ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಯೂರೋಪಿಯನ್ ಕಮಿಷನ್ ನ ಅಧ್ಯಕ್ಷರಾಗಿ ಪುನರಾಯ್ಕೆಯಾದ ಉರ್ಸುಲಾ ವಾನ್ ಡೆರ್ ಲೆಯನ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

ಪ್ರಕಟಣಾ ದಿನಾಂಕ: 19 JUL 2024 11:48AM by PIB Bengaluru

ಯೂರೋಪಿಯನ್‌ ಕಮಿಷನ್ ಅಧ್ಯಕ್ಷರಾಗಿ ಪುನರಾಯ್ಕೆಯಾದ ಉರ್ಸುಲಾ ವಾನ್‌ ಡೆರ್‌ ಲೆಯನ್‌ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.

ಭಾರತ ಮತ್ತು ಯೂರೋಪಿಯನ್‌ ಒಕ್ಕೂಟದ ತಾಂತ್ರಿಕ ಪಾಲುದಾರಿಕೆಯ ಬಲವರ್ಧನೆಗೆ ಒಟ್ಟಾಗಿ ಕಾರ್ಯನಿರ್ವಹಿಸಲು ಎದುರುನೋಡುತ್ತಿರುವುದಾಗಿ ಪ್ರಧಾನಮಂತ್ರಿ ಹೇಳಿದ್ದಾರೆ.

ಪ್ರಧಾನಮಂತ್ರಿಗಳು ಎಕ್ಸ್‌ ನಲ್ಲಿ ಹೀಗೆ ಪೋಸ್ಟ್‌ ಮಾಡಿದ್ಧಾರೆ:

"ಯೂರೋಪಿಯನ್‌ ಕಮಿಷನ್‌ ನ ಅಧ್ಯಕ್ಷರಾಗಿ ನಿಮ್ಮ ಪುನರಾಯ್ಕೆಗೆ ಅಭಿನಂದನೆಗಳು, @vonderleyen. ಜಾಗತಿಕ ಒಳಿತಿಗೆ ಭಾರತ – ಯೂರೋಪಿಯನ್ ಒಕ್ಕೂಟದ ತಾಂತ್ರಿಕ ಪಾಲುದಾರಿಕೆ ಬಲವರ್ಧನೆಗೆ ಒಟ್ಟಾಗಿ ಕಾರ್ಯನಿರ್ವಹಿಸಲು ಎದುರು ನೋಡುತ್ತಿದ್ದೇನೆ."
 

 

 

*****


(ಪ್ರಕಟಣೆ ಐ.ಡಿ.: 2034268) ವಿಸಿಟರ್ ಕೌಂಟರ್ : 115