ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು 'ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ - ಸೀಸನ್ 1' ಅಡಿಯಲ್ಲಿ WAVES ಗಾಗಿ 25 ಚಾಲೆಂಜ್‌ಗಳನ್ನು ಪ್ರಾರಂಭಿಸಿದ್ದಾರೆ
ಸೃಜನಾತ್ಮಕ ಮೂಲಗಳ ಆರ್ಥಿಕತೆಯು ನಮ್ಮ ಸಮೃದ್ಧ ಸಾಂಸ್ಕೃತಿಕ ಪರಂಪರೆ ಮತ್ತು ಜೀವನ ಶೈಲಿಯನ್ನು ಪ್ರದರ್ಶಿಸಲು ಶ್ರೇಷ್ಠ ಸಾಧನ: ಶ್ರೀ ಅಶ್ವಿನಿ ವೈಷ್ಣವ್
ಸೃಜನಶೀಲ ಕ್ರಿಯೇಟರ್‌ಗಳ ಸಾಮರ್ಥ್ಯಗಳನ್ನು ಹೆಚ್ಚಿಸಲು ವಿಶ್ವದರ್ಜೆಯ ವಿಶ್ವವಿದ್ಯಾಲಯ ಮತ್ತು ಸೌಲಭ್ಯಗಳನ್ನು ಸ್ಥಾಪಿಸಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ
ಚಿತ್ರರಂಗದಲ್ಲಿ ಹೊಸ ತಂತ್ರಜ್ಞಾನ ಮತ್ತು ಸಾಧನಗಳನ್ನು ಬಳಸಲು ಅಪಾರ ಅವಕಾಶ; ಇದರಿಂದ 2-3 ಲಕ್ಷ ಹೊಸ ಉದ್ಯೋಗಗಳು ಸೃಷ್ಟಿಯಾಗಬಹುದು: ಕೇಂದ್ರ ಸಚಿವರು
Posted On:
22 AUG 2024 8:11PM by PIB Bengaluru
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ವಿಶ್ವ ಆಡಿಯೋ ವಿಷುಯಲ್ ಮತ್ತು ಎಂಟರ್ಟೈನ್ಮೆಂಟ್ ಶೃಂಗಸಭೆ (WAVES) ಗಾಗಿ 'ಕ್ರಿಯೆಟ್ ಇನ್ ಇಂಡಿಯಾ ಚಾಲೆಂಜ್ - ಸೀಸನ್ 1' ಅಡಿಯಲ್ಲಿ 25 ಚಾಲೆಂಜ್(ಸ್ಪರ್ಧೆ)ಗಳನ್ನು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವೈಷ್ಣವ್, ಇಂದಿನ ಈ ಆರಂಭ ನಮ್ಮ ಬೆಳೆಯುತ್ತಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಯ ಪ್ರತಿಬಿಂಬವಾಗಿದೆ ಎಂದು ಹೇಳಿದರು. ಒಂದು ಹೊಚ್ಚ ಹೊಸ ಸೃಜನಾತ್ಮಕ ಮೂಲಗಳ ಆರ್ಥಿಕತೆಯನ್ನು ರಚಿಸಲಾಗಿದೆ ಮತ್ತು ಇದನ್ನು ಭಾರತದ ಪ್ರಧಾನಮಂತ್ರಿಯವರು ಮಾರ್ಚ್ 2024 ರಲ್ಲಿ ಅವರು ನೀಡಿದ ಮೊದಲ ರಾಷ್ಟ್ರೀಯ ರಚನೆಕಾರರ ಪ್ರಶಸ್ತಿ (https://pib.gov.in/PressReleaseIframePage.aspx?PRID=2012636)ಯಿಂದ ಗುರುತಿಸಿದ್ದಾರೆ.
ಬೆಳೆಯುತ್ತಿರುವ ಸೃಜನಾತ್ಮಕ ಮೂಲಗಳ ಆರ್ಥಿಕತೆ: ಅವಕಾಶಗಳು, ಮೂಲಸೌಕರ್ಯ ಮತ್ತು ಉದ್ಯೋಗ ಸೃಷ್ಟಿ
ಈ ಆರ್ಥಿಕತೆಯಲ್ಲಿನ ಅಪಾರ ಸಾಮರ್ಥ್ಯವನ್ನು ಎತ್ತಿ ಹಿಡಿದ ಕೇಂದ್ರ ಸಚಿವರು, ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಜೀವನಶೈಲಿ, ಯೋಗ, ಸಾಂಪ್ರದಾಯಿಕ ಔಷಧ ವ್ಯವಸ್ಥೆಗಳು ಮತ್ತು ನಮ್ಮ ಪಾಕಪದ್ಧತಿಯಲ್ಲಿ ವೈವಿಧ್ಯತೆಯನ್ನು ಪ್ರದರ್ಶಿಸಲು ಸೃಜನಾತ್ಮಕ ಮೂಲಗಳ ಆರ್ಥಿಕತೆ ಅದ್ಭುತ ಮಾಧ್ಯಮವಾಗಿದೆ ಎಂದು ಹೇಳಿದರು. ಭಾರತ ಸರ್ಕಾರವು ಈ ಆರ್ಥಿಕತೆಯನ್ನು ಉತ್ತೇಜಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಆದ್ದರಿಂದ, ನಾವು ಈ ಕ್ಷೇತ್ರದಲ್ಲಿ ಪ್ರತಿಭೆ ಮತ್ತು ಕೌಶಲ್ಯ ಅಭಿವೃದ್ಧಿ ಹಾಗೂ ಅಗತ್ಯ ಮೂಲಸೌಕರ್ಯಗಳ ಲಭ್ಯತೆಯನ್ನು ನಾವು ಖಚಿತಪಡಿಸಿಕೊಳ್ಳಬೇಕು.
ಈ ಸೃಜನಾತ್ಮಕ ಮೂಲಗಳ ಆರ್ಥಿಕತೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು, ಸರ್ಕಾರವು ವಿಶ್ವ ದರ್ಜೆಯ ಪ್ರತಿಭೆ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸುವತ್ತ ಗಮನಹರಿಸುತ್ತಿದೆ. ಮಾಧ್ಯಮ ಮತ್ತು ಮನರಂಜನೆಯಲ್ಲಿ ಕಂಟೆಂಟ್ ಕ್ರಿಯೇಟರ್ ಗಳ ಸಾಮರ್ಥ್ಯವನ್ನು ಹೆಚ್ಚಿಸುವ ವಿಶ್ವದರ್ಜೆಯ ವಿಶ್ವವಿದ್ಯಾಲಯಗಳು ಮತ್ತು ಸೌಲಭ್ಯಗಳನ್ನು ಸ್ಥಾಪಿಸುವ ಯೋಜನೆ ಇದೆ ಎಂದು ಅವರು ಹೇಳಿದರು.
ಚಲನಚಿತ್ರ ನಿರ್ಮಾಣದಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ : ಉದ್ಯೋಗ ಸೃಷ್ಟಿ
ಶ್ರೀ ಅಶ್ವಿನಿ ವೈಷ್ಣವ್ ಅವರು ಚಲನಚಿತ್ರ ನಿರ್ಮಾಣವು ನಮ್ಮ ಶಕ್ತಿಗಳಲ್ಲಿ ಒಂದಾಗಿದೆ ಮತ್ತು ಇಂದಿನ ಯುಗದಲ್ಲಿ ಈ ವಲಯದಲ್ಲಿ ಹೊಸ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಬಳಸಲು ಸಾಕಷ್ಟು ಅವಕಾಶವಿದೆ, ಇದರಿಂದಾಗಿ ಉದ್ಯೋಗ ಸೃಷ್ಟಿಗೆ ಉತ್ತಮ ಅವಕಾಶವಿದೆ ಎಂದು ಒತ್ತಿ ಹೇಳಿದರು. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದರೆ, ಈ ವಲಯದಲ್ಲಿ 2-3 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಅಂದಾಜಿಸಲಾಗಿದೆ.
ಸಾಮಾಜಿಕ ಜವಾಬ್ದಾರಿ
ಅಲ್ಲದೆ, ಈ ಪ್ರಯಾಣದಲ್ಲಿ ನಮ್ಮ ಸಮಾಜಕ್ಕೆ ಯಾವುದೇ ತೊಂದರೆಯಾಗದಂತೆ ನಾವು ನೋಡಿಕೊಳ್ಳಬೇಕು ಮತ್ತು ಇದರ ಜವಾಬ್ದಾರಿ ಸರ್ಕಾರ ಮಾತ್ರವಲ್ಲದೆ ಸಮಾಜ, ಉದ್ಯಮ ಮತ್ತು ನಮ್ಮೆಲ್ಲರ ಮೇಲಿದೆ ಎಂದು ಕೇಂದ್ರ ಸಚಿವರು ನೆನಪಿಸಿದರು.
ಈ ಕ್ಷೇತ್ರದಲ್ಲಿರುವ ಅಪಾರ ಸಾಮರ್ಥ್ಯದ ಲಾಭ ಪಡೆಯಲು WAVES (ವೇವ್ಸ್) ಆಯೋಜಿಸಲಾಗುತ್ತಿದ್ದು, ಭವಿಷ್ಯದಲ್ಲಿ ಇದೊಂದು ದೊಡ್ಡ ಕಾರ್ಯಕ್ರಮವಾಗಿ ಹೊರಹೊಮ್ಮಲಿದೆ ಎಂದರು.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂಜಯ್ ಜಾಜು, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ನೀರ್ಜಾ ಶೇಖರ್, FICCI ಮಹಾನಿರ್ದೇಶಕರಾದ ಶ್ರೀಮತಿ ಜ್ಯೋತಿ ವಿಜ್, ಮಾಧ್ಯಮ ಮತ್ತು ಮನರಂಜನೆಯ ಸಿಐಐ ರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷ ಶ್ರೀ. ಬಿರೇನ್ ಘೋಸ್ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರೀ ಸಂಜಯ್ ಜಾಜು, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ, ಶ್ರೀಮತಿ ನೀರಜಾ ಶೇಖರ್, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ, ಶ್ರೀಮತಿ ಜ್ಯೋತಿ ವಿಜ್, ನಿರ್ದೇಶಕ ಜನರಲ್, FICCI, ಶ್ರೀ ಬಿರೇನ್ ಘೋಷ್, ಮಾಧ್ಯಮ ಮತ್ತು ಮನರಂಜನೆಯ CII ರಾಷ್ಟ್ರೀಯ ಸಮಿತಿಯ ಉಪಾಧ್ಯಕ್ಷ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರಿದ್ದರು.
'ಭಾರತದಲ್ಲಿ ವಿನ್ಯಾಸ , ವಿಶ್ವಕ್ಕೆ ವಿನ್ಯಾಸ'
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ. ಸಂಜಯ್ ಜಾಜು ಅವ̧ರು ಭಾರತದ ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಪೋಷಿಸುವ ಮತ್ತು ಉನ್ನತೀಕರಿಸುವ ನಮ್ಮ ನಿರಂತರ ಕಾರ್ಯಾಚರಣೆಯಲ್ಲಿ ಈ ಉಪಕ್ರಮವು ಮಹತ್ವದ ಮೈಲಿಗಲ್ಲು ಎಂದು ಹೇಳಿದರು. " ಇದು ನಮ್ಮ ಪ್ರಧಾನಿಯವರ 78 ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ವ್ಯಕ್ತಪಡಿಸಿದ ' ಭಾರತದಲ್ಲಿ ವಿನ್ಯಾಸ , ವಿಶ್ವ ವಿನ್ಯಾಸ ' ಎಂಬ ದೂರದೃಷ್ಟಿಯ ಕರೆಗೆ ಅನುಗುಣವಾಗಿದೆ" ಎಂದು ಅವರು ಹೇಳಿದರು. ನಮ್ಮ ದೇಶದೊಳಗಿನ ಅಪಾರ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಎತ್ತಿ ಹಿಡಿದ ಅವರು, WAVES ಈ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ವಿಶ್ವದಾದ್ಯಂತದ ಪ್ರಖರ ಮನಸ್ಸುಗಳು, ಅತ್ಯಂತ ಪ್ರತಿಭಾವಂತ ಕ್ರಿಯೇಟರ್‌ಗಳು ಮತ್ತು ದಾರ್ಶನಿಕ ನಾಯಕರು ಜ್ಞಾನವನ್ನು ವಿನಿಮಯ ಮಾಡಿಕೊಳ್ಳುವ , ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ಸೃಜನಶೀಲತೆಯ ಮಿತಿಗಳನ್ನು ಮೀರುವ ಜಾಗತಿಕ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
' ಕ್ರಿಯೇಟ್ ಇನ್ ಇಂಡಿಯಾ ಚಾಲೆಂಜ್ - ಸೀಸನ್ 1'
ಪ್ರಮುಖ ಉದ್ಯಮ ಸಂಘಗಳು ಮತ್ತು ಸಂಸ್ಥೆಗಳಿಂದ ಆಯೋಜಿಸಲಾದ ಈ ಚಾಲೆಂಜ್, ಅನಿಮೇಷನ್, ಚಲನಚಿತ್ರ ನಿರ್ಮಾಣ, ಗೇಮಿಂಗ್, ಸಂಗೀತ ಮತ್ತು ದೃಶ್ಯ ಕಲೆಗಳು ಸೇರಿದಂತೆ ಹಲವಾರು ವಿಭಾಗಗಳನ್ನು ಒಳಗೊಂಡಿವೆ. ಮುಖ್ಯ ಕಾರ್ಯಕ್ರಮಕ್ಕೂ ಮುನ್ನ ಈ ಸವಾಲುಗಳನ್ನು ಆಯೋಜಿಸಲಾಗುತ್ತಿದೆ.
'ಕ್ರಿಯೆಟ್ ಇನ್ ಇಂಡಿಯಾ ಚಾಲೆಂಜ್‌ಗಳ ಪಟ್ಟಿ - ಸೀಸನ್ 1'
1. ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಅನಿಮೆ ಚಾಲೆಂಜ್
2. ಆನಿಮೇಷನ್ ಫಿಲ್ಮ್ ಮೇಕರ್ಸ್ ಡ್ಯಾನ್ಸಿಂಗ್ ಆಟಮ್ಸ್ ಸ್ಪರ್ಧೆ
3. ಗೇಮ್ ಜಾಮ್ ಬೈ ಇಂಡಿಯಾ ಗೇಮ್ ಡೆವಲಪರ್ ಕಾನ್ಫರೆನ್ಸ್
4. ಎಸ್ಪೋರ್ಟ್ಸ್ ಫೆಡರೇಶನ್ ಆಫ್ ಇಂಡಿಯಾದಿಂದ ಎಸ್ಪೋರ್ಟ್ಸ್ ಟೂರ್ನಮೆಂಟ್
5. ಸಿಟಿ ಕ್ವೆಸ್ಟ್: ಇ - ಗೇಮಿಂಗ್ ಫೆಡರೇಶನ್‌ನಿಂದ ಷೇಡ್ಸ್ ಆಫ್ ಇಂಡಿಯಾ
6. ಇಂಡಿಯನ್ ಡಿಜಿಟಲ್ ಗೇಮಿಂಗ್ ಸೊಸೈಟಿಯಿಂದ ಶೈಕ್ಷಣಿಕ ವಿಡಿಯೋ ಗೇಮ್ ಅಭಿವೃದ್ಧಿ
7. ಇಂಡಿಯನ್ ಕಾಮಿಕ್ಸ್ ಅಸೋಸಿಯೇಷನ್ನಿಂದ ಕಾಮಿಕ್ಸ್ ಕ್ರಿಯೇಟರ್ ಚಾಂಪಿಯನ್ಶಿಪ್
8. ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಮತ್ತು ವಿಸ್ಲಿಂಗ್ ವುಡ್ಸ್ ಇಂಟರ್‌ನ್ಯಾಶನಲ್ನಿಂದ ಯುವ ಚಲನಚಿತ್ರ ನಿರ್ಮಾಪಕರ ಸವಾಲು
9. ವೇವ್ಲ್ಯಾಪ್ಸ್ ಮತ್ತು XDG ಮೂಲಕ XR ಕ್ರಿಯೇಟರ್ ಹ್ಯಾಕಥಾನ್
10. ಇನ್ವಿಡಿಯೊ ಮೂಲಕ AI ಫಿಲ್ಮ್ ಮೇಕಿಂಗ್ ಸ್ಪರ್ಧೆ
11. ವೇವ್ಸ್ ಪ್ರೋಮೋ ವಿಡಿಯೋ ಚಾಲೆಂಜ್ ಇಂಡಿಯನ್ ಬ್ರಾಡ್ಕಾಸ್ಟಿಂಗ್ ಮತ್ತು ಡಿಜಿಟಲ್ ಫೌಂಡೇಶನ್
12. ಇಂಡಿಯಾ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ನಿಂದ ಟ್ರುಥೆಲ್ ಹ್ಯಾಕಥಾನ್
13. ಸಮುದಾಯ ರೇಡಿಯೋ ಅಸೋಸಿಯೇಷನ್ ಮೂಲಕ ಸಮುದಾಯ ರೇಡಿಯೋ ವಿಷಯ ಸವಾಲು
14. ಭಾರತೀಯ ಸಂಗೀತ ಉದ್ಯಮದಿಂದ ಥೀಮ್ ಸಂಗೀತ ಸ್ಪರ್ಧೆ
15. ವೇವ್ಸ್ ಹ್ಯಾಕಥಾನ್ : ಅಡ್ವರ್ಟೈಸಿಂಗ್ ಏಜೆನ್ಸಿಸ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಜಾಹೀರಾತು ಆಪ್ಟಿಮೈಜರ್
16. ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ವೇವ್ಸ್ ಎಐ ಆರ್ಟ್ ಇನ್‌ಸ್ಟಾಲೇಶನ್ ಚಾಲೆಂಜ್
17. ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ವೇವ್ಸ್ ಎಕ್ಸ್ಪ್ಲೋರರ್
18. ಇಂಟರ್ನೆಟ್ ಮತ್ತು ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ರೀಲ್ ಮೇಕಿಂಗ್ ಚಾಲೆಂಜ್
19. ಫಿಲ್ಮ್ ಪೋಸ್ಟರ್ ಮೇಕಿಂಗ್ ಸ್ಪರ್ಧೆ ರಾಷ್ಟ್ರೀಯ ಚಲನಚಿತ್ರ ಆರ್ಕೈವ್ ಆಫ್ ಇಂಡಿಯಾ - ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ
20. AVTR ಮೆಟಾ ಲ್ಯಾಬ್ಸ್‌ನಿಂದ ವರ್ಚುವಲ್ ಇನ್‌ಫ್ಲುಯೆನ್ಸರ್ ಕ್ರಿಯೇಷನ್ ಸ್ಪರ್ಧೆ
21. ಪ್ರಸಾರ ಭಾರತಿಯಿಂದ ಬ್ಯಾಟಲ್ ಆಫ್ ದಿ ಬ್ಯಾಂಡ್ಸ್
22. ಪ್ರಸಾರ ಭಾರತಿ ಅವರಿಂದ ಸಿಂಫನಿ ಆಫ್ ಇಂಡಿಯಾ
23. ಭಾರತ : ಬ್ರಾಡ್‌ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ನಿಂದ ಎ ಬರ್ಡ್ಸ್ ಐ ವ್ಯೂ
24. ಭಾರತೀಯ ಕೈಗಾರಿಕೆಗಳ ಒಕ್ಕೂಟದಿಂದ ಪೈರಸಿ ವಿರೋಧಿ ಚಾಲೆಂಜ್
25. ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯಿಂದ ಟ್ರೈಲರ್ ತಯಾರಿಕೆ ಸ್ಪರ್ಧೆ
ಚಾಲೆಂಜ್ ಗಳಿಗೆ ನೋಂದಣಿ ಶೀಘ್ರದಲ್ಲೇ ಆರಂಭವಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ವೆಬ್‌ಸೈಟ್ http://wavesindia.org ಗೆ ಭೇಟಿ ನೀಡಿ.
*****
(Release ID: 2047890)
Visitor Counter : 46
Read this release in:
Odia
,
Manipuri
,
Telugu
,
Bengali
,
Tamil
,
English
,
Urdu
,
Marathi
,
Hindi
,
Hindi_MP
,
Bengali-TR
,
Assamese
,
Punjabi
,
Gujarati
,
Malayalam