ಪ್ರಧಾನ ಮಂತ್ರಿಯವರ ಕಛೇರಿ
ಪುರುಷರ ಕ್ಲಬ್ ಥ್ರೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಧರಂಬೀರ್ ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಅಭಿನಂದನೆ
Posted On:
05 SEP 2024 7:59AM by PIB Bengaluru
ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪುರುಷರ ಕ್ಲಬ್ ಥ್ರೋ ಎಫ್51 ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟ ಅಥ್ಲೀಟ್ ಧರಂಬೀರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಈ ಖುಷಿಯ ವಿಚಾರವನ್ನು ಎಕ್ಸ್ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ:
"ಧರಂಬೀರ್ ಅವರು ಅಸಾಧಾರಣ ಸಾಧನೆ ತೋರಿಸಿ #Paralympics2024ರ ಪುರುಷರ ಕ್ಲಬ್ ಥ್ರೋ ಎಫ್ 51 ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ! ಅವರ ಅಪ್ರತಿಮ ಉತ್ಸಾಹವೇ ಈ ಅದ್ಭುತ ಸಾಧನೆಗೆ ಕಾರಣವಾಗಿದೆ. ಈ ಸಾಧನೆಯಿಂದ ಭಾರತ ಅತ್ಯಂತ ಸಂತಸಪಟ್ಟಿದೆ. #Cheer4Bharat"
*****
(Release ID: 2052150)
Visitor Counter : 28
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam