ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಮಂತ್ರಿಯವರಿಂದ "ಮನ್ ಕಿ ಬಾತ್"ಗಾಗಿ ಮಾಹಿತಿಗಳ ಆಹ್ವಾನ
Posted On:
19 JUL 2024 12:37PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2024ರ ಜುಲೈ 28ರಂದು ನಡೆಯಲಿರುವ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ನಾಗರಿಕರಿಂದ ಹೆಚ್ಚಿನ ಮಾಹಿತಿಯನ್ನು ಆಹ್ವಾನಿಸಿದ್ದಾರೆ.
ಹಲವಾರು ನಾಗರಿಕರು, ವಿಶೇಷವಾಗಿ ಯುವಕರು, ಸಮಾಜವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಸಾಮೂಹಿಕ ಪ್ರಯತ್ನಗಳ ಬಗ್ಗೆ ಒಲವು ತೋರುತ್ತಿರುವುದನ್ನು ಅವರು ಮೆಚ್ಚಿದ್ದಾರೆ.
ಇನ್ ಪುಟ್ ಗಳನ್ನು ಇನ್ನೂ ಹಂಚಿಕೊಳ್ಳದವರಿಗೆ ಮೈಗೌ ಅಥವಾ ನಮೋ ಅಪ್ಲಿಕೇಶನ್ನಲ್ಲಿ ಹಂಚಿಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ತಮ್ಮ Xಪೋಸ್ಟ್ ನಲ್ಲಿ ಪ್ರಧಾನಮಂತ್ರಿಯವರು;
"ಈ ತಿಂಗಳ ಭಾನುವಾರ 28ರಂದು ನಡೆಯಲಿರುವ #MannKiBaat ಗಾಗಿ ನನಗೆ ಹಲವಾರು ಇನ್ ಪುಟ್ ಗಳು ಬರುತ್ತಿವೆ. ನಮ್ಮ ಸಮಾಜವನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಸಾಮೂಹಿಕ ಪ್ರಯತ್ನಗಳನ್ನು, ವಿಶೇಷವಾಗಿ ಹಲವಾರು ಯುವಕರು ಈ ಪ್ರಯತ್ನಗಳ ಬಗ್ಗೆ ಒಲವು ತೋರಿಸುವುದನ್ನು ನೋಡಿ ನನಗೆ ಸಂತೋಷವಾಗಿದೆ. ನೀವು MyGov, Namo ಆ್ಯಪ್ ನಲ್ಲಿ ಇನ್ ಪುಟ್ ಗಳನ್ನು ಹಂಚಿಕೊಳ್ಳಬಹುದು ಅಥವಾ 1800-11-7800ನಲ್ಲಿ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಿ ಕಳುಹಿಸಬಹುದು.
https://www.mygov.in/group-issue/inviting-ideas-mann-ki-baat-prime-minister-narendra-modi-28th-july-2024/" ಎಂದು ಹೇಳಿದ್ದಾರೆ.
*****
(Release ID: 2034337)
Visitor Counter : 65
Read this release in:
Telugu
,
Malayalam
,
Bengali
,
English
,
Urdu
,
Marathi
,
Hindi
,
Hindi_MP
,
Manipuri
,
Assamese
,
Punjabi
,
Gujarati
,
Odia
,
Tamil