ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ವಿಯೆಟ್ನಾಂ ನಾಯಕ ನ್ಯುಯೆನ್ ಫು ಟ್ರೋಂಗ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ  

Posted On: 19 JUL 2024 9:06PM by PIB Bengaluru

ವಿಯೆಟ್ನಾಂ ನ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ನ್ಯುಯೆನ್ ಫು ಟ್ರೋಂಗ್ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. 

ಪ್ರಧಾನಮಂತ್ರಿಗಳು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ :  

“ವಿಯೆಟ್ನಾಂ ನಾಯಕ, ಪ್ರಧಾನ ಕಾರ್ಯದರ್ಶಿ ನ್ಯುಯೆನ್ ಫು ಟ್ರೋಂಗ್ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಅಗಲಿದ ಗಣ್ಯರಿಗೆ ನಮ್ಮ ಗೌರವ ನಮನ. ನಮ್ಮ ತೀವ್ರ ಸಂತಾಪಗಳು ಹಾಗೂ ದುಃಖದ ಈ ಸಮಯದಲ್ಲಿ ವಿಯೆಟ್ನಾಂ ಜನರು ಮತ್ತು ನಾಯಕತ್ವದೊಂದಿಗೆ ಜೊತೆಯಾಗಿ ನಿಲ್ಲುವೆವು.

 

 

*****


(Release ID: 2034630) Visitor Counter : 43