ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನ ಮಂತ್ರಿಯವರು ಯುಕ್ರೇನ್ ಗೆ BHISHM ಕ್ಯೂಬ್ ಗಳನ್ನು ಉಡುಗೊರೆಯಾಗಿ ನೀಡಿದರು

Posted On: 23 AUG 2024 6:33PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಯುಕ್ರೇನ್ ಸರ್ಕಾರಕ್ಕೆ ನಾಲ್ಕು BHISHM (ಸಹಯೋಗ್ ಹಿತಾ ಮತ್ತು ಮೈತ್ರಿಗಾಗಿ ಭಾರತ್ ಹೆಲ್ತ್ ಇನಿಶಿಯೇಟಿವ್) ಕ್ಯೂಬ್ ಗಳನ್ನು ಉಡುಗೊರೆಯಾಗಿ ನೀಡಿದರು. ಯುಕ್ರೇನ್ ಅಧ್ಯಕ್ಷರಾದ ಘನತೆವೆತ್ತ ಶ್ರೀ ವೊಲೊಡಿಮಿರ್ ಝೆಲೆನ್ಸ್ಕಿಯವರು ಭಾರತದ ಈ ಮಾನವೀಯ ನೆರವಿಗಾಗಿ ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು. ಈ ಕ್ಯೂಬ್ ಗಳು ಗಾಯಗೊಂಡವರಿಗೆ ತ್ವರಿತ ಚಿಕಿತ್ಸೆ ನೀಡಲು ಸಹಾಯ ಮಾಡಿ, ಅಮೂಲ್ಯ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ.

ಪ್ರತಿ BHISHM ಕ್ಯೂಬ್ ಗಳು ಎಲ್ಲಾ ರೀತಿಯ ಗಾಯಗಳು ಮತ್ತು ವೈದ್ಯಕೀಯ ಪರಿಸ್ಥಿತಿಗಳಿಗೆ ಪ್ರಥಮ ಆರೈಕೆಗಾಗಿ ಔಷಧಿಗಳು ಮತ್ತು ಸಲಕರಣೆಗಳನ್ನು ಒಳಗೊಂಡಿವೆ. ಇದು ದಿನಕ್ಕೆ 10-15 ಮೂಲಭೂತ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸಬಲ್ಲ ಮೂಲ ಶಸ್ತ್ರಚಿಕಿತ್ಸಾ ಕೊಠಡಿಗೆ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಸಹ ಪೂರೈಸುತ್ತದೆ. ಆಘಾತ, ರಕ್ತಸ್ರಾವ, ಸುಟ್ಟಗಾಯಗಳು, ಮುರಿತ ಮುಂತಾದ ತುರ್ತು ಸಂದರ್ಭಗಳಲ್ಲಿ ವಿವಿಧ ಸ್ವರೂಪದ ಸುಮಾರು 200 ಪ್ರಕರಣಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಈ ಪ್ರತಿ ಕ್ಯೂಬ್ ಹೊಂದಿದೆ. ಇದು ತನ್ನದೇ ಆದ ಶಕ್ತಿ ಮತ್ತು ಆಮ್ಲಜನಕವನ್ನು ಸೀಮಿತ ಪ್ರಮಾಣದಲ್ಲಿ ಉತ್ಪಾದಿಸಬಲ್ಲುದು. BHISHM ಕ್ಯೂಬ್ ಅನ್ನು ನಿರ್ವಹಿಸಲು ಯುಕ್ರೇನ್ ತಂಡಕ್ಕೆ ಆರಂಭಿಕ ತರಬೇತಿ ನೀಡಲು ಭಾರತದ ತಜ್ಞರ ತಂಡವನ್ನು ನಿಯೋಜಿಸಲಾಗಿದೆ.

ಭಾರತದ ಈ ಸಹಾಯವು ಯುಕ್ರೇನ್ ಗೆ ಮಾನವೀಯ ನೆರವು ನೀಡುವ ಭಾರತದ ನಿರಂತರ ಬದ್ಧತೆಯನ್ನು ಎತ್ತಿ ಹಿಡಿಯುತ್ತದೆ.

 

*****


(Release ID: 2048557) Visitor Counter : 35