ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇಸ್ರೊದಿಂದ ಎಸ್ ಎಸ್ ಎಲ್ ವಿ-ಡಿ3 ಯಶಸ್ವಿ ಉಡಾವಣೆ: ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದನೆ

Posted On: 16 AUG 2024 1:48PM by PIB Bengaluru

ಹೊಸ ಉಪಗ್ರಹ ಉಡಾವಣಾ ವಾಹನ (SSLV)-ಡಿ3ಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ವಿಜ್ಞಾನಿಗಳನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಅಭಿನಂದಿಸಿದ್ದಾರೆ. 

ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಕಡಿಮೆ ವೆಚ್ಚದಲ್ಲಿ ತಯಾರಾದ ಎಸ್‌ಎಸ್‌ಎಲ್‌ವಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಖಾಸಗಿ ಉದ್ಯಮವನ್ನು ಉತ್ತೇಜಿಸುತ್ತದೆ ಎಂದು ಪ್ರಧಾನ ಮಂತ್ರಿ ಮೋದಿ ಹೇಳಿದರು. 

ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿಯವರು,

"ಇದೊಂದು ಗಮನಾರ್ಹ ಮೈಲಿಗಲ್ಲು! ಈ ಸಾಧನೆ ಮಾಡಿದ ನಮ್ಮ ವಿಜ್ಞಾನಿಗಳು ಮತ್ತು ಉದ್ಯಮ ವಲಯದ ಸಂಬಂಧಪಟ್ಟವರಿಗೆಲ್ಲರಿಗೂ ಅಭಿನಂದನೆಗಳು. ಹೊಸ ಉಡಾವಣಾ ವಾಹನವನ್ನು ಹೊಂದಿರುವುದು ದೇಶಕ್ಕೆ ಅಪಾರ ಸಂತೋಷದ ವಿಷಯವಾಗಿದೆ. ಕಡಿಮೆ ವೆಚ್ಚದಲ್ಲಿ ತಯಾರಾದ ಎಸ್ ಎಸ್ ಎಲ್ ವಿ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಖಾಸಗಿ ಉದ್ಯಮವನ್ನು ಉತ್ತೇಜಿಸುತ್ತದೆ. ಇಸ್ರೊ,  ಇನ್-ಸ್ಪೇಸ್ ಮತ್ತು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ಮತ್ತು ಇಡೀ ಬಾಹ್ಯಾಕಾಶ ಉದ್ಯಮ ವಲಯಕ್ಕೆ ನಾನು ಶುಭಾಶಯ ತಿಳಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

 

 

*****



(Release ID: 2046194) Visitor Counter : 35