ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಭಾರತ ಸರ್ಕಾರ, ತ್ರಿಪುರಾ ಸರ್ಕಾರ ಮತ್ತು ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರಾ (ಎನ್.ಎಲ್,ಎಫ್.ಟಿ.) ಮತ್ತು ಆಲ್ ತ್ರಿಪುರಾ ಟೈಗರ್ ಫೋರ್ಸ್ (ಎ.ಟಿ.ಟಿ.ಎಫ್.) ಪ್ರತಿನಿಧಿಗಳು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಸಮ್ಮುಖದಲ್ಲಿ, ನಾಳೆ ನವದೆಹಲಿಯಲ್ಲಿ ಇತ್ಯರ್ಥದ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವಾಗಿರುವ ಈಶಾನ್ಯ ಭಾರತವನ್ನು ಉಗ್ರವಾದ, ಹಿಂಸಾಚಾರ ಮತ್ತು ಸಂಘರ್ಷದಿಂದ ಮುಕ್ತವಾಗಿರುವ ಅಭಿವೃದ್ಧಿ ಹೊಂದಿದ ಪ್ರದೇಶವನ್ನಾಗಿ ಈಡೇರಿಸಲು ಕೇಂದ್ರ ಗೃಹ ಸಚಿವಾಲಯವು ಅವಿರತವಾಗಿ ಶ್ರಮಿಸುತ್ತಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಈಶಾನ್ಯದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರಲು 12 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದೆ, ಅದರಲ್ಲಿ 3 ತ್ರಿಪುರಾ ರಾಜ್ಯಕ್ಕೆ ಸಂಬಂಧಿಸಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಈ ಹಿಂದೆ ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದ್ದರಿಂದ ಈಗಾಗಲೇ ಸುಮಾರು 10 ಸಾವಿರ ಜನರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ್ದಾರೆ

Posted On: 03 SEP 2024 4:52PM by PIB Bengaluru

ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರ ಸಮ್ಮುಖದಲ್ಲಿ, ಭಾರತ ಸರ್ಕಾರ, ತ್ರಿಪುರಾ ಸರ್ಕಾರ ಮತ್ತು ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರ (ಎನ್.ಎಲ್,ಎಫ್.ಟಿ) ಮತ್ತು ಆಲ್ ತ್ರಿಪುರಾ ಟೈಗರ್ ಫೋರ್ಸ್ (ಎ.ಟಿ.ಟಿ.ಎಫ್) ಪ್ರತಿನಿಧಿಗಳ ನಡುವೆ ಇತ್ಯರ್ಥದ ತಿಳುವಳಿಕೆ ಒಪ್ಪಂದಕ್ಕೆ ಬುಧವಾರ, 04 ಸೆಪ್ಟೆಂಬರ್ 2024 ರಂದು ನವದೆಹಲಿಯಲ್ಲಿ ಸಹಿ ಹಾಕಲಾಗುವುದು.  ಸೆಟಲ್ ಮೆಂಟ್ ಮೆಮೊರಾಂಡಮ್ ಗೆ ಸಹಿ ಹಾಕುವ ಸಂದರ್ಭದಲ್ಲಿ ತ್ರಿಪುರಾದ ಮುಖ್ಯಮಂತ್ರಿ ಪ್ರೊ. (ಡಾ.) ಮಾಣಿಕ್ ಸಹಾ ಮತ್ತು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಮತ್ತು ತ್ರಿಪುರಾ ಸರ್ಕಾರದ ಅಧಿಕಾರಿಗಳು ಉಪಸ್ಥಿತರಿರುತ್ತಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನವಾಗಿರುವ ಉಗ್ರವಾದ, ಹಿಂಸಾಚಾರ ಮತ್ತು ಸಂಘರ್ಷದಿಂದ ಮುಕ್ತವಾಗಿರುವ ಅಭಿವೃದ್ಧಿ ಹೊಂದಿದ ಈಶಾನ್ಯ ಭಾರತದ ಪ್ರದೇಶಗಳ ಆಶಯವನ್ನು ಈಡೇರಿಸಲು ಕೇಂದ್ರ ಗೃಹ ಸಚಿವಾಲಯವು ಅವಿರತವಾಗಿ ಶ್ರಮಿಸುತ್ತಿದೆ. ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಈಶಾನ್ಯ ಪ್ರದೇಶದಲ್ಲಿ ಶಾಂತಿ ಮತ್ತು ಸಮೃದ್ಧಿಯನ್ನು ತರಲು 12 ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದೆ, ಅದರಲ್ಲಿ 3 ತ್ರಿಪುರಾ ರಾಜ್ಯಕ್ಕೆ ಸಂಬಂಧಿಸಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ಈ ಮೊದಲು ಹಲವಾರು ಒಪ್ಪಂದಗಳಿಗೆ ಸಹಿ ಹಾಕಿದ್ದರಿಂದ ಸುಮಾರು 10 ಸಾವಿರ ಜನರು ಈಗಾಗಲೇ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಿದ್ದಾರೆ.

 

*****
 


(Release ID: 2051507) Visitor Counter : 38