ಪ್ರಧಾನ ಮಂತ್ರಿಯವರ ಕಛೇರಿ
ಕಂಚಿನ ಪದಕ ವಿಜೇತರಾದ ಮನು ಭಾಕರ್ ಮತ್ತು ಸರಬ್ ಜೋತ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ
Posted On:
30 JUL 2024 1:38PM by PIB Bengaluru
ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ಶೂಟರ್ ಗಳಾದ ಮನು ಭಾಕರ್ ಮತ್ತು ಸರಬ್ ಜೋತ್ ಅವರುಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.
ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ :
“ನಮ್ಮ ಶೂಟರ್ ಗಳು ನಮ್ಮ ಹೆಮ್ಮೆ!
#Olympics ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ @realmanubhaker ಮತ್ತು ಸರಬ್ ಜೋತ್ ಸಿಂಗ್ ಅವರುಗಳಿಗೆ ಅಭಿನಂದನೆ. ಇಬ್ಬರೂ ಅಪ್ರತಿಮ ಕೌಶಲ್ಯ ಮತ್ತು ತಂಡ ಕಾರ್ಯನಿರ್ವಹಣೆ ತೋರಿದ್ದಾರೆ. ಇದು ಭಾರತಕ್ಕೆ ಅಪರಿಮಿತ ಹರ್ಷ.
ಮನು ಅವರು ಸತತ ಎರಡನೇ ಬಾರಿಗೆ ಒಲಿಂಪಿಕ್ ಪದಕ ಗೆದ್ದಿದ್ದು, ತಮ್ಮ ಸ್ಥಿರ ಮಹೋನ್ನತ ಮತ್ತು ಬದ್ಧ ಪ್ರದರ್ಶನ ತೋರಿದ್ದಾರೆ. #Cheer4Bharat”.
*****
(Release ID: 2038968)
Visitor Counter : 57
Read this release in:
Tamil
,
English
,
Urdu
,
Marathi
,
Hindi
,
Hindi_MP
,
Bengali
,
Assamese
,
Manipuri
,
Punjabi
,
Gujarati
,
Odia
,
Telugu
,
Malayalam