ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನೇಪಾಳದ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಕೆ.ಪಿ.ಶರ್ಮಾ ಓಲಿ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ

Posted On: 15 JUL 2024 11:39AM by PIB Bengaluru

ನೇಪಾಳದ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಶ್ರೀ.ಕೆ.ಪಿ.ಶರ್ಮಾ ಓಲಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ  ಅಭಿನಂದಿಸಿದ್ದಾರೆ. ಭಾರತ ಮತ್ತು ನೇಪಾಳ ನಡುವಿನ ಸ್ನೇಹದ ಆಳ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಮತ್ತು ಪರಸ್ಪರ ಸಹಕಾರ ವಿಸ್ತರಿಸಲು ನಿಕಟವಾಗಿ ಕಾರ್ಯನಿರ್ವಹಿಸುವ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಶ್ರೀ ನರೇಂದ್ರ ಮೋದಿ ಅವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

“ನೇಪಾಳದ ಪ್ರಧಾನಿಯಾಗಿ ನಿಮ್ಮ ಆಯ್ಕೆಗೆ ಅಭಿನಂದನೆಗಳು @kpsharmaoli. ನಮ್ಮ ಜನರ ಪ್ರಗತಿ ಮತ್ತು ಸಮೃದ್ಧಿಗಾಗಿ ಉಭಯ ದೇಶಗಳ ನಡುವಿನ ಆಳವಾದ ಮೈತ್ರಿ ಬಾಂಧವ್ಯವನ್ನು ಇನ್ನಷ್ಟು ಬಲಗೊಳಿಸಲು ಮತ್ತು ಪರಸ್ಪರ ಸಹಕಾರ ವಿಸ್ತರಿಸಲು ನಿಕಟವಾಗಿ ಕಾರ್ಯನಿರ್ವಹಿಸಲು ಎದುರುನೋಡುತ್ತಿದ್ದೇನೆ‌. @PM_nepal_”.

 

 

*****


(Release ID: 2033306) Visitor Counter : 48