ಹಣಕಾಸು ಸಚಿವಾಲಯ
azadi ka amrit mahotsav

ಹೊಸ ತೆರಿಗೆ ವ್ಯವಸ್ಥೆಯನ್ನು ಹೆಚ್ಚು ಆಕರ್ಷಕಗೊಳಿಸಿದ ಸರ್ಕಾರ


ಪ್ರಮಾಣಿತ ಕಡಿತವು (ರಿಯಾಯತಿ)  ₹ 50,000 ದಿಂದ ₹ 75,000 ಕ್ಕೆ ಏರಿಕೆ

ಸಂಬಳ ಪಡೆಯುವ ಉದ್ಯೋಗಿ ₹ 17,500 ವರೆಗೆ ಉಳಿಕೆ

Posted On: 23 JUL 2024 1:14PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ (ಸಾಂಸ್ಥಿಕ) ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2024-25ರ ಕೇಂದ್ರ ಬಜೆಟ್ ಮಂಡಿಸುವಾಗ ಹೊಸ ತೆರಿಗೆ ವ್ಯವಸ್ಥೆ (ಆಡಳಿತ)ಯನ್ನು ಆರಿಸಿಕೊಳ್ಳುವ ಸಂಬಳ ಪಡೆಯುವ ವ್ಯಕ್ತಿಗಳು ಮತ್ತು ಪಿಂಚಣಿದಾರರಿಗೆ ತೆರಿಗೆ ವಿನಾಯಿತಿ ನೀಡಲು ಹಲವಾರು ಆಕರ್ಷಕ ಪ್ರಯೋಜನಗಳನ್ನು ಘೋಷಿಸಿದರು.

ಸಂಬಳ ಪಡೆಯುವ ಉದ್ಯೋಗಿಗಳಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50,000 ರೂ.ಗಳಿಂದ 75,000 ರೂ.ಗೆ ಹೆಚ್ಚಿಸಲು ಹಣಕಾಸು ಸಚಿವರು ಪ್ರಸ್ತಾಪಿಸಿದರು. ಅಲ್ಲದೆ, ಹೊಸ ತೆರಿಗೆ ಆಡಳಿತದ ಅಡಿಯಲ್ಲಿ ಪಿಂಚಣಿದಾರರಿಗೆ ಕುಟುಂಬ ಪಿಂಚಣಿಯ ಮೇಲಿನ ಕಡಿತವನ್ನು 15,000 ರೂ.ಗಳಿಂದ 25,000 ರೂ.ಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಇದು ಸಂಬಳ ಪಡೆಯುವ ಸುಮಾರು ನಾಲ್ಕು ಕೋಟಿ ವ್ಯಕ್ತಿಗಳು ಮತ್ತು ಪಿಂಚಣಿದಾರರಿಗೆ ಪ್ರಯೋಜನವನ್ನು ನೀಡುತ್ತದೆ.

ಶ್ರೀಮತಿ ಸೀತಾರಾಮನ್ ಅವರು ಹೊಸ ತೆರಿಗೆ ಆಡಳಿತದಲ್ಲಿ ತೆರಿಗೆ ದರ ರಚನೆಯನ್ನು ಕೆಳಗಿನಂತೆ ಪರಿಷ್ಕರಿಸಲು ಪ್ರಸ್ತಾಪಿಸಿದರು:

ಬದಲಾವಣೆಗಳ ಪರಿಣಾಮವಾಗಿ, ಹೊಸ ತೆರಿಗೆ ಆಡಳಿತದಲ್ಲಿ ಸಂಬಳ ಪಡೆಯುವ ಉದ್ಯೋಗಿಯು ವಾರ್ಷಿಕವಾಗಿ 17,500 ರೂ.ವರೆಗೆ ಆದಾಯ ತೆರಿಗೆಯನ್ನು ಉಳಿಸಬಹುದಾಗಿದೆ.

 

*****


(Release ID: 2036793) Visitor Counter : 90