ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಶ್ವ ಸಿಂಹ ದಿನದ ಸಂದರ್ಭದಲ್ಲಿ ಶುಭ ಕೋರಿದ ಪ್ರಧಾನಮಂತ್ರಿ

Posted On: 10 AUG 2024 9:03AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ವಿಶ್ವ ಸಿಂಹ ದಿನದ ಶುಭ ಸಂದರ್ಭದಲ್ಲಿ, ಸಿಂಹ ಸಂರಕ್ಷಣೆ ಮತ್ತು ಸಂರಕ್ಷಣಾ ಕಾರ್ಯದಲ್ಲಿ ತೊಡಗಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. 2024ರ ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆಯನ್ನು ಶ್ರೀ ಮೋದಿಯವರು ಪ್ರಸ್ತಾಪಿಸಿದ್ದು, ದೊಡ್ಡ ಬೆಕ್ಕುಗಳನ್ನು ರಕ್ಷಿಸುವ ಸರ್ಕಾರದ ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ. ಇದಕ್ಕಾಗಿ ವಿಶ್ವದಾದ್ಯಂತ ದೊರೆತ ಪ್ರೋತ್ಸಾಹದಾಯಕ ಪ್ರತಿಕ್ರಿಯೆಯ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.

ಗುಜರಾತ್ ನ ಗಿರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿ, ಗುಜರಾತ್ ಜನರ ಆತಿಥ್ಯವನ್ನು ಸ್ವೀಕರಿಸುತ್ತಾ, ಅವರು ಸಿಂಹಗಳನ್ನು ರಕ್ಷಿಸಲು ಕೈಗೊಂಡ ಪ್ರಯತ್ನಗಳನ್ನು ವೀಕ್ಷಿಸಲು ಪ್ರಧಾನಮಂತ್ರಿ ಮೋದಿಯವರು ಎಲ್ಲಾ ವನ್ಯಜೀವಿ ಪ್ರೇಮಿಗಳಿಗೆ ಆಹ್ವಾನ ನೀಡಿದರು.

Xನ ಟ್ವೀಟ್ ಥ್ರೆಡ್ ಅನ್ನು ಪೋಸ್ಟ್ ಮಾಡಿದ ಶ್ರೀ ಮೋದಿಯವರು:

"ವಿಶ್ವ ಸಿಂಹ ದಿನದಂದು, ಸಿಂಹಗಳ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ. ಈ ಭವ್ಯವಾದ ದೊಡ್ಡ ಬೆಕ್ಕುಗಳನ್ನು ರಕ್ಷಿಸುವ ಬದ್ಧತೆಯನ್ನು ನಾವು ಹೊಂದಿದ್ದೇವೆ. ನಮಗೆಲ್ಲರಿಗೂ ತಿಳಿದಿರುವಂತೆ, ಗುಜರಾತ್ ನ ಗಿರ್ ರಾಷ್ಟ್ರೀಯ ಉದ್ಯಾನವನವು ಸಿಂಹಗಳಿಗೆ ನೆಲೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಅವುಗಳ ಸಂಖ್ಯೆಯು ಗಮನಾರ್ಹವಾಗಿ ಹೆಚ್ಚಾಗಿದ್ದು, ಇದು ಸಂತಸದ ಸುದ್ದಿಯಾಗಿದೆ."

"ಈ ವರ್ಷದ ಫೆಬ್ರವರಿಯಲ್ಲಿ, ದೊಡ್ಡ ಬೆಕ್ಕುಗಳು ವಾಸಿಸುತ್ತಿರುವ ವಿಶ್ವದ ಎಲ್ಲಾ ರಾಷ್ಟ್ರಗಳನ್ನು ಒಟ್ಟುಗೂಡಿಸಲು ಅಂತರರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ ಸ್ಥಾಪಿಸಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಇದು ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸಲು ಸಮಗ್ರ ವಿಧಾನವನ್ನು ರೂಪಿಸುವ ನಮ್ಮ ಪ್ರಯತ್ನವಾಗಿದೆ. ಈ ನಿಟ್ಟಿನಲ್ಲಿ ಸಮುದಾಯದ ಎಲ್ಲಾ ಪ್ರಯತ್ನಗಳನ್ನು ಇದು ಉತ್ತೇಜಿಸುತ್ತದೆ. ಈ ಪ್ರಯತ್ನಕ್ಕೆ ಜಾಗತಿಕವಾಗಿ ಪ್ರೋತ್ಸಾಹದಾಯಕ ಪ್ರತಿಕ್ರಿಯೆ ಸಿಗುತ್ತಿದೆ."

"ಭವ್ಯವಾದ ಏಷ್ಯಾಟಿಕ್ ಸಿಂಹವನ್ನು ನೋಡಲು ನಾನು ಎಲ್ಲಾ ವನ್ಯಜೀವಿ ಪ್ರೇಮಿಗಳನ್ನು ಗಿರ್ ಗೆ ಆಹ್ವಾನಿಸುತ್ತೇನೆ. ಇದು ಸಿಂಹಗಳನ್ನು ರಕ್ಷಿಸುವ ನಮ್ಮ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ, ಅಂತೆಯೇ ಎಲ್ಲರಿಗೂ ಗುಜರಾತ್ ಜನರ ಆತಿಥ್ಯವನ್ನು ಸ್ವೀಕರಿಸಲು ಸಹ ಅವಕಾಶವನ್ನು ನೀಡುತ್ತದೆ" ಎಂದು ಹೇಳಿದ್ದಾರೆ.

 

 

*****


(Release ID: 2044254) Visitor Counter : 41