ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರತಿಷ್ಠಿತ ಒಲಿಂಪಿಕ್ ಆರ್ಡರ್ ಪಡೆದ ಅಭಿನವ್ ಬಿಂದ್ರಾ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದ್ದಾರೆ

प्रविष्टि तिथि: 24 JUL 2024 11:19PM by PIB Bengaluru

ಪ್ರತಿಷ್ಠಿತ ಒಲಿಂಪಿಕ್ ಆರ್ಡರ್ ಪ್ರಶಸ್ತಿ ಪಡೆದಿರುವ ಅಥ್ಲೀಟ್ ಅಭಿನವ್ ಬಿಂದ್ರಾ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

2008ರ ಒಲಿಂಪಿಕ್ ಚಿನ್ನದ ಪದಕ ವಿಜೇತರಾದ ಅಭಿನವ್ ಬಿಂದ್ರಾ ಅವರು ಕ್ರೀಡೆ ಮತ್ತು ಒಲಿಂಪಿಕ್ ಆಂದೋಲನಕ್ಕೆ ನೀಡಿದ ಗಮನಾರ್ಹ ಕೊಡುಗೆಗಳಿಗಾಗಿ ಪ್ರಧಾನಮಂತ್ರಿ ಶ್ರೀ ಮೋದಿ ಶ್ಲಾಘಿಸಿದರು.

ಈ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಬರೆದುಕೊಂಡಿರುವ ಅವರು;

"ಅಭಿನವ್ ಬಿಂದ್ರಾ ಅವರಿಗೆ ಪ್ರತಿಷ್ಠಿತ ಒಲಿಂಪಿಕ್ ಆರ್ಡರ್ ನೀಡಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ಅವರಿಗೆ ಅಭಿನಂದನೆಗಳು. ಕ್ರೀಡಾಪಟುವಾಗಿ ಅಥವಾ ಮುಂಬರುವ ಕ್ರೀಡಾಪಟುಗಳಿಗೆ ಮಾರ್ಗದರ್ಶಕರಾಗಿ, ಬಿಂದ್ರಾ ಅವರು ಕ್ರೀಡೆ ಮತ್ತು ಒಲಿಂಪಿಕ್ ಆಂದೋಲನಕ್ಕೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ." ಎಂದು ಹೇಳಿದ್ದಾರೆ.

 

 

*****


(रिलीज़ आईडी: 2037325) आगंतुक पटल : 72
इस विज्ञप्ति को इन भाषाओं में पढ़ें: English , Urdu , Marathi , हिन्दी , Hindi_MP , Assamese , Bengali , Manipuri , Punjabi , Gujarati , Odia , Tamil , Telugu , Malayalam