ಪ್ರಧಾನ ಮಂತ್ರಿಯವರ ಕಛೇರಿ
ಪುರುಷರ ಹೈಜಂಪ್ ನಲ್ಲಿ ಕಂಚಿನ ಪದಕ ವಿಜೇತ ಕ್ರೀಡಾಪಟು ಮರಿಯಪ್ಪನ್ ತಂಗವೇಲು ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ
Posted On:
04 SEP 2024 10:31AM by PIB Bengaluru
ಪ್ರಸ್ತುತ ನಡೆಯುತ್ತಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಪುರುಷರ ಹೈ ಜಂಪ್ ಟಿ63 ಸ್ಪರ್ಧೆಯಲ್ಲಿ ಕಂಚಿನ ಪದಕದ ಗೆಲುವಿಗಾಗಿ ಕ್ರೀಡಾಪಟು ಮರಿಯಪ್ಪನ್ ತಂಗವೇಲು ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಪ್ಯಾರಾಲಿಂಪಿಕ್ಸ್ ನ ಸತತ ಮೂರು ಆವೃತ್ತಿಗಳಲ್ಲಿ ಗೆಲುವು ಸಾಧಿಸಿರುವ ಅವರ ಕೌಶಲ್ಯ ಮತ್ತು ಸ್ಥಿರತೆಯನ್ನು ಶ್ರೀ ಮೋದಿ ಅವರು ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿಗಳ ಎಕ್ಸ್ ಪೋಸ್ಟ್ ಹೀಗಿದೆ:
"ಪುರುಷರ ಹೈ ಜಂಪ್ ಟಿ63 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಮರಿಯಪ್ಪನ್ ತಂಗವೇಲು ಅವರಿಗೆ ಅಭಿನಂದನೆಗಳು. ಪ್ಯಾರಾಲಿಂಪಿಕ್ಸ್ನ ಸತತ ಮೂರು ಆವೃತ್ತಿಗಳಲ್ಲಿ ಅವರು ಪದಕಗಳನ್ನು ಗೆದ್ದಿರುವುದು ಶ್ಲಾಘನೀಯ. ಅವರ ಕೌಶಲ್ಯ, ಸ್ಥಿರತೆ ಮತ್ತು ದೃಢತೆ ಅನನ್ಯವಾಗಿದೆ.” #Cheer4Bharat"
*****
(Release ID: 2051714)
Visitor Counter : 38
Read this release in:
English
,
Urdu
,
Hindi
,
Marathi
,
Bengali
,
Manipuri
,
Bengali-TR
,
Assamese
,
Punjabi
,
Gujarati
,
Odia
,
Tamil
,
Telugu
,
Malayalam