ಪ್ರಧಾನ ಮಂತ್ರಿಯವರ ಕಛೇರಿ
ಪೋಲೆಂಡ್ ಮತ್ತು ಉಕ್ರೇನ್ ಗೆ ಪ್ರಧಾನ ಮಂತ್ರಿಯವರ ಭೇಟಿ
Posted On:
19 AUG 2024 8:38PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 21 ಮತ್ತು 22 ಆಗಸ್ಟ್ 2024 ರಂದು ಪೋಲೆಂಡ್ಗೆ ಭೇಟಿ ನೀಡಲಿದ್ದಾರೆ. ಇದು ಕಳೆದ 45 ವರ್ಷಗಳಲ್ಲಿ ಪೋಲೆಂಡ್ ದೇಶಕ್ಕೆ ಭಾರತದ ಪ್ರಧಾನಮಂತ್ರಿಯವರ ಮೊದಲ ಭೇಟಿಯಾಗಿದೆ.
ವಾರ್ಸಾದಲ್ಲಿ ಪ್ರಧಾನಮಂತ್ರಿಯವರಿಗೆ ವಿಧ್ಯುಕ್ತ ಸ್ವಾಗತ ನೀಡಲಾಗುವುದು. ಅವರು ಅಧ್ಯಕ್ಷ ಶ್ರೀ ಆಂಡ್ರೆಜ್ ಸೆಬಾಸ್ಟಿಯನ್ ಡುಡಾ ಮತ್ತು ಪ್ರಧಾನ ಮಂತ್ರಿ ಶ್ರೀ ಡೊನಾಲ್ಡ್ ಟಸ್ಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಪ್ರಧಾನಮಂತ್ರಿಯವರು ಪೋಲೆಂಡ್ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.
ನಂತರ ಪ್ರಧಾನ ಮಂತ್ರಿಯವರು ಉಕ್ರೇನ್ ದೇಶಕ್ಕೆ ತೆರಳಲಿದ್ದಾರೆ. 1992 ರಲ್ಲಿ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದ ನಂತರ ಉಕ್ರೇನ್ ಗೆ ಭಾರತದ ಪ್ರಧಾನಮಂತ್ರಿಯವರ ಮೊದಲ ಭೇಟಿ ಇದಾಗಿದೆ.
ಕೈವ್ ನಲ್ಲಿನ ಪ್ರಧಾನ ಮಂತ್ರಿಯವರ ಕಾರ್ಯಕ್ರಮಗಳು ರಾಜಕೀಯ, ವ್ಯಾಪಾರ, ಆರ್ಥಿಕ, ಹೂಡಿಕೆಗಳು, ಶಿಕ್ಷಣ, ಸಾಂಸ್ಕೃತಿಕ, ಜನರಿಂದ ಜನರ ವಿನಿಮಯ, ಮಾನವೀಯ ನೆರವು ಮತ್ತು ಇತರವುಗಳನ್ನು ಒಳಗೊಂಡಂತೆ ದ್ವಿಪಕ್ಷೀಯ ಸಂಬಂಧಗಳ ವಿವಿಧ ಅಂಶಗಳನ್ನು ಒಳಗೊಂಡಿವೆ. ಭೇಟಿಯ ವೇಳೆ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ಸಮುದಾಯದವರೊಂದಿಗೆ ಪ್ರಧಾನಮಂತ್ರಿಯವರು ಸಂವಾದ ನಡೆಸಲಿದ್ದಾರೆ. ಉಕ್ರೇನ್ ದೇಶಕ್ಕೆ ಪ್ರಧಾನಮಂತ್ರಿಯವರ ಮಹತ್ವದ ಭೇಟಿಯು ದ್ವಿಪಕ್ಷೀಯ ಬಾಂಧವ್ಯಗಳ ಮತ್ತಷ್ಟು ಬಲವರ್ಧನೆಗೆ ಮತ್ತು ವಿಸ್ತರಣೆಗೆ ಸಹಾಯ ಮಾಡುತ್ತದೆ.
*****
(Release ID: 2047338)
Visitor Counter : 52
Read this release in:
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Tamil
,
Telugu
,
Malayalam