ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಸ್ಸಾಂನ ಚರೈಡಿಯೊ ಮೈದಾನಂ ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಗೆ ಸೇರ್ಪಡೆಗೊಂಡಿರುವುದಕ್ಕೆ ಸಂತಸ ಮತ್ತು ಹೆಮ್ಮೆ ವ್ಯಕ್ತಪಡಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 26 JUL 2024 2:50PM by PIB Bengaluru

ಅಸ್ಸಾಂನ ಚರೈಡಿಯೋ ಮೊಯಿದಮ್‌ಗಳು ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಗೆ ಸೇರ್ಪಡೆಗೊಡಿರುವುದು ತೀವ್ರ ಸಂತಸ ಮತ್ತು ಹೆಮ್ಮೆಯನ್ನು ತಂದಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತಿಳಿಸಿದ್ದಾರೆ. ಇದು ಭಾರತಕ್ಕೆ ಅಪಾರ ಸಂತೋಷ ಮತ್ತು ಹೆಮ್ಮೆಯ ವಿಷಯ ಎಂದು ಶ್ರೀ ಮೋದಿ ಹೇಳಿದರು.

ಚರೈಡಿಯೊದಲ್ಲಿನ ಮೊಯಿದಮ್‌ಗಳು ವೈಭವಯುತವಾದ ಅಹೋಮ್ ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ. ಇದು ಪೂರ್ವಜರಿಗೆ ಅತ್ಯಂತ ಗೌರವವನ್ನು ನೀಡುತ್ತದೆ ಎಂದು ಶ್ರೀ ಮೋದಿ ಅವರು ಹೇಳಿದರು.

UNESCO ವಿಶ್ವ ಪರಂಪರೆಯ ಪಟ್ಟಿಯ ಬಗ್ಗೆ UNESCO X ಪೋಸ್ಟ್‌ಗೆ ಪ್ರತಿಕ್ರಿಯಿಸಿ ಪ್ರಧಾನ ಮಂತ್ರಿ ಸಂದೇಶ ನೀಡಿದ್ದಾರೆ.

“ಇದು ಭಾರತಕ್ಕೆ ಅಪಾರ ಸಂತೋಷ ಮತ್ತು ಹೆಮ್ಮೆಯ ವಿಷಯ!

ಚರೈಡಿಯೊದಲ್ಲಿನ ಮೊಯಿದಮ್‌ಗಳು ಅದ್ಭುತವಾದ ಅಹೋಮ್ ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ, ಇದು ಪೂರ್ವಜರಿಗೆ ಅತ್ಯಂತ ಗೌರವವನ್ನು ನೀಡುತ್ತದೆ. ಹೆಚ್ಚಿನ ಜನರು ಅಹೋಮ್ ಆಳ್ವಿಕೆ ಮತ್ತು ಸಂಸ್ಕೃತಿಯ ಬಗ್ಗೆ ಕಲಿಯುತ್ತಾರೆ ಎಂದು ನಾನು ಭಾವಿಸುತ್ತೇನೆ.

ಮೊಯಿದಮ್‌ಗಳು #WorldHeritage ವಿಶ್ವ ಪರಂಪರೆಯ ಪಟ್ಟಿಗೆ ಸೇರಿದ್ದಕ್ಕೆ ಸಂತೋಷವಾಗಿದೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2037546) ವಿಸಿಟರ್ ಕೌಂಟರ್ : 93