಸಹಯೋಗದ ಅವಕಾಶಗಳ ಕುರಿತು ಮಾಹಿತಿ ನೀಡಿತು. ಈ ವಲಯದ ಹಲವು ಇತರ ಸಿಂಗಾಪುರದ ಕಂಪನಿಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗ್ರೇಟರ್ ನೋಯ್ಡಾದಲ್ಲಿ  2024ರ ಸೆಪ್ಟೆಂಬರ್ 11ರಿಂದ 13ರವರೆಗೆ ನಡೆಯಲಿರುವ ಸೆಮಿಕಾನ್ ಇಂಡಿಯಾ (SEMICON INDIA) ಪ್ರದರ್ಶನದಲ್ಲಿ ಭಾಗವಹಿಸಲು ಸಿಂಗಾಪುರದ ಸೆಮಿಕಂಡಕ್ಟರ್ ಕಂಪನಿಗಳಿಗೆ ಪ್ರಧಾನಮಂತ್ರಿ ಆಹ್ವಾನ ನೀಡಿದರು. 

ಭಾರತದಲ್ಲಿ ಸೆಮಿಕಂಡಕ್ಟರ್ ಉತ್ಪಾದನೆಗೆ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನಮ್ಮ ಪ್ರಯತ್ನಗಳು ಮತ್ತು ಈ ವಲಯದಲ್ಲಿ ಸಿಂಗಾಪುರದ ಸಾಮರ್ಥ್ಯಗಳನ್ನು ಪರಿಗಣಿಸಿ, ಎರಡೂ ದೇಶಗಳು ದ್ವಿಪಕ್ಷೀಯ ಸಹಕಾರ ಸಂದಂಭವನ್ನು ವಿಸ್ತರಿಸಲು ನಿರ್ಧರಿಸಿವೆ. ಭಾರತ-ಸಿಂಗಾಪುರ ಸಚಿವರ ದುಂಡುಮೇಜಿನ 2 ನೇ ಸಭೆಯಲ್ಲಿ, ದ್ವಿಪಕ್ಷೀಯ ಸಹಕಾರವನ್ನು ವೃದ್ಧಿಸುವ ಆಧಾರಸ್ತಂಭವಾಗಿ ಸೆಮಿಕಂಡಕ್ಟರ್ ಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು, ಅತ್ಯಾಧುನಿಕ ಉತ್ಪಾದನಾ ವ್ಯವಸ್ಥೆ ಸೇರ್ಪಡೆ ಮಾಡಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಭಾರತ-ಸಿಂಗಾಪುರ ಸೆಮಿಕಂಡಕ್ಟರ್  ಪೂರಕ ವ್ಯವಸ್ಥೆ ಅಭಿವೃದ್ಧಿ ಪಾಲುದಾರಿಕೆಯಲ್ಲಿ ಎರಡೂ ದೇಶಗಳು ತಿಳಿವಳಿಕೆ ಒಪ್ಪಂದವನ್ನು ಸಹ ಅಂತಿಮಗೊಳಿಸಿವೆ. 

ಈ ಸಂದರ್ಭದಲ್ಲಿ, ಇಬ್ಬರೂ ಪ್ರಧಾನ ಮಂತ್ರಿಗಳು ಸಿಂಗಾಪುರದಲ್ಲಿ ತರಬೇತಿ ಪಡೆಯುತ್ತಿರುವ ಒಡಿಶಾದ ವರ್ಲ್ಡ್ ಸ್ಕಿಲ್ ಸೆಂಟರ್‌ನ ಭಾರತೀಯ ಇಂಟರ್ನ್‌ಗಳು ಮತ್ತು ಸಿಐಐ-ಎಂಟರ್‌ಪ್ರೈಸ್ ಸಿಂಗಾಪುರ್ ಇಂಡಿಯಾ ರೆಡಿ ಟ್ಯಾಲೆಂಟ್ ಪ್ರೋಗ್ರಾಂ ಅಡಿಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಸಿಂಗಾಪುರದ ಇಂಟರ್ನಿಗಳು ಮತ್ತು ಎಇಎಂ ನಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯ ಎಂಜಿನಿಯರ್‌ಗಳೊಂದಿಗೆ ಸಂವಾದ ನಡೆಸಿದರು.

ಇಬ್ಬರೂ ಪ್ರಧಾನಮಂತ್ರಿಗಳ ಈ ಭೇಟಿಯು ಈ ಕ್ಷೇತ್ರದಲ್ಲಿ ಸಹಕಾರ ಸಂಬಂಧ ಅಭಿವೃದ್ಧಿಪಡಿಸಲು ಎರಡೂ ದೇಶಗಳ ಬದ್ಧತೆಯನ್ನು ಒತ್ತಿಹೇಳುತ್ತದೆ. ಈ ಭೇಟಿಯಲ್ಲಿ ತಮ್ಮೊಂದಿಗೆ ಪಾಲ್ಗೊಂಡಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿ ವಾಂಗ್ ಅವರಿಗೆ ತಮ್ಮ ಮೆಚ್ಚುಗೆಯನ್ನು ಸೂಚಿಸಿದ್ದಾರೆ. 
 

*****



(Release ID: 2052195) Visitor Counter : 29