ಪ್ರಕಟಣಾ ದಿನಾಂಕ:
12 AUG 2024 8:08PM by PIB Bengaluru
ಇಂದು #HarGharTiranga (ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ) ಅಭಿಯಾನದಲ್ಲಿ ಭಾಗವಹಿಸಿದ ಸೂರತ್ ಜನರ ಭಾವೋದ್ರಿಕ್ತ ಮನೋಭಾವದ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಹರ್ಷ ಸಾಂಘ್ವಿ ಅವರ ವಿಡಿಯೊ ಪೋಸ್ಟ್ ಗೆ ಪ್ರತಿಕ್ರಿಯಿಸಿದ ಪ್ರಧಾನ ಮಂತ್ರಿಗಳು ಎಕ್ಸ್ ನಲ್ಲಿ:
"ಸೂರತ್ ಎಲ್ಲವನ್ನೂ ಉತ್ಸಾಹದಿಂದ ಮಾಡುತ್ತದೆ ಮತ್ತು #HarGharTiranga ಅಭಿಯಾನ ಇದಕ್ಕೆ ಹೊರತಾಗಿಲ್ಲ! ಸೂರತ್ ಜನರ ಚೈತನ್ಯದ ಬಗ್ಗೆ ಹೆಮ್ಮೆಪಡುತ್ತೇನೆ.’’ ಎಂದು ಬರೆದುಕೊಂಡಿದ್ದಾರೆ.
*****