ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಅರಬಿಂದೋ ಅವರ ಜನ್ಮ ದಿನದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಗೌರವ ನಮನ 

Posted On: 15 AUG 2024 11:43AM by PIB Bengaluru

ತತ್ವಜ್ಞಾನಿ, ಚಿಂತಕರು ಮತ್ತು ಆಧ್ಯಾತ್ಮಿಕ ಗುರು ಶ್ರೀ ಅರಬಿಂದೋ ಅವರ ಜನ್ಮ‌ ದಿನದಂದು ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿಗಳು ತಮ್ಮ ಪೋಸ್ಟ್ ನಲ್ಲಿ ಶ್ರೀ ಅರೋಬಿಂದೋ ಅವರ ಅಮರ ಕೊಡುಗೆಗಳು ಮತ್ತು ಭಾರತದ ರಾಷ್ಟ್ರೀಯತೆಯ ಮೇಲೆ ಅವರು ಬೀರಿದ ಆಳವಾದ ಪ್ರಭಾವದ ಬಗ್ಗೆ ಬೆಳಕು ಚೆಲ್ಲಿದ್ದಾರೆ. 

ಪ್ರಧಾನಮಂತ್ರಿ ಮೋದಿ ಅವರು ತಮ್ಮ ಗೌರವ ನಮನದಲ್ಲಿ ಹೀಗೆ ಬರೆದಿದ್ದಾರೆ:

“ಶ್ರೀ ಅರಬಿಂದೋ ಅವರಿಗೆ ಅವರ ಜನ್ಮ ದಿನದಂದು ಗೌರವ ನಮನಗಳು. ತತ್ವಜ್ಞಾನಿ, ಚಿಂತಜರು ಮತ್ತು ಆಧ್ಯಾತ್ಮಿಕ ಸಾಧಕರಾಗಿ ಅವರ ಗಮನಾರ್ಹ ಕೊಡುಗೆಗೆ ಅವರು ಸದಾ ಸ್ಮರಣೀಯರು. ರಾಷ್ಟ್ರ ಜಾಗೃತಿಗೆ ಅವರು ನೀಡಿರುವ ಆದ್ಯತೆ ಪೀಳಿಗೆಗಳಿಗೆ ಪ್ರೇರಣಾದಾಯಕ. ಅವರ ಕಲ್ಪನೆಯ ಭಾರತ ಸಾಕಾರಗೊಳಿಸಲು ನಾವು ಬದ್ಧ.”

 

 

*****


(Release ID: 2045559) Visitor Counter : 47